ಪುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಹಿನ್ನೆಲೆಯಲ್ಲಿ ಗಂಗಾವತಿ ಗಾಂಧಿ ವೃತ್ತದ ಬಳಿ ಪುಟ್‌ಪಾತ್‌ನಲ್ಲಿ ವಹಿವಾಟು ನಡೆಸುತ್ತಿದ್ದ ಅಂಗಡಿಕಾರರ ವಸ್ತುಗಳನ್ನು ನಗರಸಭೆ ಅಧಿಕಾರಿಗಳು ಬುಧವಾರ ಜಪ್ತಿ ಮಾಡಿದರು.  
ಜಿಲ್ಲೆ

ಪುನಃ ವಹಿವಾಟು ನಡೆಸಿದರೆ ಲೈಸನ್ಸ್ ರದ್ದು, ಆರೋಗ್ಯ ನಿರೀಕ್ಷಕ ಎ.ನಾಗರಾಜ್ ಎಚ್ಚರಿಕೆ

ಕುರುವತ್ತಿ ಶ್ರೀಕಾಂತಪ್ಪ

ಗಂಗಾವತಿ: ನಗರದ ಪುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ನಗರಸಭೆ ಕೈಗೆತ್ತಿಕೊಂಡಿದ್ದು, ನಗರದ ಗಾಂಧಿ ವೃತ್ತದ ಬಳಿ ಪುಟ್‌ಪಾತ್‌ನಲ್ಲಿ ವಹಿವಾಟು ನಡೆಸುತ್ತಿದ್ದ ಅಂಗಡಿಕಾರರ ವಸ್ತುಗಳನ್ನು ಬುಧವಾರ ಜಪ್ತಿ ಮಾಡಲಾಯಿತು.

ನಗರದ ಪ್ರಮುಖ ರಸ್ತೆಯಲ್ಲಿ ಪುಟ್‌ಪಾತ್‌ಗಳನ್ನು ಅಂಗಡಿಕಾರರು ಒತ್ತುವರಿ ಮಾಡಿಕೊಂಡಿದ್ದು, ಪಾದಾಚಾರಿಗಳು ರಸ್ತೆಯಲ್ಲಿ ಸಂಚರಿಸುವ ಸ್ಥಿತಿ ಬಂದಿದೆ. ಇದರಿಂದ ಟ್ರಾಫಿಕ್ ಸಮಸ್ಯೆಯಾಗಿದ್ದು, ತೆರವಿಗೆ ಸಾರ್ವಜನಿಕರ ಒತ್ತಡ ಹೆಚ್ಚಾಗಿತ್ತು. ಅದರಂತೆ ಸ್ಥಳೀಯ ಜೆಎಂಎ್ಸಿ ನ್ಯಾಯಾಧೀಶರು ತೆರವಿನ ಬಗ್ಗೆ ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದರು.

ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆದಿದ್ದು, ಪುಟ್‌ಪಾತ್ ಮೇಲಿದ್ದ ಗೂಡಂಗಡಿ ಸೇರಿ ಮಾರಾಟದ ವಸ್ತುಗಳನ್ನು ಜಪ್ತಿ ಮಾಡಲಾಯಿತು. ನಗರದ ದುರ್ಗಮ್ಮ ದೇವಾಲಯದಿಂದ ಸಿಬಿಎಸ್ ವೃತ್ತದವರಿಗೂ ಕಾರ್ಯಾಚರಣೆ ನಡೆದಿದ್ದು, ಕೆಲ ಅಂಗಡಿಕಾರರು ವಿರೋಧಿಸಿದ ಘಟನೆಯೂ ನಡೆಯಿತು.

ಆರೋಗ್ಯ ನಿರೀಕ್ಷಕ ಎ.ನಾಗರಾಜ್ ಮಾತನಾಡಿ, ಪುಟ್‌ಪಾತ್ ತೆರವಿಗೆ ಒತ್ತುವರಿದಾರರಿಗೆ ಹಲವು ಬಾರಿ ಸೂಚನೆ ನೀಡಿದರೂ ಸ್ಪಂದಿಸಿಲ್ಲ. ಪುಟ್‌ಪಾತ್‌ನಲ್ಲಿ ವಹಿವಾಟು ನಡೆಸುವು ಅಂಗಡಿಕಾರರ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಪುನಃ ಪುಟ್‌ಪಾತ್ ಅತಿಕ್ರಮಿಸಿ ವಹಿವಾಟು ಶುರು ಮಾಡಿದರೆ ಲೈಸೆನ್ಸ್ ರದ್ದುಪಡಿಸಲಾಗುವುದು. ಕಾರ್ಯಾಚರಣೆ ಮುಂದುವರಿಯಲಿದ್ದು, ಅಂಗಡಿಕಾರರು ಸ್ವಯಂಪ್ರೇರಣೆಯಿಂದ ತೆರವುಗೊಳಿಸುವಂತೆ ಸೂಚನೆ ನೀಡಿದರು.

ಆರೋಗ್ಯ ನಿರೀಕ್ಷಕರಾದ ತಳವಾರ ಶೋಭಾ, ರಾಧಿಕಾರ, ಮೇಲ್ವಿಚಾರಕರಾದ ಲಕ್ಷ್ಮಣ, ಯೂಸ್ೂ ಸೇರಿ ಪೌರ ಕಾರ್ಮಿಕರಿದ್ದರು.