ಗಂಗಾವತಿ: ತಾಲೂಕಿನ ಐತಿಹಾಸಿಕ ಕ್ಷೇತ್ರ ಅಂಜನಾದ್ರಿ ಬೆಟ್ಟಕ್ಕೆ ವಿದೇಶಿ ಪ್ರವಾಸಿಗರ ಭೇಟಿ ಹೆಚ್ಚುತ್ತಿದ್ದು, ಹುಂಡಿಯಲ್ಲಿ ದೊರೆತ ವಿದೇಶಿ 3 ಕರೆನ್ಸಿ, 7 ನಾಣ್ಯಗಳು ಸಾಕ್ಷಿಕರಿಸಿವೆ.
ಕಳೆದ ಬಾರಿ ಹುಂಡಿ ಎಣಿಸಿದಾಗ ಪಾಕಿಸ್ತಾನದ ನಾಣ್ಯ ದೊರೆತಿತ್ತು. ಈ ಬಾರಿ ದಕ್ಷಿಣ ಆಫ್ರಿಕಾ, ಯುಎಇ, ಸೌದಿಅರೇಬಿಯಾ, ಥೈಲ್ಯಾಂಡ್, ಇಟಲಿ, ಓಮನ್, ಯುಕೆ ಮತ್ತು ನೇಪಾಳ ನಾಣ್ಯಗಳಿವೆ. ಭದ್ರತೆ ದೃಷ್ಟಿಯಿಂದ ತಿಂಗಳಿಗೊಮ್ಮೆ ದೇವಾಲಯದ ಹುಂಡಿ ತೆರೆಯಲಾಗುತ್ತಿದ್ದು, ಕಂದಾಯ ಮತ್ತು ಭಕ್ತರ ನೇತೃತ್ವದಲ್ಲಿ ಪೊಲೀಸ್ ಭದ್ರತೆಯಲ್ಲಿ ಮಂಗಳವಾರ ಹುಂಡಿ ಹಣ ಎಣಿಸಲಾಯಿತು. ಒಟ್ಟು 32.95ಲಕ್ಷ ರೂ. ಸಂಗ್ರಹವಾಗಿದ್ದರೆ, ಸೌತ್‌ಆಫ್ರಿಕಾ ಮತ್ತು ಯುನೈಟೆಡ್ ಸ್ಟೇಟ್ 3 ಕರೆನ್ಸಿಗಳಿವೆ.
ಗ್ರೇಡ್-2 ತಹಸೀಲ್ದಾರ್ ಮಹಾಂತಗೌಡ ಗೌಡರ್ ಮಾತನಾಡಿ, ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು, ಅದರಲ್ಲೂ ವಿದೇಶಿಗರ ದಂಡು ಹರಿದು ಬರುತ್ತಿದೆ. ಭಕ್ತರಿಗೆ ಮೂಲ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ ಎಂದರು. ಶಿರಸ್ತೇದಾರ್ ರವಿಕುಮಾರ ನಾಯಕ್ವಾಡಿ, ಕಂದಾಯ ನಿರೀಕ್ಷಕರಾದ ಮಹೇಶ್ ದಲಾಲ, ಹಾಲೇಶ ಗುಂಡಿ, ವಿಷಯ ನಿರ್ವಾಹಕರಾದ ಶ್ರೀಕಂಠ, ಗುರುರಾಜ, ಇಂದಿರಾ, ಶೇಖರಪ್ಪ, ಎಂ.ಡಿ.ರಫೀ, ಕೆ.ಕವಿತಾ, ಸೌಭಾಗ್ಯ, ಶ್ರೀರಾಮ ಜೋಶಿ, ಪವನ್ ಕುಮಾರ್ ನಿಲೋಗಲ್, ಮಂಜುನಾಥ್ ದುಮ್ಮಡಿ, ಮಾರುತಿ, ಪಿಕೆಜಿಬಿ ಬ್ಯಾಂಕ್ ಸಿಬ್ಬಂದಿ ಸುನೀಲ್,
ವೀರೇಶ್, ಶ್ರೀನಿವಾಸ, ದೇವಾಲಯ ವ್ಯವಸ್ಥಾಪಕ ಎಂ. ವೆಂಕಟೇಶ್ ಇತರರಿದ್ದರು. ಪೊಲೀಸ್ ಬಂದೊಬಸ್ತ್ ಹುಂಡಿ ಎಣಿಕೆ ನಡೆಯಿತು. ಕಳೆದ ಬಾರಿ ಎಣಿಕೇಲಿ 30.21 ಲಕ್ಷ ರೂ. ಸಂಗ್ರಹವಾಗಿತ್ತು.