ಕಲಬುರಗಿ ಅಕ್ಕಮಹಾದೇವಿ ವಿವಿಯಿಂದ ಹಮ್ಮಿಕೊಂಡಿದ್ದ ಪದವಿ ಕಾಲೇಜುಗಳ ರಾಜ್ಯಮಟ್ಟದ ಕ್ರೀಡಾ ಕೂಟದಲ್ಲಿ 48 ಕೆಜಿ ವಿಭಾಗದ ಮಹಿಳಾ ಮತ್ತು ಟೆಕ್ವಾಂಡ್ ವಿಭಾಗದಲ್ಲಿ ಗಂಗಾವತಿ ಬೇತೆಲ್ ಪದವಿ ಕಾಲೇಜಿನ ಐಶ್ವರ್ಯ ಪ್ರಥಮ ಸ್ಥಾನ ಪಡೆಯುವ ಮೂಲಕ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ವಿಜೇತರೊಂದಿಗೆ ಕಾರ್ಯದರ್ಶಿ ಬ್ಯಾಬೇಜ್ ಮಿಲ್ಟನ್, ಅಧ್ಯಕ್ಷ ರಾಜುಸುಧಾಕರ, ಹೇಮಾಸುಧಾಕರ ದಯಾಶೀಲ ಇತರರಿದ್ದಾರೆ. 
ಜಿಲ್ಲೆ

ರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆ

ಗಂಗಾವತಿ: ನಗರದ ಬೇತೆಲ್ ಪದವಿ ಕಾಲೇಜಿನ ವಿದ್ಯಾರ್ಥಿನಿ ಪದವಿ ಕಾಲೇಜುಗಳ ಅಖಿಲ ಭಾರತ ಕ್ರೀಡಾಕೂಟಕ್ಕೆ ಆಯ್ಕೆಯಾಗುವ ಮೂಲಕ ಉತ್ತಮ ಸಾಧನೆ ಮಾಡಿದ್ದಾಳೆ.

ಕಲಬುರಗಿ ಅಕ್ಕಮಹಾದೇವಿ ವಿವಿಯಿಂದ ಹಮ್ಮಿಕೊಂಡಿದ್ದ ಪದವಿ ಕಾಲೇಜುಗಳ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ 48 ಕೆಜಿ ವಿಭಾಗದ ಮಹಿಳಾ ಮತ್ತು ಟೆಕ್ವಾಂಡ್ ವಿಭಾಗದಲ್ಲಿ ಐಶ್ವರ್ಯ ಪ್ರಥಮ ಸ್ಥಾನ ಪಡೆಯುವ ಮೂಲಕ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ದಾನಮ್ಮ ಮತ್ತು ರೇಖಾ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಗಳಿಸಿದ್ದಾರೆ.

ಐಶ್ವರ್ಯ ಒರಿಸ್ಸಾದ ಕೀರ್ ಮಹಾನ್ ವಿವಿಯಲ್ಲಿ ಆಯೋಜಿಸಿರುವ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾ ಎಂದು ಕಾಲೇಜು ಆಡಳಿತ ಮಂಡಳಿ ಕಾರ್ಯದರ್ಶಿ ಬ್ಯಾಬೇಜ್ ಮಿಲ್ಟನ್ ತಿಳಿಸಿದ್ದಾರೆ. ಅಧ್ಯಕ್ಷ ರಾಜುಸುಧಾಕರ, ಹೇಮಾಸುಧಾಕರ ದಯಾಶೀಲ, ಖಜಾಂಚಿ ಸುಜಾತರಾಜು, ತರಬೇತುದಾರ ಬಾಬುಸಾಬ್ ಇತರರಿದ್ದರು.