ಗಂಗಾವತಿ: ಜವಾಹರ ನವೋದಯ ವಿದ್ಯಾಲಯದ ಪ್ರವೇಶಕ್ಕಾಗಿ ಶನಿವಾರ ನಡೆದ ಪರೀಕ್ಷೆಗೆ 179 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು.
ನಗರದ ಗುಡ್‌ಶೆರ್ಡ್ ಪ್ರಾಥಮಿಕ ಶಾಲೆ, ಬೆಥೆಲ್ ಆಂಗ್ಲ ಮಾಧ್ಯಮ ಶಾಲೆ, ಲಿಟ್ಲ ಹಾರ್ಟ್ ಶಾಲೆ, ಲಯನ್ಸ್ ಮಾದರಿ ಹಿ.ಪ್ರಾ. ಶಾಲೆ ಮತ್ತು ಎಂಎನ್‌ಎಂ ಪಿಯು ಕಾಲೇಜಿನ ಪರೀಕ್ಷಾ ಕೇಂದ್ರಗಳಲ್ಲಿ ಎಕ್ಸಾಂ ನಡೆದಿದ್ದು, 1228 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದರು.
ಬೆಳಗ್ಗೆ 11.30ರಿಂದ 1.30ರವರೆಗಿನ ಪರೀಕ್ಷೆಯಲ್ಲಿ 1049 ವಿದ್ಯಾರ್ಥಿಗಳು ಹಾಜರಾಗಿದ್ದರು. ಪಾರದರ್ಶಕತೆ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್, ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು.
ಇದನ್ನೂ ಓದಿ:ನವೋದಯ ಉಗಮಕ್ಕೆ ಕುವೆಂಪು ನಿದರ್ಶನಗಳೇ ಆದರ್ಶ
ಈ ಬಗ್ಗೆ ಬಿಇಒ ಸೋಮಶೇಖರಗೌಡ ತಿಪ್ಪನಾಳ್ ಮಾತನಾಡಿ, ಕೇಂದ್ರ ಪುರಸ್ಕೃತ ಜೆಎನ್‌ವಿ ಶಾಲೆ ಪ್ರವೇಶಕ್ಕಾಗಿ 5 ಕೇಂದ್ರಗಳಲ್ಲಿ ಪರೀಕ್ಷೆ ಆಯೋಜಿಸಿದ್ದು, ಸುಸೂತ್ರವಾಗಿ ಪೂರ್ಣಗೊಂಡಿವೆ ಎಂದರು. ಪರೀಕ್ಷಾ ಕೇಂದ್ರ ಸುತ್ತಲೂ ನಿಷೇದಾಜ್ಞೆ ಜಾರಿಗೊಳಿಸಲಾಗಿತ್ತು.
ಪಾಲಕರನ್ನು ಸೆಳೆಯಲು ಕೋಚಿಂಗ್ ಸೆಂಟರ್‌ಗಳು ವಿವಿಧ ರೀತಿಯ ಕಸರತ್ತು ನಡೆಸಿದ್ದು, ಕರಪತ್ರ, ಭಿತ್ತಿ ಪತ್ರ ಮತ್ತು ಮೊಬೈಲ್ ಆ್ಯಪ್ ಮೂಲಕ ಗಮನಸೆಳೆಯಲೆತ್ನಿಸಿದವು.