ಗಂಗಾವತಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳನ್ನು ಅರ್ಹಲಾನುಭವಿಗಳಿಗೆ ತಲುಪಿಸಬೇಕಿದ್ದು, ಪಡಿತರ ಕಿಟ್‌ಗಳ ವಿತರಣೆಗೆ ತಯಾರಿ ಮಾಡಿಕೊಳ್ಳುವಂತೆ ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕಾಧ್ಯಕ್ಷ ಡಾ.ಕೆ.ವೆಂಕಟೇಶ ಬಾಬು ತಿಳಿಸಿದರು.
ನಗರದ ತಾಪಂ ಮಂಥನ ಸಭಾಂಗಣದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ವಿಶೇಷ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದರು.
ಸಿಎಂ ಸಿದ್ದರಾಮಯ್ಯ ದೂರದೃಷ್ಟಿಯಿಂದ ರೂಪಿತಗೊಂಡ ಪಂಚ ಗ್ಯಾರಂಟಿ ಯೋಜನೆಗಳು ಜನಮನ ಗೆದ್ದಿದ್ದು, ಶೇ.90 ಜನರಿಗೆ ತಲುಪಿವೆ. ಕೆಲವೆಡೆ ತಾಂತ್ರಿಕ ಕಾರಣ ಮತ್ತು ಅಗತ್ಯ ದಾಖಲೆಗಳ ಕೊರತೆಯಿಂದ ಹಿನ್ನಡೆಯಾಗಿದ್ದರೂ ಸರಿಪಡಿಸುವ ಕೆಲಸವಾಗುತ್ತಿದೆ. ಗೃಹಲಕ್ಷ್ಮಿ 56,047, ಗೃಹಜ್ಯೋತಿ 58,876, ಅನ್ನಭಾಗ್ಯ 1,99,707 ಮತ್ತು ಯುವನಿಧಿ ಯೋಜನೆಯಡಿ 20, 975 ಲಾನುಭವಿಗಳು ಸೌಲಭ್ಯ ಪೆದುಕೊಂಡಿದ್ದಾರೆ. ಯೋಜನೆಯಿಂದ ಸಂತೃಪ್ತರಾದವರ ಅಭಿಪ್ರಾಯ ಸಂಗ್ರಹಿಸಲಾಗುತ್ತಿದ್ದು, ವಿಡಿಯೋ ಚಿತ್ರೀಕರಣ ಮೂಲಕ ಜನರೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಜವಾಬ್ದಾರಿ ಅಧಿಕಾರಿಗಳ ಮೇಲಿದ್ದು, ಸಮಿತಿ ಸದಸ್ಯರು ಗಮನಹರಿಸುವಂತೆ ಸಲಹೆ ನೀಡಿದರು.
ಪಂಚ ಗ್ಯಾರಂಟಿ ಯೋಜನೆಗೆ ಸಬಂಧಿಸಿದಂತೆ ಸಿಡಿಪಿಒ ಜಯಶ್ರೀರಾಜಪುರೋಹಿತ್, ಆಹಾರ ಇಲಾಖೆ ಶಿರಸ್ತೇದಾರ್ ಸುಹಾಸ್, ಕೆಕೆಆರ್‌ಟಿಸಿ ಘಟಕ ವ್ಯವಸ್ಥಾಪಕ, ಜೆಸ್ಕಾಂ ಎಇ ಚನ್ನಬಸವ ಮತ್ತು ಯುವನಿಧಿ ಪ್ರತಿನಿಧಿ ಹನುಮೇಶ ಮಾಹಿತಿ ನೀಡಿದರು.
ತಾಪಂ ಇಒ ರಾಮರೆಡ್ಡಿ ಪಾಟೀಲ್, ಸಮಿತಿ ಜಿಲ್ಲಾ ಉಪಾಧ್ಯಕ್ಷ ಎಸ್.ಬಿ.ಖಾದ್ರಿ, ತಾಲೂಕು ಸಮಿತಿ ಸದಸ್ಯರಾದ ನಾಗಮ್ಮ ಗಡ್ಡಿ, ಮುಸ್ತಾಕ್, ಓಂಕಾರೆಪ್ಪ, ದವಲ್‌ಸಾಬ್, ಮಂಜುನಾಥ ಕಲಾಲ್, ಅಹ್ಮದ್ ಪಟೇಲ್, ಪ್ರಜ್ವಲ್, ವಿಷಯ ನಿರ್ವಾಯಕ ರವೀಂದ್ರ ಕುಲ್ಕರ್ಣಿ ಇತರರಿದ್ದರು.