ಗಂಗಾವತಿ: ಭವಿಷ್ಯ ರೂಪಿಸಿಕೊಳ್ಳಲು ಎಸ್ಸೆಸ್ಸೆಲ್ಸಿ ಮಹತ್ವದ ವೇದಿಕೆಯಾಗಿದ್ದು, ಉತ್ತಮ ಲಿತಾಂಶದೊಂದಿಗೆ ನಿರೀಕ್ಷಿತ ಗುರಿ ತಲುಪುವಂತೆ ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಪಾಟೀಲ್ ಹೇಳಿದರು.
ನಗರದ ಶ್ರೀ ಚನ್ನಬಸವಸ್ವಾಮಿ ದೇವಾಲಯದ ಸಭಾಂಗಣದಲ್ಲಿ ಸಿಬಿಎಸ್ ಕೋಚಿಂಗ್ ಸೆಂಟರ್‌ನಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಉಚಿತ ತರಬೇತಿ ಶಿಬಿರದ ಸಮಾರೋಪದಲ್ಲಿ ಭಾನುವಾರ ಮಾತನಾಡಿದರು.
ನಿರಂತರ ಅಧ್ಯಯನ, ಶ್ರದ್ಧೆಯಿಂದ ವಿಷಯ ಮನನ ಮಾಡಿಕೊಂಡರೆ ನಿರೀಕ್ಷಿತ ಲಿತಾಂಶ ಪಡೆಯಲು ಸಾಧ್ಯ. ಶಿಬಿರಗಳು ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿದ್ದು, ಆರ್ಥಿಕ ಹಿಂದುಳಿದ ಕುಟುಂಬಗಳಿಗೆ ವರದಾನವಾಗಿವೆ ಎಂದರು.
ಶಿಬಿರದ ಸಂಚಾಲಕ ಸಿದ್ದಲಿಂಗೇಶ್ವರ ಪೂಲಭಾವಿ ಮಾತನಾಡಿ, ಕಳೆದ 17 ವರ್ಷಗಳಿಂದ ಉಚಿತ ಶಿಬಿರ ಆಯೋಜಿಸುತ್ತಿದ್ದು, ಬಡ ಮಕ್ಕಳಿಗೆ ಕಲಿಕಾ ಸಾಮಾಗ್ರಿಗಳ ಜತೆಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಶಿಬಿರಾರ್ಥಿಗಳು ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕ ಗಳಿಸಿದರೆ ಗೌರವಿಸಲಾಗುವುದು ಎಂದರು. ತಿಂಗಳ ಪರ್ಯಂತ ನಡೆದ ಶಿಬಿರ ಕುರಿತು ಮಾಹಿತಿ ನೀಡಿದರು.
ವಕೀಲ ನಾಗರಾಜ್ ಗುತ್ತೇದಾರ್, ಶ್ರೀ ಚನ್ನಮಲ್ಲಿಕಾರ್ಜುನ ಟ್ರಸ್ಟ್ ಧರ್ಮದರ್ಶಿಗಳಾದ ಕೆ.ಚನ್ನಬಸಯ್ಯಸ್ವಾಮಿ, ಚಂದ್ರೇಗೌಡ ಪೊ.ಪಾಟೀಲ್, ಸಂಪನ್ಮೂಲ ಶಿಕ್ಷಕರಾದ ಬಸವರಾಜ ಬುಕನಟ್ಟಿ, ವಿರೂಪಾಕ್ಷಗೌಡ ಪೊ.ಪಾಟೀಲ್, ಉಲ್ಲಾಸ್‌ರೆಡ್ಡಿ, ಶಿವಾನಂದ ತಿಮ್ಮಾಪುರ, ಉಮೇಶ, ಮುರಳಿ, ಮಹೇಶ, ಮುಖೇಶ, ಸಚಿನ್, ಶಿಬಿರದ ವ್ಯವಸ್ಥಾಪಕ ಶರಣಪ್ಪ ಬೂದಗುಂಪಿ ಇತರರಿದ್ದರು.