ನರ್ಸಿಂಗ್ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಎಸ್‌ಎ್ಐ ತಾಲೂಕು ಸಮಿತಿ ಸದಸ್ಯರು ಗಂಗಾವತಿಯಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. ಕೇಂದ್ರ ಸಮಿತಿ ಸದಸ್ಯ ಅಮರೇಶ ಕಡಗದ್, ತಾಲೂಕು ಸಮಿತಿ ಅಧ್ಯಕ್ಷ ಯು.ನಾಗರಾಜ್, ಕಾರ್ಯದರ್ಶಿ ಬಾಲಾಜಿ ಚಳ್ಳಾರಿ, ಪದಾಧಿಕಾರಿಗಳಾದ ರಮೇಶ, ಶರ್ೀ, ಮಾರುತಿ, ಶಂಕರ, ಸಂಗೀತಾ, ಅನಿತಾ, ಐಶ್ವರ್ಯಾ ಇತರರಿದ್ದರು.  
ಜಿಲ್ಲೆ

ನರ್ಸಿಂಗ್ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಕಲ್ಪಿಸಿ

ಕುರುವತ್ತಿ ಶ್ರೀಕಾಂತಪ್ಪ

ಗಂಗಾವತಿ: ನರ್ಸಿಂಗ್ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಇತರ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಎಸ್‌ಎ್ಐ ತಾಲೂಕು ಸಮಿತಿ ಸದಸ್ಯರು ನಗರದ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಸೋಮವಾರ ವಿವಿಧ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳೊಂದಿಗೆ ಪ್ರತಿಭಟನೆ ನಡೆಸಿ ಶಿರಸ್ತೇದಾರ್ ರವಿಕುಮಾರ ನಾಯಕ್ವಾಡಿಗೆ ಮನವಿ ಸಲ್ಲಿಸಿದರು.

ಕೇಂದ್ರ ಸಮಿತಿ ಸದಸ್ಯ ಅಮರೇಶ ಕಡಗದ್ ಮಾತನಾಡಿ, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಓದುತ್ತಿರುವ ನಸಿರ್ಂಗ್ ವಿದ್ಯಾರ್ಥಿಗಳ ಲಿತಾಂಶ ಬಂದು 10 ತಿಂಗಳಾದರೂ ಬೋನ್‌ೈಡ್ ಸರ್ಟಿಫಿಕೇಟ್ ವಿತರಣೆಯಾಗಿಲ್ಲ. ಶೈಕ್ಷಣಿಕ ಮಾಹಿ ನೋಂದಣಿ ಸಂಖ್ಯೆ, ಏಕೀಕತ ವಿಶ್ವವಿದ್ಯಾನಿಲಯ ಕಾಲೇಜು ನಿರ್ವಹಣಾ ವ್ಯವಸ್ಥೆಯೂ ಸಮರ್ಪಕವಾಗಿಲ್ಲ. ಸ್ಟೇಟ್ ಸ್ಕಾಲರ್‌ಶಿಪ್ ಪೋರ್ಟಲ್ ಯುನಿಡೇಟಾದಲ್ಲಿ ಶೈಕ್ಷಣಿಕ ವಿದ್ಯಾರ್ಥಿಗಳ ಮಾಹಿತಿಯಿಲ್ಲ.

ಶಿಕ್ಷಣದ ಹೆಸರಿನಲ್ಲಿ ಅನುದಾನ ಬಿಡುಗಡೆಯಾದರೂ, ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ಹಣ ಬಂದಿಲ್ಲಾ. ದಾಖಲಾತಿಗಳ ಸಮಸ್ಯೆಯಿಂದ ಹಾಸ್ಟೆಲ್ ಪಟ್ಟಿಯೂ ಬಿಡುಗಡೆಗೊಂಡಿಲ್ಲ. ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಹೆಚ್ಚಾಗಿದ್ದು, ಹಣ ನೀಡಿ ಕಾಲೇಜಿಗೆ ತೆರಳುವ ಸ್ಥಿತಿ ಬಂದಿದೆ. ಹಾಸ್ಟೆಲ್ ಪ್ರವೇಶ ಅರ್ಜಿ ಆಹ್ವಾನಿಸಿದರೂ ದಾಖಲಾತಿಗಳಿಲ್ಲದಿದ್ದರಿಂದ ಹಾಸ್ಟೆಲ್‌ನಿಂದ ವಂಚಿತರಾಗುವ ಸಾಧ್ಯತೆಗಳಿವೆ. ನರ್ಸಿಂಗ್ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳ ಇತ್ಯರ್ಥಕ್ಕೆ ಶಿಕ್ಷಣ ಸಚಿವ ಮಧ್ಯಪ್ರವೇಶಿಸುವಂತೆ ಒತ್ತಾಯಿಸಿದರು.

ತಾಲೂಕು ಸಮಿತಿ ಅಧ್ಯಕ್ಷ ಯು.ನಾಗರಾಜ್, ಕಾರ್ಯದರ್ಶಿ ಬಾಲಾಜಿ ಚಳ್ಳಾರಿ, ಪದಾಧಿಕಾರಿಗಳಾದ ರಮೇಶ, ಶರ್ೀ, ಮಾರುತಿ, ಶಂಕರ, ಸಂಗೀತಾ, ಅನಿತಾ, ಐಶ್ವರ್ಯಾ, ಸೀತಾ ರಾಘವ್, ರಾಜಶೇಖರ, ನಿರುಪಾದಿ ಇತರರಿದ್ದರು.