ಗಂಗಾವತಿ ತಾಪಂ ಮಂಥನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮಾಹಿತಿ ಕಾರ್ಯಾಗಾರದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ಪೂಜಾರ ಬುಧವಾರ ಮಾತನಾಡಿದರು. ಮೇಲ್ವಿಚಾರಕ ದೇವೇಂದ್ರಗೌಡ, ತಾಲೂಕು ಪ್ರಭಾರ ಆರೋಗ್ಯ ಶಿಕ್ಷಣಾಧಿಕಾರಿ ಗುರುರಾಜ್, ಕ್ಷಯರೋಗ ವಿಭಾಗದ ಮೇಲ್ವಿಚಾರಕರಾದ ಹುಸೇನ್ ಬಾಷಾ, ನಾಗರಾಜ ಇತರರಿದ್ದರು.  
ಜಿಲ್ಲೆ

ಸೊಳ್ಳೆ ಕಡಿತ ಚಿಕ್ಕದು ಪರಿಣಾಮ ದೊಡ್ಡದು

ಗಂಗಾವತಿ: ಸೊಳ್ಳೆಗಳಿಂದ ಹರಡುವ ರೋಗಗಳ ಬಗ್ಗೆ ಜಾಗೃತರಾಗಬೇಕಿದ್ದು, ಸೊಳ್ಳೆ ಉತ್ಪತ್ತಿಯಾಗದಂತೆ ಪರಿಸರ ರಕ್ಷಣೆಗೆ ಆದ್ಯತೆ ನೀಡುವಂತೆ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ಪೂಜಾರ ಹೇಳಿದರು.
ನಗರದ ತಾಪಂ ಮಂಥನ ಸಭಾಂಗಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮದಡಿ ಗಂಗಾವತಿ ಮತ್ತು ಕಾರಟಗಿ ತಾಲೂಕು ವ್ಯಾಪ್ತಿಯ ಪಿಡಿಒಗಳಿಗೆ ಬುಧವಾರ ಹಮ್ಮಿಕೊಂಡಿದ್ದ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು. ಸೊಳ್ಳೆ ಕಡಿತ ಚಿಕ್ಕದಾದರೂ ಆರೋಗ್ಯದ ಮೇಲೆ ಅಗಾಧ ಪರಿಣಾಮ ಬೀರಲಿದೆ. ಪರಿಸರ ಸ್ವಚ್ಛತೆಯತ್ತ ಗ್ರಾಪಂ ಗಮನಹರಿಸಬೇಕಿದ್ದು, ಸೊಳ್ಳೆಗಳು ಉತ್ಪತ್ತಿಯಾಗದಂತೆ ಸ್ವಚ್ಛತೆ ಜತೆಗೆ ಜನರಲ್ಲಿ ಜಾಗೃತಿ ಮೂಡಿಸುವಂತೆ ಸಲಹೆ ನೀಡಿದರು.
ಮೇಲ್ವಿಚಾರಕ ದೇವೇಂದ್ರಗೌಡ ಮಾತನಾಡಿ, ಡೆಂಘೆ ನಿಯಂತ್ರಣದಲ್ಲಿ ಗ್ರಾಪಂ ಪಾತ್ರ ಪ್ರಮುಖವಾಗಿದ್ದು, ಪ್ರಕರಣ ವರದಿ ಆದೆಡೆ ಸ್ವಚ್ಛತೆ ಮತ್ತು ಚಿಕಿತ್ಸೆಯತ್ತ ಗಮನಹರಿಸಬೇಕು. ಅಗತ್ಯ ಮುಂಜಾಗ್ರತೆ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು.
ತಾಲೂಕು ಪ್ರಭಾರ ಆರೋಗ್ಯ ಶಿಕ್ಷಣಾಧಿಕಾರಿ ಗುರುರಾಜ್, ಕ್ಷಯರೋಗ ವಿಭಾಗದ ಮೇಲ್ವಿಚಾರಕರಾದ ಹುಸೇನ್ ಬಾಷಾ, ನಾಗರಾಜ, ಕುಷ್ಠರೋಗ ಮೇಲ್ವಿಚಾರಕ ಎಚ್.ಸುರೇಶ್, ಮಲೇರಿಯಾ ಲಿಂಕ್ ವರ್ಕರ್ ಗುರುರಾಜ್ ಸೇರಿ ಎರಡು ತಾಲೂಕಿನ ಪಿಡಿಒಗಳು ಭಾಗವಹಿಸಿದ್ದರು.