ಗಂಗಾವತಿ ತಾಲೂಕಿನ ಹೊಸಬೆಣಕಲ್ ಸ.ಹಿ.ಪ್ರಾ. ಶಾಲೆಯಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣೆ ಉಚಿತ ಶಿಬಿರವನ್ನು ಡಿವೈಎಸ್ಪಿ ಸಿದ್ದಲಿಂಗಪ್ಪ ಗೌಡ ಪಾಟೀಲ್ ಸೋಮವಾರ ಉದ್ಘಾಟಿಸಿದರು. ಸದ್ಭಾವನಾ ಸೇವಾ ಸಂಸ್ಥೆ ಅಧ್ಯಕ್ಷ ಸುಬ್ರಮಣ್ಯ ರಾಯ್ಕರ್, ಗ್ರಾಪಂ ಅಧ್ಯಕ್ಷ ಶಿವಮೂರ್ತಿ ಯಾದವ್, ಸದಸ್ಯರಾದ ಶಿವಾನಂದಗೌಡ ಪೊ.ಪಾಟೀಲ್, ಬುಡ್ಡಪ್ಪ ಅಂಗಡಿ, ಬೆಟದಪ್ಪ, ಯಮನೂರಸಾಬ್ ಜಂತಕಲ್ ಇತರರಿದ್ದರು. 
ಜಿಲ್ಲೆ

ಸಾರ್ವಜನಿಕರ ಸೇವೆಗೆ ಸಂಘ-ಸಂಸ್ಥೆಗಳು ಮುಂದಾಗಲಿ

ಗಂಗಾವತಿ: ಗ್ರಾಮೀಣ ಭಾಗದ ಬಡ ಜನರ ಆರೋಗ್ಯ ರಕ್ಷಣೆಗೆ ಸಂಘ ಸಂಸ್ಥೆಗಳು ನೆರವಾಗಬೇಕಿದ್ದು, ಉಚಿತ ಶಿಬಿರ ಆಯೋಜನೆ ಮೂಲಕ ಆರೋಗ್ಯ ಸ್ವಸ್ಥ ಕಾಪಾಡುವಂತೆ ಡಿವೈಎಸ್ಪಿ ಸಿದ್ದಲಿಂಗಪ್ಪ ಗೌಡ ಪಾಟೀಲ್ ಹೇಳಿದರು.

ತಾಲೂಕಿನ ಹೊಸಬೆಣಕಲ್ ಸ.ಹಿ.ಪ್ರಾ. ಶಾಲೆಯಲ್ಲಿ ಗ್ರಾಪಂ, ಸದ್ಭಾವನಾ ಸೇವಾ ಸಂಸ್ಥೆ ಮತ್ತು ಯಶೋದಾ ೌಂಡೇಷನ್ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣೆ ಉಚಿತ ಶಿಬಿರ ಉದ್ಘಾಟಿಸಿ ಮಾತನಾಡಿದರು. ದೈನಂದಿನ ಬದುಕಿಗಾಗಿ ಪರದಾಡುವ ಗ್ರಾಮೀಣ ಭಾಗದ ಜನರು ಆರೋಗ್ಯದತ್ತ ಗಮನಹರಿಸುತ್ತಿಲ್ಲ. ಸಂಘಟನೆಗಳು ಆರೋಗ್ಯ ರಕ್ಷಣೆಗೆ ಪೂರಕ ಯೋಜನೆ ಹಮ್ಮಿಕೊಳ್ಳಬೇಕಿದ್ದು, ಉಚಿತ ಶಿಬಿರದ ಮೂಲಕ ಜಾಗೃತಿ ಮೂಡಿಸಬೇಕಿದೆ. ಸಂಸ್ಕಾರದ ಜತೆಗೆ ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ಸಲಹೆ ನೀಡಿದರು.

ಸಂಸ್ಥೆ ಅಧ್ಯಕ್ಷ ಸುಬ್ರಮಣ್ಯ ರಾಯ್ಕರ್ ಮಾತನಾಡಿ, ಸಾಮಾಜಿಕ, ಶೈಕ್ಷಣಿಕ ಪ್ರಗತಿಗೆ ಶ್ರಮಿಸುತ್ತಿದ್ದು, ಆರೋಗ್ಯ, ಸಂಸ್ಕಾರ ಮತ್ತು ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಶಿಬಿರದಲ್ಲಿ ವಿವಿಧ ರೋಗಗಳ ನಿರ್ವಹಣೆ ಮತ್ತು ಚಿಕಿತ್ಸೆ ಬಗ್ಗೆ ಮಾಹಿತಿ ನೀಡಲಾಯಿತು. 250ಕ್ಕೂ ಹೆಚ್ಚು ಜನರನ್ನು ತಪಾಸಿಸಿ, ಔಷಧ ಉಚಿತ ವಿತರಿಸಲಾಯಿತು. ಗ್ರಾಪಂ ಅಧ್ಯಕ್ಷ ಶಿವಮೂರ್ತಿ ಯಾದವ್, ಸದಸ್ಯರಾದ ಶಿವಾನಂದಗೌಡ ಪೊ.ಪಾಟೀಲ್, ಬುಡ್ಡಪ್ಪ ಅಂಗಡಿ, ಬೆಟದಪ್ಪ, ಯಮನೂರಸಾಬ್ ಜಂತಕಲ್, ಉಮಾದೇವಿ, ಮುಖ್ಯಶಿಕ್ಷಕ ಕಾಳೇಶ, ತಜ್ಞ ವೈದ್ಯರಾದ ಶಿವಕುಮಾರ ಮಾಲಿಪಾಟೀಲ್, ಸತೀಶ ರಾಯ್ಕರ್, ಡಾ. ಮಹಾಂತೇಶ ಪಟ್ಟಣಶೆಟ್ಟಿ, ಡಾ.ಪ್ರಭಾ ರಾಯ್ಕರ್, ಡಾ.ಭರತ್ ಮೇಕಾ, ಡಾ.ಮನೋಜ್ ಭಟ್, ಡಾ.ಅಬೀದ್ ಹುಸೇನ್, ಡಾ.ಪ್ರಶಾಂತ ದೇಸಾಯಿ ಇತರರಿದ್ದರು.