ಗಂಗಾವತಿ ಕೊಪ್ಪಳ ರಸ್ತೆಯ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಹಾಲುಮತ ಸಮಾಜದಿಂದ ಸ್ವಾತಂತ್ರ್ಯ ಸೇನಾನಿ ಸಂಗೊಳ್ಳಿ ರಾಯಣ್ಣ ಪುಣ್ಯಸ್ಮರಣೋತ್ಸವ ಭಾನುವಾರ ಹಮ್ಮಿಕೊಳ್ಳಲಾಗಿತ್ತು. ಶಾಸಕ ಗಾಲಿ ಜನಾರ್ದನ ರೆಡ್ಡಿ, ನಗರಸಭೆ ಮಾಜಿ ಅಧ್ಯಕ್ಷ ಕೆ.ವೆಂಕಟೇಶ, ಹಾಲುಮತ ಸಮಾಜದ ಮುಖಂಡರಾದ ನಾಗೇಶ ಮುಕ್ಕಣ್ಣ, ಶರಣೇಗೌಡ ಮಾ.ಪಾಟೀಲ್ ಇತರರಿದ್ದರು.  
ಜಿಲ್ಲೆ

ಎಲ್ಲರಿಗೂ ರಾಯಣ್ಣ ದೇಶಾಭಿಮಾನ ಮಾದರಿ

ಗಂಗಾವತಿ: ನಗರದ ಕೊಪ್ಪಳ ರಸ್ತೆಯ ಕ್ರಾಂತಿ ವೀರ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಹಾಲುಮತ ಸಮಾಜದಿಂದ ಸ್ವಾತಂತ್ರ್ಯ ಸೇನಾನಿ ಸಂಗೊಳ್ಳಿ ರಾಯಣ್ಣ ಪುಣ್ಯಸ್ಮರಣೋತ್ಸವ ಭಾನುವಾರ ಹಮ್ಮಿಕೊಳ್ಳಲಾಗಿತ್ತು.

ವೃತ್ತದ ನಾಮಲಕಕ್ಕೆ ಪುಷ್ಪಾರ್ಪಣೆ ಸಲ್ಲಿಸಿದ ಶಾಸಕ ಗಾಲಿ ಜನಾರ್ದನರೆಡ್ಡಿ ಮಾತನಾಡಿ, ಸ್ವಾತಂತ್ರ್ಯಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟ ಸಂಗೊಳ್ಳಿ ರಾಯಣ್ಣ ಹೋರಾಟ ಪ್ರತಿಯೊಬ್ಬರಿಗೆ ಆದರ್ಶವಾಗಿದೆ. ಅವರನ್ನು ಮನಸ್ಸಿನಲ್ಲಿ ನಿತ್ಯ ಸ್ಮರಣೀಸಬೇಕಾಗಿದೆ. ರಾಯಣ್ಣರ ಶೂರತ್ವ ಮತ್ತು ದೇಶಾಭಿಮಾನ ಪ್ರಸ್ತುತ ಯುವಕರಿಗೆ ಮಾದರಿಯಾಗಿದೆ ಎಂದರು.

ನಗರಸಭೆ ಮಾಜಿ ಅಧ್ಯಕ್ಷ ಕೆ.ವೆಂಕಟೇಶ, ಹಾಲುಮತ ಸಮಾಜದ ಮುಖಂಡರಾದ ನಾಗೇಶ ಮುಕ್ಕಣ್ಣ, ಶರಣೇಗೌಡ ಮಾ.ಪಾಟೀಲ್, ಡಿ.ಕೆ.ಆಗೋಲಿ, ವಿವಿಧ ಸಮಾಜದ ಮುಖಂಡರಾದ ಮನೋಹರಗೌಡ ಹೇರೂರು, ಆನಂದ ಗೌಡ, ವೀರೇಶ ಬಲಕುಂದಿ, ಯಮನೂರ ಚೌಡ್ಕಿ, ಯಮನೂರಪ್ಪ ನಿರ್ಲೂಟಿ, ಅರ್ಜುನ ನಾಯಕ್, ಪುಂಡಗೌಡ, ರುದ್ರೇಶ, ಸಿದ್ಲಿಂಗಪ್ಪ ಗೌಡ, ವೆಂಕಟೇಶ್ ನಾಯಕ್, ವೀರೇಶ್ ಅಂಗಡಿ, ಹನುಮೇಶ್, ಮಂಜು, ಹೊನ್ನೂರ್ ಸಾಬ್ ಇತರರಿದ್ದರು. ನಂತರ ಹಿರೇಬೆಣಕಲ್‌ನಲ್ಲಿ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಮೂರ್ತಿಯನ್ನು ಅನಾವರಣಗೊಳಿಸಲಾಯಿತು.