ಗಂಗಾವತಿಯಲ್ಲಿ ಹಮ್ಮಿಕೊಂಡ ರಾಜ್ಯಮಟ್ಟದ ಟೆನ್ನಿಸ್ ವಾಲಿಬಾಲ್ ಕ್ರೀಡಾಕೂಟವನ್ನು ನಗರಸಭೆ ಅಧ್ಯಕ್ಷ ಮೌಲಾಸಾಬ್ ದಾದೇಸಾಬ್ ಉದ್ಘಾಟಿಸಿದರು. ನಯೋಪ್ರಾ ಅಧ್ಯಕ್ಷ ಸೈಯದ್ ಇಲಿಯಾಸ್ ಖಾದ್ರಿ, ಪಿಯು ಶಿಕ್ಷಣ ಇಲಾಖೆ ಉಪನಿರ್ದೇಶಕ ಜಿ.ಎಚ್.ಜಗದೀಶ ಇತರರಿದ್ದರು.  
ಜಿಲ್ಲೆ

ಸ್ಪರ್ಧೆ ನೀಡುವ ಸಾಮರ್ಥ್ಯಕ್ಕೆ ಹೆಮ್ಮೆ ಪಡಿ, ನಗರಸಭೆ ಅಧ್ಯಕ್ಷ ಮೌಲಾಸಾಬ್ ದಾದೇಸಾಬ್ ಹೇಳಿಕೆ

ಗಂಗಾವತಿ: ಕ್ರೀಡೆಯಲ್ಲಿ ಗೆಲ್ಲುವ ಛಲವಿರಬೇಕು. ಗೆದ್ದವರು ಸೋತ ತಂಡಕ್ಕೆ ಅಗೌರವ ತೊರದೇ ಎದುರಾಳಿ ತಂಡಕ್ಕೂ ನಮಗೆ ಸ್ಪರ್ಧೆ ನೀಡುವ ಸಾಮರ್ಥ್ಯವಿದೆ ಎಂದು ಹೆಮ್ಮೆ ಪಡಬೇಕು ಎಂದು ನಗರಸಭೆ ಅಧ್ಯಕ್ಷ ಮೌಲಾಸಾಬ್ ದಾದೇಸಾಬ್ ಹೇಳಿದರು.

ನಗರದ ಬೇತಲ್ ಪಿಯು ಕಾಲೇಜು ಮೈದಾನದಲ್ಲಿ ಶಾಲಾ ಶಿಕ್ಷಣ ಇಲಾಖೆ, ಪದವಿ ಪೂರ್ವ ವಿಭಾಗ, ಬೇತಲ್ ಕ್ರೀಶ್ಚಿಯನ್ ಫೆಲೋಶಿಪ್ ಅಸೋಸಿಯೇಷನಿಂದ ಶನಿವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಟೆನ್ನಿಸ್ ವಾಲಿಬಾಲ್ ಕ್ರೀಡಾಕೂಟದಲ್ಲಿ ಮಾತನಾಡಿದರು.

ಗಂಗಾವತಿ ನಗರದಲ್ಲಿ ರಾಜ್ಯಮಟ್ಟದ ಕ್ರೀಡಾಕೂಟ ಆಯೋಜಿಸಲು ಮುಂದೆ ಬಂದಿರುವ ಬೇತೆಲ್ ಶಿಕ್ಷಣ ಸಂಸ್ಥೆಯ ಕಾರ್ಯ ಶ್ಲಾಘನೀಯ. ಮುಂದೆ ರಾಷ್ಟ್ರಮಟ್ಟದ ಕ್ರೀಡಾಕೂಟ ನಡೆಸು ಶಕ್ತಿ ಬರಲಿ. ಮಕ್ಕಳ ಶೈಕ್ಷಣಿಕ ಪ್ರಗತಿಗೆ ಬೇತೆಲ್ ಸಂಸ್ಥೆ ಶ್ರಮಿಸುತ್ತಿದೆ ಎಂದರು.

ಪಿಯು ವಿಭಾಗದ ಉಪ ನಿರ್ದೇಶಕ ಜಿ.ಎಚ್.ಜಗದೀಶ ಮಾತನಾಡಿ, ಸ್ಪರ್ಧೆಯಲ್ಲಿ ಸೋಲು, ಗೆಲುವು ಸಹಜ. ಕ್ರೀಡಾ ಮನೋಭಾವನೆಯಿಂದ ಭಾಗವಹಿಸಬೇಕು. ಇಲ್ಲಿ ಗೆಲ್ಲುವ ತಂಡ ರಾಷ್ಟ್ರಮಟ್ಟದಲ್ಲಿ ಸ್ಪರ್ಧಿಸಲಿದ್ದು, ನಿರ್ಣಾಯಕರು ಪಾರದರ್ಶಕವಾಗಿ ನಿರ್ವಹಿಸಬೇಕೆಂದರು.

ಪ್ರಾಚಾರ್ಯ ಸಂಘದ ಅಧ್ಯಕ್ಷ ಅನಿಲಕುಮಾರ, ನಯೋಪ್ರಾ ಅಧ್ಯಕ್ಷ ಸೈಯದ್ ಇಲಿಯಾಸ್ ಖಾದ್ರಿ, ಸಂಸ್ಥೆಯ ಅಧ್ಯಕ್ಷ ಬೆಜಿಲಿಲ್ ಜೋಸೇಫ್‌ರಾಜು, ಕಾರ್ಯದರ್ಶಿ ಬ್ಯಾಬೇಜ್ ಮಿಲ್ಟನ್, ಆಡಳಿತಾಧಿಕಾರಿ ಹೇಮಾ ಸುಧಾಕರ, ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಸೋಮಶೇಖರಗೌಡ, ದೈಹಿಕ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ತಿರುಪತಿ ನಾಯಕ, ದೈಹಿಕ ಶಿಕ್ಷಕ ಸಂಘದ ತಾಲೂಕಾಧ್ಯಕ್ಷ ಯಂಕಪ್ಪ ತಳವಾರ ಪ್ರಾಚಾರ್ಯರಾದ ಬಸಪ್ಪ ನಾಗೋಲಿ, ವೆಂಕಟೇಶ ಬಿಂಗಿ, ಡಾ.ರವಿ ಚವ್ಹಾಣ, ಬಿ.ವಿ.ಯಾವಗಲ್, ಮಂಜುನಾಥ, ಸಿದ್ಧಲಿಂಗೇಶ ಅಂಗಡಿ, ಕ್ರೀಡಾ ವೀಕ್ಷಕ ಮಲ್ಲಿಕಾರ್ಜುನ ಹೂಗಾರ, ನಿರ್ಣಾಯಕರಾದ ಶಿವರಾಜ ಗೊಂಡೆ, ಶಿವಕಾಂತ ತಳವಾರ ಇತರರಿದ್ದರು.