ಗಂಗಾವತಿ ತಾಲೂಕಿನ ವಡ್ಡರಹಟ್ಟಿ ಕ್ಯಾಂಪ್‌ನ ಸ.ಹಿ.ಪ್ರಾ.ಶಾಲೆಯಲ್ಲಿ ಎಲ್‌ಕೆಜಿ ದಾಖಲಾತಿ ಆಂದೋಲನ ಬುಧವಾರ ಹಮ್ಮಿಕೊಳ್ಳಲಾಗಿತ್ತು. 
ಜಿಲ್ಲೆ

ಸರ್ಕಾರದ ಉಚಿತ-ಕಡ್ಡಾಯ ಶಿಕ್ಷಣ ಸದ್ಬಳಕೆಯಾಗಲಿ

ಗಂಗಾವತಿ: ತಾಲೂಕಿನ ವಡ್ಡರಹಟ್ಟಿ ಕ್ಯಾಂಪ್‌ನ ಸ.ಹಿ.ಪ್ರಾ. ಶಾಲೆಯಲ್ಲಿ ಆರಂಭವಾದ ಎಲ್‌ಕೆಜಿ ದಾಖಲಾತಿಗಾಗಿ ಪ್ರವೇಶಾತಿ ಆಂದೋಲನ ಬುಧವಾರ ಹಮ್ಮಿಕೊಳ್ಳಲಾಗಿತ್ತು. ಸರ್ಕಾರದ ಅಧಿಸೂಚನೆಯಂತೆ ಪ್ರಸಕ್ತ ಸಾಲಿನಿಂದಲೇ ಎಲ್‌ಕೆಜಿಗೆ ಪ್ರವೇಶ ಶುರುವಾಗಿದ್ದು, ಈ ಕುರಿತು ಪಾಲಕರಲ್ಲಿ ಜಾಗೃತಿ ಮೂಡಿಸಲಾಯಿತು.

ಆಂದೋಲನಕ್ಕೆ ಚಾಲನೆ ನೀಡಿದ ಗ್ರಾಪಂ ಅಧ್ಯಕ್ಷೆ ಮಂಜುಳಾ ಶಿವಪ್ಪ ನಾಯಕ ಮಾತನಾಡಿ, ಗುಣಮಟ್ಟದ ಶಿಕ್ಷಣಕ್ಕಾಗಿ ಶಿಕ್ಷಣ ಇಲಾಖೆ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಓದಲು ಅವಕಾಶ ನೀಡಿದ್ದು, ಬಡಜನರಿಗೆ ಅನುಕೂಲವಾಗಿದೆ.

3 ವರ್ಷ ಮೇಲ್ಪಟ್ಟ ಮಕ್ಕಳಿಗೆ ಪ್ರವೇಶ ನೀಡಲಾಗುತ್ತಿದ್ದು, ಖಾಸಗಿ ಶಾಲೆಗಳಂತೆ ಎಲ್ಲ ಸೌಲಭ್ಯ ಕಲ್ಪಿಸಲಾಗುವುದು. ಉಚಿತ ಮತ್ತು ಕಡ್ಡಾಯ ಶಿಕ್ಷಣ ಯೋಜನೆಯಡಿ ಪ್ರವೇಶ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, ಪಾಲಕರು ಸದ್ಬಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.

ಗ್ರಾಪಂ ಉಪಾಧ್ಯಕ್ಷ ಟಿ.ಗೌಸ್‌ಸಾಬ್, ಸದಸ್ಯ ಪೀರ್‌ಸಾಬ್, ಪಿಡಿಒ ಸುರೇಶ್ ಛಲವಾದಿ, ಎಸ್ಡಿಎಂಸಿ ಅಧ್ಯಕ್ಷ ದುರುಗಪ್ಪ, ಸದಸ್ಯರಾದ ಶಂಕ್ರಮ್ಮ, ಹುಲುಗಪ್ಪ, ಹುಲಿಗೆಮ್ಮ, ರಾಜಾ ಸಾಬ್, ಮುಖ್ಯಶಿಕ್ಷಕ ಸದಾನಂದ, ಸಿಆರ್‌ಪಿ ವಿಜಯಕುಮಾರ, ಬಿಆರ್‌ಪಿ ವಿಜಯಲಕ್ಷ್ಮೀ ಹಾಗೂ ಪಾಲಕರಿದ್ದರು.