ಗಂಗಾವತಿ ತಾಲೂಕಿನ ಪಂಪಾಸರೋವರದ ಶ್ರೀ ವಿಜಯಲಕ್ಷ್ಮೀ ದೇವಾಲಯದಲ್ಲಿ ‘ಮಧುರ’ ಚಲನಚಿತ್ರ ಚಿತ್ರಿಕರಣಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು. ನಾಯಕ ನಟ ವಿಷ್ಣುತೀರ್ಥ ಜೋಶಿ, ನಿರ್ದೇಶಕ ಟಿ.ಆರ್.ಎನ್. ಚಿರಂಜೀವಿ, ಗ್ರಾಪಂ ಮಾಜಿ ಅಧ್ಯಕ್ಷ ಕೆ.ತಿರುಕಪ್ಪ ಇತರರಿದ್ದರು.  
ಜಿಲ್ಲೆ

ಕುಟುಂಬ ಆಧಾರಿತ ಕಥಾಹಂದರ

ಗಂಗಾವತಿ: ಸ್ಥಳೀಯ ಕಲಾವಿದರು ನಟಿಸಲಿರುವ ‘ಮಧುರ’ ಚಲನಚಿತ್ರ ಚಿತ್ರಿಕರಣಕ್ಕೆ ತಾಲೂಕಿನ ಪಂಪಾಸರೋವರದ ಶ್ರೀ ವಿಜಯಲಕ್ಷ್ಮೀ ದೇವಾಲಯದಲ್ಲಿ ಶುಕ್ರವಾರ ಚಾಲನೆ ನೀಡಲಾಯಿತು.

ಕಡಿಮೆ ಬಜೆಟ್‌ನಲ್ಲಿ ಕುಟುಂಬ ಆಧಾರಿತ ಚಿತ್ರವಾಗಿದ್ದು, ಪಾಲಕರನ್ನು ಕಳೆದುಕೊಂಡ ಅನಾಥ ಹುಡುಗನೊಬ್ಬ ಎದುರಿಸುವ ಸಂಕಷ್ಟಗಳನ್ನು ಕಥೆಯಲ್ಲಿ ಕಟ್ಟಿಕೊಡಲಾಗಿದೆ. ಇತ್ತೀಚಿಗೆ ಬಿಡುಗಡೆಗೊಂಡ ದಾಸಪರಂಪರೆ ಚಿತ್ರದ ವೆಂಕಟರಮಣ ಪಾತ್ರಧಾರಿ ವಿಷ್ಣುತೀರ್ಥಜೋಶಿ ನಾಯಕರಾಗಿ ಅಭಿನಯಸಲಿದ್ದು, ಸ್ಥಳೀಯ ಕಲಾವಿದರಾದ ಶ್ಯಾವಿ ಮೈಲಾರಪ್ಪ, ಗಾಯಕ ಖಾಜಾ ಮತ್ತಿರರು ಪ್ರಮುಖ ಭೂಮಿಕೆಯಲ್ಲಿದ್ದಾರೆ.

ತಾಲೂಕಿನ ಪ್ರಸಿದ್ಧ ತಾಣಗಳಲ್ಲಿ ಚಿತ್ರೀಕರಣವಾಗಲಿದ್ದು, ಕುಟುಂಬವೇ ಕುಳಿತು ನೋಡುವಂತಹ ಮನರಂಜನೆ ಚಿತ್ರ ಇದ್ದಾಗಿದೆ. ಟಿ.ಆರ್.ಎನ್. ಚಿರಂಜೀವಿ ಅವರು ಕತೆ, ಚಿತ್ರಕತೆ, ಸಂಭಾಷಣೆ ಮತ್ತು ನಿರ್ದೇಶಕ ಜವಾಬ್ದಾರಿ ಹೊತ್ತಿದ್ದಾರೆ.

ಕೌರವ ವೆಂಕಟೇಶ (ಸಾಹಸ), ಯಮನೂರ ಗಟಾಲಿ(ಛಾಯಾಗ್ರಹಣ) ಸೇರಿ ಹೆಸರಾಂತ ಕಲಾವಿದರು ಚಿತ್ರಕ್ಕೆ ಸಾಥ್ ನೀಡಲಿದ್ದಾರೆ. ಗ್ರಾಪಂ ಮಾಜಿ ಅಧ್ಯಕ್ಷ ಕೆ.ತಿರುಕಪ್ಪ, ಪ್ರಮುಖರಾದ ಸದಾಶಿವರೆಡ್ಡಿ, ಆಕಾಶ, ಅಭಿಷೇಕ ಇತರರಿದ್ದರು.