ಹುಬ್ಬಳ್ಳಿ: ರಾಜ್ಯಾದ್ಯಂತ ಆಯೋಜಿಸಲಾದ ಗಂಗಾವತಿ ರೇಷ್ಮೆ ರಂಗೋತ್ಸವದ ವಿಶೇಷ ಚಿತ್ರೀಕರಣ ಶನಿವಾರ ಇಲ್ಲಿಯ ಗಂಗಾವತಿ ಸಿಲ್ಕ್ ಪ್ಯಾಲೇಸ್ ನಲ್ಲಿ ನಡೆಯಿತು.
ಕಿರುತೆರೆ ಕಲಾವಿದರಾದ ಹುಬ್ಬಳ್ಳಿಯ ಮಾಲತಿ ಸರದೇಶಪಾಂಡೆ ಮತ್ತು ಸತ್ಯ ಧಾರಾವಾಹಿಯ ನಾಯಕಿ ಗೌತಮಿ ಜಾಧವ ಅವರು ಹುಬ್ಬಳ್ಳಿ, ಧಾರವಾಡ, ಗದಗ, ಇಳಕಲ್ ಸೀರೆಗಳನ್ನು ಆಯ್ದುಕೊಂಡರು.
ಗಂಗಾವತಿ ಸಿಲ್ಕ ಪ್ಯಾಲೇಸ್ ನಲ್ಲಿ ಓಡಾಡಿ ಅಭಿಮಾನಿಗಳೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮ ಪಟ್ಟರು. ಮಾಲೀಕರಾದ ಆನಂದ ಕಮತಗಿ ಕುಟುಂಬದವರು ಪ್ರೀತಿಯಿಂದ ಕಲಾವಿದರನ್ನು ಬರಮಾಡಿಕೊಂಡು ಅವರು ಆಯ್ದ ರೇಷ್ಮೆ ಸೀರೆ ಉಡುಗೊರೆಯಾಗಿ ನೀಡಿದರು.
ಮುಂಬರುವ ನಾಟಕ ಉತ್ಸವಕ್ಕೆ ಶುಭಕೋರಿದರು. ಹುಬ್ಬಳ್ಳಿಯ ಜನ ಕಲಾವಿದರನ್ನು ಹತ್ತಿರದಿಂದ ಕಂಡು ಹಿರಿಹಿರಿ ಹಿಗ್ಗಿದರು. ಡಾ. ಯಶವಂತ ಸರದೇಶಪಾಂಡೆ ನಿರ್ದೇಶನದಲ್ಲಿ ನಡೆದ ಚಿತ್ರೀಕರಣದ ನೇತೃತ್ವ ಡಾ. ಪವನ ಜೋಶಿ ಅವರು ವಹಿಸಿದ್ದರು. ಅಂಜಿ ವೀರ ಅವರ ಛಾಯಾಗ್ರಹಣವಿತ್ತು.