ಗಂಗಾವತಿ ಐಎಂಎ ಹಾಲ್‌ನಲ್ಲಿ ಸಂಕಲ್ಪ ಕಲಾ ಮತ್ತು ವಾಣಿಜ್ಯ ಮಹಿಳಾ ಪದವಿ ಕಾಲೇಜಿನ ಎನ್ನೆಸ್ಸೆಸ್ ಚಟುವಟಿಕೆಗಳಿಗೆ ಸಂಕಲ್ಪ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಹೇಮಂತರಾಜ ಕಲ್ಮಂಗಿ ಸೋಮವಾರ ಚಾಲನೆ ನೀಡಿದರು. ಉಪಾಧ್ಯಕ್ಷ ಎಂ.ಆರ್. ಮಂಜುಸ್ವಾಮಿ, ಪ್ರಾಚಾರ್ಯ ಬಸವರಾಜ ಸಿರಿಗೇರಿ ಇತರರಿದ್ದರು.  
ಜಿಲ್ಲೆ

ಯುವ ಜನತೆ ಜವಾಬ್ದಾರಿ ಅರಿತು ಜೀವಿಸಲಿ

ಕುರುವತ್ತಿ ಶ್ರೀಕಾಂತಪ್ಪ

ಗಂಗಾವತಿ: ದೇಶದ ಆಸ್ತಿಯಾಗಿರುವ ಯುವ ಜನತೆ ಜವಾಬ್ದಾರಿ ಅರಿತು ಜೀವನ ನಿರ್ವಹಿಸಬೇಕಿದ್ದು, ಪ್ರಾಮಾಣಿಕತೆ ರೂಢಿಸಿಕೊಳ್ಳುವಂತೆ ಸಂಕಲ್ಪ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಹೇಮಂತರಾಜ ಕಲ್ಮಂಗಿ ಹೇಳಿದರು.

ನಗರದ ಐಎಂಎ ಹಾಲ್‌ನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಂಕಲ್ಪ ಕಲಾ ಮತ್ತು ವಾಣಿಜ್ಯ ಮಹಿಳಾ ಪದವಿ ಕಾಲೇಜಿನ ಎನ್ನೆಸ್ಸೆಸ್ ಚಟುವಟಿಕೆಗಳಿಗೆ ಚಾಲನೆ ನೀಡಿ ಮಾತನಾಡಿದರು. ಅಧ್ಯಯನ ಮತ್ತು ಸಾಧನೆ ಮೂಲಕ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುವಂತೆ ಸಲಹೆ ನೀಡಿದರು.

ಉಪಾಧ್ಯಕ್ಷ ಎಂ.ಆರ್. ಮಂಜುಸ್ವಾಮಿ ಮಾತನಾಡಿ, ಗುಣಮಟ್ಟದ ಕೌಶಲ ಅಳವಡಿಸಿಕೊಂಡರೆ ಉತ್ತಮ ಸಾಧನೆ ಮಾಡಲು ಸಾಧ್ಯ ಎಂದರು. ಉಪನ್ಯಾಸಕ ಎಚ್.ನಾಗರಾಜ್, ವಿದ್ಯಾರ್ಥಿ ಒಕ್ಕೂಟದ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ನಿರ್ದೇಶಕ ಡಾ.ಅಮಿತ್‌ಕುಮಾರ, ಪ್ರಾಚಾರ್ಯ ಬಸವರಾಜ ಸಿರಿಗೇರಿ, ಉಪನ್ಯಾಸಕರಾದ ಬಸವರಾಜ, ವೈ.ಬಸವನಗೌಡ, ಸುರೇಶ, ಆಶಾ, ಉಷಾದೇವಿ, ರಮೇಶ, ಚನ್ನಬಸವ, ವಿಶ್ವನಾಥ, ಶಿವಶರಣ, ರಾಹುಲ್, ಮೇಘಾ, ಶರಣಮ್ಮ, ವೆಂಕಟಲಕ್ಷ್ಮೀ, ಗುರುಮೂರ್ತಿ, ಎಚ್.ಎಂ. ಅಶೋಕ ಸಂಪತ್‌ಕುಮಾರಿ, ವಿದ್ಯಾ, ಶಂಕರ ವರದಾಪುರ ಇತರರಿದರು.