ಗಂಗಾವತಿಯ ಶ್ರೀ ಶಾರದಾಂಬೆ ದೇವಾಲಯದಲ್ಲಿ ಗುರುದ್ವಾದಶಿ ನಿಮಿತ್ತ ಮಂಗಳವಾರ ಶ್ರೀಪಾದ ವಲ್ಲಭರ ಭಾವಚಿತ್ರದ ಪ್ರದಕ್ಷಿಣೆ ಜರುಗಿತು. ಶಂಕರ ಮಠದ ಧರ್ಮದರ್ಶಿ ನಾರಾಯಣರಾವ್ ವೈದ್ಯ, ಪ್ರಧಾನ ಅರ್ಚಕ ಕುಮಾರ ಭಟ್, ವಿಪ್ರ ಸಮಾಜದ ಮುಖಂಡರಾದ ಬಾಲಕೃಷ್ಣ ದೇಸಾಯಿ, ಶ್ರೀಪಾದರಾವ್ ಮುಧೋಳಕರ್, ರಾಘವೇಂದ್ರ ಅಳವಂಡಿಕರ್, ಪ್ರತಿಭಾ ಅಳವಂಡಿಕರ್ ಇತರರಿದ್ದರು.  
ಜಿಲ್ಲೆ

ಶ್ರದ್ಧಾಭಕ್ತಿಯಿಂದ ಗುರುದ್ವಾದಶಿ ಆಚರಣೆ

ಗಂಗಾವತಿ: ಶಾರದಾ ನಗರದ ಶ್ರೀ ಶಾರದಾಂಬೆ ದೇವಸ್ಥಾನದಲ್ಲಿ ಗುರುದ್ವಾದಶಿ ನಿಮಿತ್ತ ಮಂಗಳವಾರ ವಿಶೇಷ ಪೂಜೆ ಮತ್ತು ಧಾರ್ಮಿಕ ಉಪನ್ಯಾಸ ಜರುಗಿತು.

ಶ್ರೀಮಾತೆಗೆ ಹಾಗೂ ದೇವಾಲಯದಲ್ಲಿರುವ ಮೂರ್ತಿಗಳಿಗೆ ಅಭಿಷೇಕ, ವಿಶೇಷ ಪೂಜೆ, ದತ್ತ ಪಾದುಕಗೆಗಳಿಗೆ ಅಭಿಷೇಕ, ಅಷ್ಟೋತ್ತರ ಪಾರಾಯಣ, ಗುರು ಚರಿತ್ರೆ ಪಠಣ, ಭಜನೆ, ಭಾವಚಿತ್ರದೊಂದಿಗೆ ಪ್ರದಕ್ಷಿಣೆ ಜರುಗಿದವು. ಗುರುದ್ವಾದಶಿ ಮಹತ್ವ ಕುರಿತು ಜ್ಞಾನ ಮಂದಿರ ಮುಖ್ಯಸ್ಥ ಬೇವಿನಾಳ್ ಪ್ರಹ್ಲಾದಾಚಾರ್, ಶಿಕ್ಷಕಿ ಶಕುಂತಲಾ ರಾಜೀವ್ ಕುಲ್ಕರ್ಣಿ ಉಪನ್ಯಾಸ ನೀಡಿದರು.

ಇತ್ತೀಚಿಗೆ ಸದ್ಭಾವನಾ ಸಂಸ್ಥೆ ಆಯೋಜಿಸಿದ್ದ ರಾಮಾಯಣ ಪರೀಕ್ಷೆಯಲ್ಲಿ ಮೊದಲ ಸ್ಥಾನ ಪಡೆದ ವೀಣಾ ಅವರನ್ನು ಸನ್ಮಾನಿಸಲಾಯಿತು. ಶಂಕರ ಮಠದ ಧರ್ಮದರ್ಶಿ ನಾರಾಯಣರಾವ್ ವೈದ್ಯ ಮಾತನಾಡಿ, ಗುರುದ್ವಾದಶಿ ದಿನದಂತೆ ಶೃಂಗೇರಿ ಪೀಠದ ಶ್ರೀಭಾರತೀ ತೀರ್ಥಸ್ವಾಮೀಜಿ ಪೀಠಾರೋಹಣ ಕೈಗೊಂಡಿದ್ದು, ಸುವರ್ಣ ಮಹೋತ್ಸವ ನಿಮಿತ್ತ ಧಾರ್ಮಿಕ ಮತ್ತು ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.