ಗಂಗಾವತಿ: ಬೀದಿ ವ್ಯಾಪಾರಿಗಳನ್ನು ೆ.14ರೊಳಗೆ ಮಾರುಕಟ್ಟೆ ಪ್ರಾಂಗಣಕ್ಕೆ ಸ್ಥಳಾಂತರಿಸಲಾಗುತ್ತಿದ್ದು, ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು ಎಂದು ಶಾಸಕ ಗಾಲಿ ಜನಾರ್ದನರೆಡ್ಡಿ ಹೇಳಿದರು.
ನಗರದ ಗುಂಡಮ್ಮ ಕ್ಯಾಂಪ್‌ನಲ್ಲಿರುವ ಮಾರುಕಟ್ಟೆ ಪ್ರಾಂಗಣ ವ್ಯವಸ್ಥೆಯನ್ನು ಗುರುವಾರ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಹಲವು ವರ್ಷಗಳಿಂದ ಆರಂಭವಾಗದೇ ನನೆಗುದಿಗೆ ಬಿದ್ದಿರುವ ಮಾರುಕಟ್ಟೆ ಪ್ರಾಂಗಣ ಆರಂಭಿಸಲಾಗುತ್ತಿದ್ದು, ವ್ಯಾಪಾರಿಗಳ ಅನುಕೂಲಕ್ಕಾಗಿ ಕೆಕೆಆರ್‌ಡಿಬಿ 50ಲಕ್ಷ ರೂ.ಅನುದಾನದಲ್ಲಿ ಸೌಲಭ್ಯ ಕಲ್ಪಿಸಲಾಗುವುದು. ಬೀದಿಬದಿ ವ್ಯಾಪಾರಿಗಳೊಂದಿಗೆ ತರಕಾರಿ, ಹಣ್ಣು, ಮಾಂಸ, ಮೀನು ಮಾರಾಟಗಾರರನ್ನು ಪ್ರಾಂಗಣಕ್ಕೆ ಶ್‌ಟಿ ಮಾಡಲಾಗುವುದು. ಇನ್ನು ಮುಂದೆ ಬೀದಿ ವ್ಯಾಪಾರಿಗಳು ರಸ್ತೆಯಲ್ಲಿ ಮಾರಾಟ ಮಾಡುವಂತಿಲ್ಲ, ಎಲ್ಲರೂ ಪ್ರಾಂಗಣದಲ್ಲಿ ವ್ಯಾಪಾರ ಮುಂದುವರಿಸಬೇಕು. ಸ್ಪಂದಿಸದಿದ್ದರೆ ಕಾನೂನು ಕ್ರಮಕ್ಕೆ ನಗರಸಭೆ ಅಧಿಕಾರಿಗಳು ಮುಂದಾಗಲಿದ್ದಾರೆ ಎಂದರು.
ಸ್ವಚ್ಛತೆಗೆ ಗಮನನೀಡಿ: ಪ್ರಾಂಗಣದಲ್ಲಿ ಸ್ವಚ್ಛತೆ ಇಲ್ಲದಿರುವುದನ್ನು ಗಮನಿಸಿದ ಶಾಸಕ ರೆಡ್ಡಿ, ನೈರ್ಮಲ್ಯ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಸ್ವಚ್ಛತೆಗೆ ಗಮನ ನೀಡುವುದರ ಜತೆಗೆ ವ್ಯಾಪಾರಿಗಳಿಗೆ ಮೂಲ ಸೌಕರ್ಯ ಕಲ್ಪಿಸಬೇಕು. ಪ್ರತಿಯೊಬ್ಬರ ವ್ಯಾಪಾರಿಯನ್ನು ಮನವೊಲಿಸಿ, ಪ್ರಾಂಗಣಕ್ಕೆ ಶ್‌ಟಿ ಆಗುವಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ನಗರದ ಸೌಂದರೀಕರಣಕ್ಕಾಗಿ ಬೀದಿ ವ್ಯಾಪಾರಿಗಳು ಒಂದೆಡೆ ವ್ಯಾಪಾರ ಕೈಗೊಳ್ಳುವುದು ಸೂಕ್ತವಾಗಿದ್ದು, ನಗರಾಡಳಿತದೊಂದಿಗೆ ಸಹಕಾರ ನೀಡುವಂತೆ ಸಲಹೆ ನೀಡಿದರು. ಹಿಂದಿನ ಸಭೆಯಲ್ಲಿ ಸೂಚನೆ ನೀಡಿದರೂ, ಅಧಿಕಾರಿಗಳು ಗಂಭೀರ ಪರಿಗಣಿಸದಿದ್ದರಿಂದ ತೀವ್ರ ತರಾಟೆಗೆ ತೆಗೆದುಕೊಂಡರು.
ನಗರಸಭೆ ಅಧ್ಯಕ್ಷ ಮೌಲಸಾಬ್‌ದಾದೇಸಾಬ್, ಉಪಾಧ್ಯಕ್ಷೆ ಪಾರ್ವತಿ ದುರುಗೇಶ ದೊಡ್ಮನಿ, ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ಚೌಡ್ಕಿ, ಸದಸ್ಯರಾದ ಉಮೇಶ ಸಿಂಗನಾಳ್, ಪರಶುರಾಮ್ ಮಡ್ಡೇರ್, ನೀಲಕಂಠಪ್ಪ ಕಟ್ಟಿಮನಿ, ಪೌರಾಯುಕ್ತ ಆರ್. ವಿರೂಪಾಕ್ಷಮೂರ್ತಿ, ಇಂಜಿನಿಯರ್‌ಗಳಾದ ಚೇತನನಾಯ್ಕ, ಶಿವಕುಮಾರ, ಮುಖಂಡರಾದ ಮನೋಹರಗೌಡ ಹೇರೂರು, ಚಂದ್ರು ಹೀರೂರ್, ಯಮನೂರ ಚೌಡ್ಕಿ ಇತರರಿದ್ದರು.
25 ವರ್ಷಗಳಿಂದ ನನೆಗುದಿಗೆ: ಬೀದಿ ವ್ಯಾಪಾರಿಗಳನ್ನು ಒಂದೆಡೆ ಸೇರಿಸುವ ಉದ್ದೇಶದಿಂದ 2000ನೇ ಇಸವಿಯಲ್ಲಿ ಅಂದಿನ ಸಂಸದ ಎಚ್.ಜಿ.ರಾಮುಲು ಅವರು ಗುಂಡಮ್ಮ ಕ್ಯಾಂಪ್‌ನಲ್ಲಿ ಮಾರುಕಟ್ಟೆ ಪ್ರಾಂಗಣ ನಿರ್ಮಿಸಿದ್ದಾರೆ. ದುರಸ್ತಿ, ಸ್ಥಳಾಂತರ, ಹರಾಜು ಇತರ ವ್ಯವಸ್ಥೆಗಾಗಿ 10ಕ್ಕೂ ಹೆಚ್ಚು ಬಾರಿ ಅನುದಾನ ಬಳಕೆಯಾದರೂ ಪ್ರಾಂಗಣ ಆರಂಭವಾಗಿಲ್ಲ. ಕಳೆದ ವರ್ಷ ಟೆಂಡರ್ ಪ್ರಕ್ರಿಯೆ ನಡೆಸಿದರೂ, ಸೌಲಭ್ಯ ಕಲ್ಪಿಸದಿದ್ದರಿಂದ ವ್ಯಾಪಾರಿಗಳು ಸ್ಥಳಾಂತರವಾಗಲಿಲ್ಲ. ಪುನಃ ಸ್ಥಳಾಂತರದ ಬಗ್ಗೆ ಚರ್ಚೆ ನಡೆಯುತ್ತಿದ್ದು, ೆ.14 ಗಡವು ನೀಡಲಾಗಿದೆ. ಹಾಲಿ ಮತ್ತು ಮಾಜಿ ಜನಪ್ರತಿನಿಧಿಗಳ ನಡುವಿನ ಆಂತರಿಕ ಗುದ್ದಾಟದಿಂದ ಪ್ರಾಂಗಣ ಆರಂಭಕ್ಕೆ ಕಾಲ ಕೂಡಿ ಬರುತ್ತಿಲ್ಲ.