ಯುವ ಉತ್ತೇಜನಾ ಸೇನಾ ಪಡೆಯ ಜಿಲ್ಲಾ ಸಮಿತಿ ಸದಸ್ಯರು ಗಂಗಾವತಿ ಗ್ರೇಡ್-2 ತಹಸೀಲ್ದಾರ್ ಮಹಾಂತಗೌಡ ಗೌಡರ್‌ಗೆ ಮನವಿ ಸಲ್ಲಿಸಿದರು. ಅಧ್ಯಕ್ಷ ಸರ್ವಜ್ಞಮೂರ್ತಿ, ಪದಾಧಿಕಾರಿಗಳಾದ ಕಾರ್ತಿಕ್, ವಿನೋದ, ಚನ್ನಕೇಶವ, ಮಾರುತಿ, ನಾಗಲಿಂಗ, ಮಹೇಶ, ಸತ್ಯಬೋಧ ಇತರರಿದ್ದರು. 
ಜಿಲ್ಲೆ

ಕಾನೂನು ಕಾಲೇಜು ಶುಲ್ಕ ಕಡಿತಗೊಳಿಸಿ

ಗಂಗಾವತಿ: ಕಾನೂನು ಕಾಲೇಜು ಶುಲ್ಕ ಹೆಚ್ಚಳ ಖಂಡಿಸಿ ಯುವ ಉತ್ತೇಜನಾ ಸೇನಾ ಪಡೆಯ ಜಿಲ್ಲಾ ಸಮಿತಿ ಸದಸ್ಯರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ನಗರದ ಅಪ್ಸಾನಿ ಎನ್‌ಆರ್ ಕಾನೂನು ಕಾಲೇಜು ವಿದ್ಯಾರ್ಥಿಗಳೊಂದಿಗೆ ಅಂಬೇಡ್ಕರ್ ವೃತ್ತದಿಂದ ಶ್ರೀಕೃಷ್ಣದೇವರಾಯ ವೃತ್ತದವರೆಗೆ ಪ್ರತಿಭಟನಾ ರ‌್ಯಾಲಿ ನಡೆಸಿ ಗ್ರೇಡ್-2 ತಹಸೀಲ್ದಾರ್ ಮಹಾಂತಗೌಡ ಗೌಡರ್‌ಗೆ ಮನವಿ ಸಲ್ಲಿಸಿದರು.

ಸೇನಾ ಪಡೆ ಅಧ್ಯಕ್ಷ ಸರ್ವಜ್ಞಮೂರ್ತಿ ಮಾತನಾಡಿ, ಕಾನೂನು ಕಾಲೇಜು ಶುಲ್ಕವನ್ನು ಏಕಾಏಕಿ ಹೆಚ್ಚಿಸಲಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ದುಪ್ಪಟ್ಟಾಗಿದೆ. ಶುಲ್ಕದ ಜತೆಗೆ ಕೆಲ ಕಾಲೇಜಿನಲ್ಲಿ ದೇಣಿಗೆ ನೆಪದಲ್ಲಿ ವಿದ್ಯಾರ್ಥಿಗಳನ್ನು ಶೋಷಿಸಲಾಗುತ್ತಿದೆ. ಶುಲ್ಕ ಹೆಚ್ಚಳದಿಂದ ಬಡ ಮತ್ತು ಮೀಸಲು ವರ್ಗದ ವಿದ್ಯಾರ್ಥಿಗಳು ಕಾನೂನು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಕಾನೂನು ವಿವಿ ಅಧಿಕಾರಿಗಳು ಮಧ್ಯಪ್ರವೇಶಿಸಿ, ಶುಲ್ಕ ಕಡಿತಗೊಳಿಸುವಂತೆ ಒತ್ತಾಯಿಸಿದರು. ಪದಾಧಿಕಾರಿಗಳಾದ ಕಾರ್ತಿಕ್, ವಿನೋದ, ಚನ್ನಕೇಶವ, ಮಾರುತಿ, ನಾಗಲಿಂಗ, ಮಹೇಶ, ಸತ್ಯಬೋಧ ಇತರರಿದ್ದರು.