ಗಂಗಾವತಿ ತಾಲೂಕಿ ನವವೃಂದಾವನಗಡ್ಡಿಯಲ್ಲಿ ಸುಬುಧೇಂದ್ರ ತೀರ್ಥರ ಸಾನ್ನಿಧ್ಯದಲ್ಲಿ ಶ್ರೀ ಕವೀಂದ್ರ ತೀರ್ಥರ ಪೂರ್ವಾರಾಧನೆ ಶನಿವಾರ ನೆರವೇರಿಸಲಾಯಿತು.  
ಜಿಲ್ಲೆ

ಶ್ರೀ ಕವೀಂದ್ರ ತೀರ್ಥರ ಪೂರ್ವಾರಾಧನೆ

ಗಂಗಾವತಿ: ತಾಲೂಕಿನ ನವವೃಂದಾವನಗಡ್ಡಿಯಲ್ಲಿ ಮಂತ್ರಾಲಯ ಮಠದಿಂದ ಶ್ರೀ ಕವೀಂದ್ರ ತೀರ್ಥರ ಪೂರ್ವಾರಾಧನೆ ಶನಿವಾರ ನೆರವೇರಿಸಲಾಯಿತು.

ಸುಪ್ರೀಂ ಕೋರ್ಟ್ ತೀರ್ಪಿನಂತೆ ಮಂತ್ರಾಲಯ ಮಠಕ್ಕೆ ಪೂರ್ವಾರಾಧನೆ ಮತ್ತು ಮಧ್ಯಾರಾಧನೆ ನೆರವೇರಿಸಲು ಅವಕಾಶ ದೊರೆತಿದ್ದು, ಮಂತ್ರಾಲಯ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರ ಸಾನ್ನಿಧ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು. ಶ್ರೀಗಳಿಂದ ಮೂಲ ರಾಮದೇವರ ಸಂಸ್ಥಾನ ಪೂಜೆ, ಕವೀಂದ್ರ ತೀರ್ಥರ ವೃಂದಾವನಕ್ಕೆ ನಿರ್ಮಾಲ್ಯ ವಿಸರ್ಜನೆ, ಪಂಚಾಮೃತಾಭಿಷೇಕ, ರೇಷ್ಮೆ ವಸ, ರಜತ ಕವಚ ಮತ್ತು ವಿಶೇಷ ಹೂವಿನ ಅಲಂಕಾರ, ಹಸ್ತೋದಕ, ಮಹಾಮಂಗಳಾರತಿ, ಅಷ್ಟೋತ್ತರ ಪಾರಾಯಣ, ವಿದ್ವತ್ ಗೋಷ್ಠಿ, ವಿದ್ವಾಂಸರಿಂದ ಉಪನ್ಯಾಸ ಮತ್ತು ತೀರ್ಥ ಪ್ರಸಾದ ವಿತರಣೆ ನಡೆದವು.

ಶ್ರೀಮಠದ ಪಂಡಿತರಾದ ದ್ವಾರಕನಾಥಾಚಾರ್, ಸುಳಾದಿ ಹನುಮೇಶಾಚಾರ್, ಹೊಸಪೇಟೆ ಮಠಾಧಿಕಾರಿ ಪವನ್, ಗಂಗಾವತಿ ಮಠಾಧಿಕಾರಿ ಸುಶಿಲೇಂದ್ರಾಚಾರ್, ಮುಖಂಡರಾದ ಪದ್ಮನಾಭ, ಶ್ರೀಧರ್, ಗುಂಜಳ್ಳಿ ಮುರಳಿ ಆಚಾರ್, ಶ್ಯಾಮಾಚಾರ್, ಇಡಪನೂರ್ ಸಂಜೀವ ಕುಲಕರ್ಣಿ, ಅರ್ಚಕರಾದ ವಿಜೇಂದ್ರಾಚಾರ್, ಶ್ರೀನಿವಾಸಾಚಾರ್, ಗಂಗಾವತಿ ಮಠದ ವ್ಯವಸ್ಥಾಪಕ ಗುರುರಾಜಾಚಾರ್ ಸಾಮವೇದ, ಆನೆಗೊಂದಿ ಮಠದ ವ್ಯವಸ್ಥಾಪಕ ಸುಮಂತ ಕುಲ್ಕರ್ಣಿ ಇತರರಿದ್ದರು.