ಗಂಗಾವತಿ ಸಿಡಿಪಿಒ ಕಚೇರಿ ಮುಂದೆ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ತಾಲೂಕು ಸಮಿತಿ ಸದಸ್ಯರು ಗುರುವಾರ ಪ್ರತಿಭಟನೆ ನಡೆಸಿದರು. ತಾಲೂಕು ಅಧ್ಯಕ್ಷೆ ಜಿ.ಹುಲಿಗೆಮ್ಮ, ಕಾರ್ಯದರ್ಶಿ ಮಂಜುನಾಥ ಡಗ್ಗಿ, ಪದಾಧಿಕಾರಿಗಳಾದ ನಿರುಪಾದಿ ಬೆಣಕಲ್, ಎಂ.ಬಸವರಾಜ, ಹುಸೇನಪ್ಪ, ಮರಿನಾಗಪ್ಪ ಡಗ್ಗಿ ಇತರರಿದ್ದರು.  
ಜಿಲ್ಲೆ

ಮರುಸಮೀಕ್ಷೆ ಮಾಡಿ ವರದಿ ಸಲ್ಲಿಸಲಿ

ಕುರುವತ್ತಿ ಶ್ರೀಕಾಂತಪ್ಪ

ಗಂಗಾವತಿ: ವಿಮುಕ್ತ ದೇವದಾಸಿ ಮತ್ತು ಕುಟುಂಬ ಸದಸ್ಯರನ್ನು ಗಣತಿ ಪಟ್ಟಿಯಲ್ಲಿ ಸೇರಿಸುವುದರ ಜತೆಗೆ ಪುನರ್ವಸತಿ ಕಲ್ಪಿಸುವಂತೆ ಒತ್ತಾಯಿಸಿ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ತಾಲೂಕು ಸಮಿತಿ ಸದಸ್ಯರು ನಗರದ ಸಿಡಿಪಿಒ ಕಚೇರಿ ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು.

ಪುನರ್ವಸತಿ ವಂಚಿತ ವಿಮುಕ್ತ ದೇವದಾಸಿ ಕುಟುಂಬದವರೊಂದಿಗೆ ಪ್ರತಿಭಟನೆ ನಡೆಸಿದ ಸಮಿತಿ ಸದಸ್ಯರು, ಬೇಡಿಕೆ ಮನವಿಯನ್ನು ಸಿಡಿಪಿಒ ಜಯಶ್ರೀ ರಾಜಪುರೋಹಿತ್‌ಗೆ ಸಲ್ಲಿಸಿದರು.

ಸಂಘದ ತಾಲೂಕು ಕಾರ್ಯದರ್ಶಿ ಮಂಜುನಾಥ ಡಗ್ಗಿ ಮಾತನಾಡಿ, ದೇವದಾಸಿ ನಿಷೇಧ ಮಸೂದೆ ಅಂಗೀಕರಿಸಿರುವುದು ಸ್ವಾಗತಾರ್ಹವಾಗಿದ್ದು, ಗಣತಿಪಟ್ಟಿಯಲ್ಲಿರುವ ವಿಮುಕ್ತ ದೇವದಾಸಿ ಮಹಿಳೆಯರು ಹಾಗೂ ಕುಟುಂಬ ಸದಸ್ಯರ ಮರುಸಮೀಕ್ಷೆ ಮಾಡಬೇಕು. ಗಣತಿಯಲ್ಲಿ ವಿಮುಕ್ತ ದೇವದಾಸಿಯರನ್ನು ಕೈಬಿಟ್ಟಿದ್ದು, ಕುಟುಂಬ ಸದಸ್ಯರಿಗೆ ಅನ್ಯಾಯವಾಗಿದೆ.

ಬಹುತೇಕ ಕುಟುಂಬಗಳಿಗೆ ಪ್ರಮಾಣ ಪತ್ರ ಸಿಕ್ಕಿಲ್ಲ, ಶಿಕ್ಷಣ ಮತ್ತು ಉದ್ಯೋಗದಿಂದ ವಂಚಿತರಾಗಿದ್ದಾರೆ ಎಂದರು. ತಾಲೂಕು ಅಧ್ಯಕ್ಷೆ ಜಿ.ಹುಲಿಗೆಮ್ಮ, ಪದಾಧಿಕಾರಿಗಳಾದ ನಿರುಪಾದಿ ಬೆಣಕಲ್, ಎಂ.ಬಸವರಾಜ ಇತರರಿದ್ದರು.