ಜಿಲ್ಲೆ

ಹಿಂದುತ್ವ ರಕ್ಷಣೆಗೆ ಪಣತೊಟ್ಟಿದ್ದ ಧೀರ

ಪ್ರವೀಣ ಉದುಸಾ ದಲಬಂಜನ್

ಗಂಗಾವತಿ: ನಗರದ ವಿದ್ಯಾನಗರದ ಬಳಿ ಛತ್ರಪತಿ ಶಿವಾಜಿ ವೃತ್ತದಲ್ಲಿ ಕ್ಷತ್ರಿಯ ಸಮಾಜದಿಂದ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವ ಬುಧವಾರ ಆಚರಿಸಲಾಯಿತು.

ಭಾವಚಿತ್ರಕ್ಕೆ ಕ್ಷತ್ರಿಯ ಸಮಾಜದ ಸೇರಿ ವಿವಿಧ ಸಮಾಜದ ಮುಖಂಡರು ಪುಷ್ಪಾರ್ಪಣೆಯೊಂದಿಗೆ ನಮನ ಸಲ್ಲಿಸಿದರು. ಕಾಡಾ ಮಾಜಿ ಅಧ್ಯಕ್ಷ ಬಿ.ಎಚ್.ಎಂ.ತಿಪ್ಪೇರುದ್ರಸ್ವಾಮಿ ಮಾತನಾಡಿ, ಹಿಂದು ಸಮಾಜದ ಉಳಿವಿಗಾಗಿ ಪಣತೊಟ್ಟ ಛತ್ರಪತಿ ಶಿವಾಜಿ ಮಹಾರಾಜ್ ಕ್ಷಾತ್ರ ತೇಜದ ವೀರನಾಗಿದ್ದ. ಹಿಂದುತ್ವ ರಕ್ಷಣೆಯ ಬಗ್ಗೆ ಪರಂಪರೆಯನ್ನು ಉಳಿಸುವ ಕೆಲಸನ್ನು ಶಿವಾಜಿ ಮಹಾರಾಜ್‌ರು ಮಾಡಿದ್ದಾರೆ. ಅವರಲ್ಲಿನ ಕ್ಷಾತ್ರ ತೇಜಸ್ಸನ್ನು ಪ್ರತಿಯೊಂದು ಹಿಂದು ಯುವಕರು ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕಿದೆ ಎಂದರು.

ನಗರಸಭೆ ಆರೋಗ್ಯ ನಿರೀಕ್ಷಕ ಎ.ನಾಗರಾಜ್, ಕ್ಷತ್ರಿಯ ಸಮಾಜದ ಮುಖಂಡರಾದ ಗಣೇಶ ೋರ್ಪಡೆ, ರಮೇಶ ಗಾಯಕ್ವಾಡ್, ಮಂಜುನಾಥ ಬಿದರಕರ್, ಕಾಶೀನಾಥ ಚಿತ್ರಗಾರ, ಸಿದ್ದುಗೌಳಿ, ಸಂಗಯ್ಯಸ್ವಾಮಿ ಸಂಶಿಮಠ, ಕೃಷ್ಣಪ್ಪ ಅಧಿಕಾರಿ ಇತರರಿದ್ದರು.

ತಾಲೂಕಾಡಳಿತ ಸೌಧದ ಕಚೇರಿ: ನಗರದ ತಾಲೂಕಾಡಳಿತ ಸೌಧದ ಕಚೇರಿಯಲ್ಲಿ ತಾಲೂಕಾಡಳಿತದಿಂದ ಛತ್ರಪತಿ ಶಿವಾಜಿ ಮಹಾರಾಜ್‌ರ ಜಯಂತ್ಯುತ್ಸವ ಆಚರಿಸಲಾಯಿತು. ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಿ, ಶಿರಸ್ತೇದಾರ ರವಿಕುಮಾರ ನಾಯಕ್ವಾಡಿ ಮಾತನಾಡಿದರು. ಉ ತಹಸೀಲ್ದಾರರಾದ ಕೃಷ್ಣವೇಣಿ, ಪ್ರಕಾಶನಾಯಕ, ಶಿರಸ್ತೇದಾರರಾದ ಎಂ.ಡಿ.ರಫೀ, ಶ್ರೀಕಂಠೇಶ,ಪವನಕುಮಾರ, ಮಂಜುನಾಥ, ನಾಗರತ್ನಾ, ಪಾರ್ವತಿ, ಗಾಯತ್ರಿ ಇತರರಿದ್ದರು.