ಗಂಗಾವತಿ: ಜಯನಗರ ರೋಟರಿ ಕ್ಲಬ್ ಕಚೇರಿಯಲ್ಲಿ ರೋಟರಿ ಸಂಸ್ಥೆ ತಾಲೂಕು ಘಟಕದಿಂದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.
ಹಿರಿಯ ಜೀವಿಗಳ ಸಾರ್ಥ ಜೀವನ ಮತ್ತು ಮಾರ್ಗದರ್ಶನ ಕುರಿತು ರೋಟರಿ ಸಂಸ್ಥೆ ತಾಲೂಕಾಧ್ಯಕ್ಷ ಟಿ.ಆಂಜನೇಯ ಮಾತನಾಡಿದರು. ನಂತರ ನಗರದ ಹಿರಿಯ ನಾಗರಿಕರಾದ ನಗರಸಭೆ ಮಾಜಿ ಅಧ್ಯಕ್ಷ, ಉದ್ಯಮಿ ಅಮರಜ್ಯೋತಿ ದುರುಗಪ್ಪ, ಸೋಹನಲಾಲ್ ಮೂಥಾ, ಪನ್ನಲಾಲ್ ಸುರಾನ್, ಹೀರಾಲಾಲ್ ಛೋಪ್ರಾ ಮನೆಗೆ ಭೇಟಿ ನೀಡಿದ ಪದಾಧಿಕಾರಿಗಳು ಸನ್ಮಾನಿಸಿದರು. ಸಂಸ್ಥೆ ಸಹಾಯಕ ಪಾಲಕ ಮಹೇಶ ಸಾಗರ್, ತಾಲೂಕು ಘಟಕದ ಕಾರ್ಯದರ್ಶಿ ವಾಸು ಕೊಳಗದ್, ಪದಾಧಿಕಾರಿಗಳಾದ ಅಜಿತ್ ಸುರನಾ, ಎನ್. ಶ್ರೀನಿವಾಸರಾವ್, ಪ್ರಕಾಶ ಛೋಪ್ರಾ, ಶ್ರೀಧರ್ ನಾಯಕ, ಎ. ಶಿವಕುಮಾರ, ವೀರೇಶ ಅರಿಕೇರಿ, ಮಂಜುನಾಥ ಹುಡೇದ್ ಇತರರಿದ್ದರು.