ಗಂಗಾವತಿ ಕನ್ನಡ ಜಾಗೃತಿ ಭವನದಲ್ಲಿ ಅರಳಹಳ್ಳಿಯ ಪಂ.ಲಿಂ.ಶರಣಬಸವಾರ್ಯ ತಾತಾನವರ ಪುಣ್ಯಸ್ಮರಣೋತ್ಸವ ನಿಮಿತ್ತ ನಕ್ಷತ್ರ ಸಾಹಿತ್ಯ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ನಿಂದ ಹಮ್ಮಿಕೊಂಡಿದ್ದ ವೈದ್ಯ ಸಮಾವೇಶ ಮತ್ತು ಆರೋಗ್ಯ ತಪಾಸಣೆ ಉಚಿತ ಶಿಬಿರದಲ್ಲಿ ರೋಗಿಗನ್ನು ಶನಿವಾರ ತಪಾಸಿಸಲಾಯಿತು. ವೈದ್ಯರಾದ ಷಣ್ಮುಖಸ್ವಾಮಿ ಕಡ್ಡಿಪುಡಿ ಸಿದ್ದರಾಮೇಶ, ಸಹನಾ ಇತರರಿದ್ದರು. –– 
ಜಿಲ್ಲೆ

ಆರೋಗ್ಯದಿಂದ ಸಾಧನೆಗೆ ದಾರಿ

ಗಂಗಾವತಿ: ಧಾರ್ಮಿಕ ಚಟುವಟಿಕೆಗಳ ಜತೆಗೆ ಆರೋಗ್ಯ ರಕ್ಷಣೆಗೆ ಪೂರಕವಾದ ಕಾರ್ಯಕ್ರಮಗಳು ಅತ್ಯಗತ್ಯ. ಬಡ ಜನರ ಆರೋಗ್ಯ ಸುರಕ್ಷತೆಗೆ ಗಮನಹರಿಸಿ ಎಂದು ಕಾಡಾ ಮಾಜಿ ಅಧ್ಯಕ್ಷ ಬಿ.ಎಚ್.ಎಂ.ತಿಪ್ಪೇರುದ್ರಸ್ವಾಮಿ ಹೇಳಿದರು.

ನಗರದ ಕನ್ನಡ ಜಾಗೃತಿ ಭವನದಲ್ಲಿ ಅರಳಹಳ್ಳಿಯ ಪಂ.ಲಿಂ.ಶರಣಬಸವಾರ್ಯ ತಾತಾನವರ ಪುಣ್ಯಸ್ಮರಣೋತ್ಸವ ನಿಮಿತ್ತ ನಕ್ಷತ್ರ ಸಾಹಿತ್ಯ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ನಿಂದ ಶನಿವಾರ ಹಮ್ಮಿಕೊಂಡಿದ್ದ ವೈದ್ಯ ಸಮಾವೇಶ ಮತ್ತು ಆರೋಗ್ಯ ತಪಾಸಣೆ ಉಚಿತ ಶಿಬಿರದಲ್ಲಿ ಮಾತನಾಡಿದರು.

ರೋಗ್ಯ ಕಾಪಾಡಿಕೊಂಡರೇ ಎಲ್ಲವನ್ನೂ ಪಡೆಯಬಹುದಾಗಿದ್ದು, ಸಾಧನೆಗೂ ದಾರಿಯಾಗಲಿದೆ. ಧರ್ಮ ಕಾರ್ಯಕ್ರಮಗಳ ಜತೆಗೆ ಕಲೆ, ಸಂಸ್ಕೃತಿ ಮತ್ತು ವೈದ್ಯಕೀಯ ಕ್ಷೇತ್ರವನ್ನು ಬಲಪಡಿಸುತ್ತಿರುವ ಅರಳಹಳ್ಳಿ ಮಠ ಇತರೆ ಸಂಘಟನೆಗಳಿಗೆ ಮಾದರಿಯಾಗಿದೆ ಎಂದರು.

ಜಿಪಂ ಮಾಜಿ ಸದಸ್ಯ ಎಚ್.ಎಂ.ಸಿದ್ರಾಮಯ್ಯಸ್ವಾಮಿ ಮಾತನಾಡಿ, ಧಾರ್ಮಿಕ ಚಟುವಟಿಕೆಗಳ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡಬೇಕಿದೆ ಎಂದರು. ಹೃದಯ, ನರ, ಕಣ್ಣು, ಮೂತ್ರಪಿಂಡ ಸೇರಿ ವಿವಿಧ ಕಾಯಿಲೆ ಬಳಲುತ್ತಿರುವ 350ಕ್ಕೂ ಹೆಚ್ಚು ರೋಗಗಳನ್ನು ತಪಾಸಿಸಲಾಯಿತು.

ತಜ್ಞ ವೈದ್ಯರಾದ ಸಿದ್ಧರಾಮೇಶ, ಶಿವಕುಮಾರ ಮಾಲಿ ಪಾಟೀಲ್, ಕಾರ್ತಿಕ್ ಜಂಬುನಾಥಗೌಡ, ಶ್ವೇತಾ, ಸುಷ್ಮಾ, ಸ್ನೇಹಲತಾ ಗದ್ದಡಕಿ, ಜಿ.ಮೋಹನ್, ಆರ್.ಎಚ್.ವಿನೋದಕುಮಾರ, ಅಮರೇಶ ಚಿತ್ತರಕಿ, ಸಹನಾ, ಡಾ.ಷಣ್ಮುಖಸ್ವಾಮಿ ಕಡ್ಡಿಪುಡಿ, ಆಫ್ರೀನ್ ಇತರರಿದ್ದರು.

ಶ್ರೀರಾಜರಾಜೇಶ್ವರಿ ಜಾನಪದ ಸಾಂಸ್ಕೃತಿಕ ಕಲಾಭಿವೃದ್ಧಿ ಸಂಘ,ಶ್ರೀ ಹಾನಗಲ್ಲ ಕುಮಾರೇಶ್ವರ ವೇದ ಮತ್ತು ಸಂಸ್ಕೃತ ಪಾಠಶಾಲೆ, ಆತ್ರೇಯ ಆಯುರ್ವೇದ ಪ್ರತಿಷ್ಠಾನ, ಸ್ಫೂರ್ತಿ ಆಯುರ್ವೇದಿಕ್ ಮೆಡಿಕಲ್ ಕಾಲೇಜ್, ಡಾ. ಎಸ್.ವಿ ಸವಡಿ ಆಯುರ್ವೇದ ಆಸ್ಪತ್ರೆ, ಪ್ರಸಾದ ಲೋಕಸೇವಾ ಟ್ರಸ್ಟ್ ಸಹಯೋಗದೊಂದಿಗೆ ಶಿಬಿರ ಆಯೋಜಿಸಲಾಗಿತ್ತು.