ಗಂಗಾವತಿ ತಾಲೂಕಿನ ಆನೆಗೊಂದಿಯ ಐತಿಹಾಸಿಕ ಪ್ರಸಿದ್ಧ ನವವೃಂದಾವನಗಡ್ಡಿಯಲ್ಲಿ ಯತಿದ್ವಾದಶಿ ಪ್ರಯುಕ್ತ ವೃಂದಾವನಕ್ಕೆ ವಿಶೇಷ ಪೂಜೆ ಗುರುವಾರ ನೆರವೇರಿಸಿರುವುದು.  
ಜಿಲ್ಲೆ

ನವವೃಂದಾವನಗಡ್ಡಿಯಲ್ಲಿ ಯತಿದ್ವಾದಶಿ ಆಚರಣೆ

ಗಂಗಾವತಿ: ತಾಲೂಕಿನ ಆನೆಗೊಂದಿಯ ಐತಿಹಾಸಿಕ ಪ್ರಸಿದ್ಧ ನವವೃಂದಾವನಗಡ್ಡಿಯಲ್ಲಿ ಯತಿದ್ವಾದಶಿ ಪ್ರಯುಕ್ತ ಎಲ್ಲ ವೃಂದಾವನಗಳಿಗೆ ವಿಶೇಷ ಪೂಜೆ ಗುರುವಾರ ನೆರವೇರಿಸಲಾಯಿತು.

ಮಂತ್ರಾಲಯ ಮಠದ ಶ್ರೀ ಸುಬುಧೇಂದ್ರ ತೀರ್ಥರ ಆಜ್ಞಾನುಸಾರ ಹಮ್ಮಿಕೊಂಡಿದ್ದು, ಶ್ರೀ ಮಠದ ಪೂರ್ವಿಕ ಗುರುಗಳ ಮೂಲ ವೃಂದಾವನಗಳಿಗೆ ಪೂಜೆ ನೆರವೇರಿಸಲಾಯಿತು. ನಿರ್ಮಾಲ್ಯವಿಸರ್ಜನೆ, ಮಹಾಪಂಚಾಮತಾಭಿಷೇಕ, ವಿಶೇಷ ಪುಷ್ಪಾಲಂಕಾರ, ವಸ್ತ್ರಲಂಕಾರ ಹಸ್ತೋದಕ, ಪಾರಾಯಣ ಮತ್ತು ತೀರ್ಥ ಪ್ರಸಾದ ವಿತರಣೆ ಜರುಗಿತು. ಮಂತ್ರಾಲಯದ ಸುಳಾದಿ ಹನುಮೇಶಾಚಾರ್ ಉಪನ್ಯಾಸ ನೀಡಿದರು.

ಆನೆಗೊಂದಿ ರಾಯರ ಮಠದ ವ್ಯವಸ್ಥಾಪಕ ಸುಮಂತ ಕುಲ್ಕರ್ಣಿ ಇಡಪನೂರ್, ಅರ್ಚಕ ನರಸಿಂಹಾಚಾರ್, ಮುಖಂಡರಾದ ರಾಘವೇಂದ್ರಾಚಾರ್, ಪ್ರಲ್ಹಾದಾಚಾರ್, ಲಕ್ಷ್ಮೀಕಾಂತ್ ಆಚಾರ್, ಸಂಜೀವ್ ಕುಲಕರ್ಣಿ, ವಾದಿರಾಜ ದೇಸಾಯಿ ಗೋತಗಿ , ಅರವಿಂದಾಚಾರ್, ವಿಜಯದೇಸಾಯಿ ಇತರರಿದ್ದರು.