ಜಿಲ್ಲೆ

ಶ್ರೀ ಮದ್ ಯೋಗೀಶ್ವರ ಯಾಜ್ಞವಲ್ಕ್ಯ ಭಾವಚಿತ್ರ ಮೆರವಣಿಗೆ

ಪ್ರವೀಣ ಉದುಸಾ ದಲಬಂಜನ್

ಗಂಗಾವತಿ: ಇಲ್ಲಿನ ಜವಾಹರ ನಗರದ ಶ್ರೀ ಹನುಮಂತ ದೇವರ ದೇವಾಲಯದಲ್ಲಿ ಹಮ್ಮಿಕೊಂಡಿದ್ದ ಶ್ರೀ ಮದ್ ಯೋಗೀಶ್ವರ ಯಾಜ್ಞವಲ್ಕ್ಯ ಜಯಂತ್ಯುತ್ಸವದ ನಿಮಿತ್ತ ಭಾವಚಿತ್ರದ ಮೆರವಣಿಗೆ ಬುಧವಾರ ಜರುಗಿತು.

ಶ್ರೀ ಮದ್ ಯೋಗೀಶ್ವರ ಯಾಜ್ಞವಲ್ಕ್ಯ ಸೇವಾ ಸಮಿತಿಯಿಂದ ಜರುಗಿದ ಕಾರ್ಯಕ್ರಮದಲ್ಲಿ ಭಾವಚಿತ್ರವನ್ನು ನಗರದ ಶ್ರೀ ಪ್ರಸನ್ನ ವೆಂಕಟರಮಣ ದೇವಾಲಯದಿಂದ ಹನುಮಂತ ದೇವರ ದೇವಾಲಯದವರೆಗೂ ವಾದ್ಯ, ವೇದ ಮತ್ತು ಭಜನಾ ತಂಡದೊಂದಿಗೆ ಅದ್ದೂರಿಯಾಗಿ ನೆರವೇರಿಸಲಾಯಿತು.

ಸಮಿತಿ ಸಂ.ಕಾರ್ಯದರ್ಶಿ ಶೇಷಗಿರಿ ಕುಲ್ಕರ್ಣಿ ಮಾತನಾಡಿ, ಜೂ.3ರಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮ ಆರಂಭವಾಗಿದ್ದು, ಯಾಜ್ಞವಲ್ಕ್ಯರ ಜ್ಞಾನ ಸಂಪತ್ತು ಕುರಿತು ವಿದ್ವಾಂಸ ಗೋವಿಂದಾಚಾರ್ಯ ಬಾದರ್ಲಿ ಉಪನ್ಯಾಸ ಜರುಗಿತು. ಜೂ.5ರಂದು ಬೆಳಗ್ಗೆ ಸುಪ್ರಭಾತ, ನಿರ್ಮಾಲ್ಯ ವಿಸರ್ಜನೆ,ಹರಿವಾಯು ಪುನಶ್ಚರಣೆ, ಯಾಜ್ಞವಲ್ಕ್ಯರ ಅಷ್ಟೋತ್ತರ ಪಾರಾಯಣ, ಪಂಚಾಮೃತಾಭಿಷೇಕ, ಧ್ವನಂತರಿ ಹೋಮ, ಪೂರ್ಣಾಹುತಿ, ಪ್ರವಚನ ಮಂಗಳ,ತೀರ್ಥ ಪ್ರಸಾದ ವಿತರಣೆ, ಹರಭಜನೆ ಮತ್ತು ಅಷ್ಟವಧಾನ ಸೇವೆ, ಪ್ರತಿಭಾಪುರಸ್ಕಾರ ಹಮ್ಮಿಕೊಳ್ಳಲಾಗಿದೆ ಎಂದರು.

ಸಮಿತಿ ಅಧ್ಯಕ್ಷ ಮುರಳೀಧರ ಕುಲ್ಕರ್ಣಿ, ಮುಖಂಡರಾದ ತಿರುಮಲರಾವ್ ಆಲಂಪಲ್ಲಿ, ರಾಘವೇಂದ್ರ ಮೇಗೂರು, ರವಿ ವೀರಾಪುರ, ವಟಗಲ್ ರಂಗನಾಥ, ಶ್ರೀಕಾಂತ ಮೇಗೂರು, ಪ್ರಕಾಶರಾವ್, ವೆಂಕಟೇಶ ಜೋಶಿ, ಆನಂದ ಇತರರಿದ್ದರು.