ನವವೃಂದಾವನಗಡ್ಡಿಯಲ್ಲಿ ಉತ್ತರಾದಿ ಮಠದ ಪೂರ್ವ ಯತಿವರೇಣ್ಯ ಶ್ರೀ ರಘುವರ್ಯತೀರ್ಥರ ಮಹಿಮೋತ್ಸವಕ್ಕೆ ಸೋಮವಾರ ಚಾಲನೆ ನೀಡಲಾಯಿತು. ಮಠದ ಪ್ರಮುಖರಾದ ಆನಂದಾಚಾರ್, ಬಳ್ಳಾರಿ ನವೀನಾಚಾರ್, ಶ್ರೀನಿವಾಸ ಆಚಾರ್, ಉಪೇಂದ್ರಾಚಾರ್ ಕೇಸಕ್ಕಿ ಇತರರಿದ್ದರು.  
ಜಿಲ್ಲೆ

ರಘುವರ್ಯರ ಮಹಿಮೋತ್ಸವಕ್ಕೆ ಚಾಲನೆ

ಗಂಗಾವತಿ: ತಾಲೂಕಿನ ನವವೃಂದಾವನಗಡ್ಡಿಯಲ್ಲಿ ಉತ್ತರಾದಿ ಮಠದ ಪೂರ್ವ ಯತಿವರೇಣ್ಯ ಶ್ರೀ ರಘುವರ್ಯ ತೀರ್ಥರ ಮಹಿಮೋತ್ಸವಕ್ಕೆ ಸೋಮವಾರ ಚಾಲನೆ ದೊರೆಯಿತು.

ಉತ್ತರಾದಿಮಠದ ಪೀಠಾಧಿಪತಿ ಶ್ರೀ ಸತ್ಯಾತ್ಮತೀರ್ಥರ ಆದೇಶದಂತೆ ಜು.22 ರಿಂದ 27ರವರೆಗೂ ಮಹಿಮೋತ್ಸವ ಹಮ್ಮಿಕೊಳ್ಳಲಾಗಿದೆ. ಮೊದಲ ದಿನ ಬೆಳಗ್ಗೆ ವೃಂದಾವನಕ್ಕೆ ಕ್ಷೀರಾಭಿಷೇಕ, ಮಧುಭಿಷೇಕ, ಅಷ್ಟೋತ್ತರ ಪಾರಾಯಣ, ಭಜನೆ, ಪಂಡಿತರಿಂದ ರಘುವರ್ಯತೀರ್ಥರ ಜೀವನ ಚರಿತ್ರೆ ಉಪನ್ಯಾಸ ಜರುಗಿತು. ನಂತರ ಭಕ್ತರಿಗೆ ತೀರ್ಥ ಪ್ರಸಾದ ವಿತರಿಸಲಾಯಿತು.

ಮಠದ ಪ್ರಮುಖರಾದ ಆನಂದಾಚಾರ್, ಬಳ್ಳಾರಿ ನವೀನಾಚಾರ್, ಶ್ರೀನಿವಾಸ ಆಚಾರ್, ಉಪೇಂದ್ರಾಚಾರ್ ಕೇಸಕ್ಕಿ, ಅಡವಿರಾವ್ ಕಲಾಲಬಂಡಿ, ಗುರುರಾಜ್ ಬೆಳ್ಳುಬ್ಬಿ, ಹನುಮೇಶಾಚಾರ್ ಮತ್ತು ವಿವಿಧೆಡೆಯಿಂದ ಭಕ್ತರು ಭಾಗವಹಿಸಿದ್ದರು.

ಜು.27ರವರಿಗೂ ಮಹಿಮೋತ್ಸವ ನೆರವೇರಿಸಲಾಗುತ್ತಿದ್ದು, ನಿತ್ಯವೂ ಪೂಜೆ, ಪಂಡಿತರಿಂದ ಉಪನ್ಯಾಸ ,ಭಜನೆ, ಸ್ತೋತ್ರ ಪಾರಾಯಣ , ತೀರ್ಥಪ್ರಸಾದ ಸೇರಿ ಇನ್ನಿತರ ಧಾರ್ಮಿಕ ಕಾರ್ಯಕ್ರಮ ಜರುಗಲಿದೆ. ವಿಜಯನಗರ ಜಿಲ್ಲೆಯ ವೆಂಕಟಾಪುರ ಮಾರ್ಗದಿಂದ ಬರುವ ಭಕ್ತಾದಿಗಳಿಗೆ ಶ್ರೀಮಠದಿಂದ ಬೋಟಿನ ವ್ಯವಸ್ಥೆ ಮಾಡಲಾಗಿದೆ ಎಂದು ಶ್ರೀಮಠ ತಿಳಿಸಿದೆ.