ಪಿಂಚಣಿ ಹೆಚ್ಚಳಕ್ಕೆ ಆಗ್ರಹಿಸಿ ವಿಮುಕ್ತ ದೇವದಾಸಿ ಮಹಿಳಾ ವಿಮೋಚನಾ ಸಂಘದ ತಾಲೂಕು ಸಮಿತಿ ಸದಸ್ಯರು ಗಂಗಾವತಿ ಅಂಚೆ ಕಚೇರಿ ಮುಂದೆ ಪತ್ರಚಳವಳಿ ಮಂಗಳವಾರ ನಡೆಸಿದರು. ಕಾರ್ಯದರ್ಶಿ ಮಂಜುನಾಥ ಡಗ್ಗಿ, ಪದಾಧಿಕಾರಿಗಳಾದ ಮಹಾದೇವಿ, ಹುಲಿಗೆಮ್ಮ, ದುರುಗಮ್ಮ, ಕೆಂಚಮ್ಮ ಇತರರಿದ್ದರು.  
ಜಿಲ್ಲೆ

ಭೂಮಿ ವಿತರಣೆ ಯೋಜನೆ ಜಾರಿಗೊಳಿಸಿ

ಗಂಗಾವತಿ: ಪಿಂಚಣಿ ಹೆಚ್ಚಳಕ್ಕೆ ಆಗ್ರಹಿಸಿ ದೇವದಾಸಿ ಮಹಿಳಾ ವಿಮೋಚನಾ ಸಂಘದ ತಾಲೂಕು ಸಮಿತಿ ಸದಸ್ಯರು ನಗರದ ಅಂಚೆ ಕಚೇರಿ ಮುಂದೆ ಪತ್ರ ಚಳವಳಿ ಮಂಗಳವಾರ ನಡೆಸಿದರು.

ಸಿಎಂ ಸಿದ್ದರಾಮಯ್ಯಗೆ ಬೇಡಿಕೆಗಳನ್ನು ಈಡೇರಿಸುವಂತೆ ಬರೆದಿದ್ದ ಪತ್ರಗಳನ್ನು ಅಂಚೆ ಪೆಟ್ಟಿಗೆಗೆ ಹಾಕುವ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.

ಸಮಿತಿ ಕಾರ್ಯದರ್ಶಿ ಮಂಜುನಾಥ ಡಗ್ಗಿ ಮಾತನಾಡಿ, ಚುನಾವಣೆ ಪೂರ್ವದಲ್ಲಿ ವಿಮುಕ್ತ ದೇವದಾಸಿಯರ ಪಿಂಚಣಿ ಹೆಚ್ಚಿಸುವ ಕುರಿತು ಭರವಸೆ ನೀಡಿದ್ದು, ಅಧಿಕಾರಕ್ಕೆ ಬಂದು ವರ್ಷವಾದರೂ ಈಡೇರಿಸಿಲ್ಲ. ಅಗತ್ಯ ವಸ್ತುಗಳ ಬೆಲೆ ಏರಿಕೆ, ಕಡಿಮೆ ಪಿಂಚಣಿಯಿಂದ ಜೀವನ ನಿರ್ವಹಣೆ ದುಸ್ತರವಾಗಿದೆ. ಪಿಂಚಣಿ ಹೆಚ್ಚಳ ಜತೆಗೆ ಪ್ರೋತ್ಸಾಹಧನ, ಭೂಮಿ ವಿತರಣೆಯ ಯೋಜನೆಗಳನ್ನು ಕೂಡಲೇ ಜಾರಿಗೊಳಿಸುವಂತೆ ಒತ್ತಾಯಿಸಿದರು.

ಪದಾಧಿಕಾರಿಗಳಾದ ಮಹಾದೇವಿ, ಹುಲಿಗೆಮ್ಮ, ದುರುಗಮ್ಮ, ಕೆಂಚಮ್ಮ, ಹುಸೇನಪ್ಪ, ಗಿರಿಜಮ್ಮ, ಪಾರ್ವತಿ, ಲಕ್ಷ್ಮಮ್ಮ ಇತರರಿದ್ದರು.