ಗಂಗಾವತಿಯ ಮದಕರಿ ನಾಯಕ ರಸ್ತೆಯಲ್ಲಿ ಚಿತ್ರದುರ್ಗದ ಹುಲಿ ಶ್ರೀ ರಾಜಾವೀರ ಮದಕರಿ ನಾಯಕ ಜಯಂತ್ಯುತ್ಸವ ಆಚರಿಸಲಾಯಿತು. ಮದಕರಿ ನಾಯಕ ಯುವಕ ಸಂಘದ ಸಂಚಾಲಕ ಗಾದಿಲಿಂಗಪ್ಪ ನಾಯಕ, ಪದಾಧಿಕಾರಿಗಳಾದ ಜೋಗದ ಕನಕಪ್ಪ ನಾಯಕ, ಜೆ.ಜಾನೆಪ್ಪಾ ನಾಯಕ ಇತರರಿದ್ದರು.  
ಜಿಲ್ಲೆ

ರಾಜನಿಷ್ಟೆಯಲ್ಲಿ ಹೆಸರಾದ ನಾಯಕ

ಗಂಗಾವತಿ: ನಗರದ ಕಲ್ಮಠ ಬಳಿಯ ಮದಕರಿ ನಾಯಕ ರಸ್ತೆಯಲ್ಲಿ ಶ್ರೀ ರಾಜಾವೀರ ಮದಕರಿ ನಾಯಕ ಜಯಂತ್ಯುತ್ಸವ ಆಚರಿಸಲಾಯಿತು.

ಮದಕರಿ ನಾಯಕ ಯುವಕ ಸಂಘದಿಂದ ಹಮ್ಮಿಕೊಂಡಿದ್ದ ಜಯಂತ್ಯುತ್ಸವದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಲಾಯಿತು. ಸಂಚಾಲಕ ಗಾದಿಲಿಂಗಪ್ಪ ನಾಯಕ ಮಾತನಾಡಿ, ಮದಕರಿ ನಾಯಕ ನಾಡು ಕಂಡ ಶ್ರೇಷ್ಠ ರಾಜನಾಗಿದ್ದು, ಸಾಹಸ, ಶೌರ್ಯ, ರಾಜನಿಷ್ಟೆ ಮೂಲಕ ನಾಡಿನ ಹೆಸರನ್ನು ಜಗತ್ತಿನಾದ್ಯಂತ ಪರಿಚಯಿಸಿದ್ದಾರೆ ಎಂದರು.

ಸಂಘದ ಪದಾಧಿಕಾರಿಗಳಾದ ಜೋಗದ ಕನಕಪ್ಪ ನಾಯಕ, ಜೆ.ಜಾನೆಪ್ಪ ನಾಯಕ, ಜೋಗದ ಚಂದ್ರು, ಜೆ.ಹುಸೇನಪ್ಪ, ಜೋಗದ ಮಂಜುನಾಥ, ಜೆ.ಹನುಮೇಶ, ಲಿಂಗೇಶ, ಚೇತನ್, ವೀರೇಶ, ಜೋಗದ ನಿಖಿಲ್, ರಾಜೇಶ, ಯಮನೂರ ಇತರರಿದ್ದರು.