ಜಿಲ್ಲೆ

ಗೇಮಿಂಗ್ ಗೀಳಿಗೆ ಬಿದ್ದು ಆತ್ಮಹತ್ಯೆ

ಗಂಗಾವತಿ: ಆನ್‌ಲೈನ್ ಗೇಮಿಂಗ್ ಗೀಳಿಗೆ ಬಿದ್ದು ಹಣ ಕಳೆದುಕೊಂಡ ವ್ಯಕ್ತಿಯೊಬ್ಬ ನಗರದ ಎಪಿಎಂಸಿ ಆವರಣದ ಮರಕ್ಕೆ ನೇಣು ಬಿಗಿದುಕೊಂಡು ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಹೊಸಕೇರಾದ ತಿಪ್ಪೇಸ್ವಾಮಿ ಶಿವಕುಮಾರ (29) ಮೃತ. ಈತ ಲಾರಿ ಚಾಲಕನಾಗಿದ್ದು, ಬೆಂಗಳೂರಿನಿಂದ ಎಲೆಕ್ಟ್ರಿಕಲ್ ವಸ್ತುಗಳನ್ನು ತುಂಬಿಕೊಂಡು ಗಂಗಾವತಿಗೆ ಬಂದಿದ್ದ. ರಾತ್ರಿಯಾಗಿದ್ದರಿಂದ ಟ್ರಾನ್ಸ್‌ಪೋರ್ಟ್‌ವೊಂದರಲ್ಲಿ ಉಳಿದುಕೊಂಡಿದ್ದ. ಮಧ್ಯರಾತ್ರಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ. ಮೃತನ ಸಹೋದರ ಮಧುಸೂದನ ನೀಡಿದ ದೂರಿನ ಅನ್ವಯ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅನುಮಾನ ಮೂಡಿಸಿದ ತೃತೀಯಲಿಂಗಿ ಸಾವು

ಗಂಗಾವತಿ: ಇಲ್ಲಿನ ಗಾಂಧಿವೃತ್ತದ ಬಳಿಯ ಮನೆಯೊಂದರಲ್ಲಿ ತೃತೀಯಲಿಂಗಿಯೊಬ್ಬರ ಮೃತ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ತಾಲೂಕಿನ ಸಂಗಾಪುರ ಮೂಲದ ಪರಶುರಾಮ್ ಅಲಿಯಾಸ್ ಪಾರ್ವತಿ ಮೃತೆ. ಇವರ ಸಾವು ಅನುಮಾನ ಮೂಡಿಸಿದ್ದು, ಮೃತನ ಪತ್ನಿ ನೀಡಿದ ದೂರಿನ ಅನ್ವಯ ನಗರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.