ಗಂಗಾವತಿಯ ಬಿಜೆಪಿ ಕಚೇರಿಯಲ್ಲಿ ಸೇವಾ ಪಾಕ್ಷಿಕ ಅಭಿಯಾನ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿದರು. ಪ್ರಮುಖರಾ ಡಿ.ಕೆ.ಆಗೋಲಿ, ಅಶೋಕ ಗುಡದಳ್ಳಿ, ಜಿ.ಶ್ರೀಧರ ಮತ್ತು ಮನೋಹರಗೌಡ ಹೇರೂರು ಇತರರಿದ್ದರು.  
ಜಿಲ್ಲೆ

ನಮೋ ಜನ್ಮದಿನಕ್ಕೆ ಸೇವಾ ಕಾರ್ಯಗಳು

ಗಂಗಾವತಿ: ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಅಂಗವಾಗಿ ಸೆ.17 ರಿಂದ ಅ.2 ರವರೆಗೆ ಸೇವಾ ಪಾಕ್ಷಿಕ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ತಿಳಿಸಿದರು.

ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, 15 ದಿನಗಳ ಸೇವಾ ಚಟುವಟಿಕೆಗಳು ಗಾಂಧಿ ಜಯಂತಿಯಂದು ಮುಕ್ತಾಯಗೊಳ್ಳಲಿವೆ. ಅಭಿಯಾನದಡಿ ಸ್ವಚ್ಛತಾ ಕಾರ್ಯಕ್ರಮ, ರಕ್ತದಾನ ಶಿಬಿರ, ಆರೋಗ್ಯ ತಪಾಸಣೆ, ಮ್ಯಾರಥಾನ್, ದೀನ ದಯಾಳ ಉಪಾಧ್ಯಾಯರ ಜಯಂತ್ಯುತ್ಸವ, ತಾಯಿಯ ಹೆಸರಿನಲ್ಲಿ ಸಸಿ ನೆಡುವುದು ಸೇರಿದಂತೆ ವಿವಿಧ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ಡಿ.ಕೆ.ಆಗೋಲಿ, ರೈತ ಮೋರ್ಚಾ ತಾಲೂಕು ಅಧ್ಯಕ್ಷ ಅಶೋಕ ಗುಡದಳ್ಳಿ, ನಗರಸಭೆ ಮಾಜಿ ಅಧ್ಯಕ್ಷ ಜೋಗದ ಹನುಮಂತಪ್ಪ ನಾಯಕ, ಮುಖಂಡರಾದ ಜಿ.ಶ್ರೀಧರ, ಮನೋಹರ ಗೌಡ ಹೇರೂರು, ಯಮನೂರಪ್ಪ ಚೌಡ್ಕಿ, ವಿಜಯ ಪದ್ಮಾ, ವಿರೂಪಾಕ್ಷಿ ದನಕನದೊಡ್ಡಿ, ಪ್ರಶಾಂತ ಕುಲಕರ್ಣಿ, ಶ್ರೀನಿವಾಸ ಧೂಳಾ ಜತೆಗಿದ್ದರು.