ಗಂಗಾವತಿ 17ನೇ ವಾರ್ಡ್ ಅಮರ ಭಗತ್‌ಸಿಂಗ್ ನಗರದಲ್ಲಿ ವಿದ್ಯುತ್ ಉಳಿತಾಯಕ್ಕಾಗಿಬೀದಿ ದೀಪದ ಕಂಬಗಳಿಗೆ ಪ್ರಯೋಗಾರ್ಥವಾಗಿ ಎಲ್‌ಇಡಿ ಲೈಟ್‌ಗಳನ್ನು ಅಳವಡಿಸಲಾಯಿತು. ನಗರಸಭೆ ಸದಸ್ಯ ನೀಲಕಂಠಪ್ಪ ಕಟ್ಟಿಮನಿ, ವಾರ್ಡ್ ಮುಖಂಡರಾದ ಮಾರುತಿ, ಶಿವಣ್ಣ, ಮಲ್ಲಪ್ಪ, ತ್ಯಾವರಪ್ಪ,ಬಸಪ್ಪ, ಶರಣಪ್ಪ, ವೀರೇಶ, ವೆಂಕಟೇಶ ಇತರರಿದ್ದರು.  
ಜಿಲ್ಲೆ

ನಗರಸಭೆಯಿಂದ ಎಲ್‌ಇಡಿ ಲೈಟ್‌ಗಳ ಅಳವಡಿಕೆ

ಕುರುವತ್ತಿ ಶ್ರೀಕಾಂತಪ್ಪ

ಗಂಗಾವತಿ: ವಿದ್ಯುತ್ ಬಳಕೆ ಉಳಿತಾಯಕ್ಕಾಗಿ ನಗರಸಭೆಯಿಂದ ನಗರದ ಅಮರಭಗತ್‌ಸಿಂಗ್ ನಗರದಲ್ಲಿ ಎಲ್‌ಇಡಿ ಲೈಟ್‌ಗಳ ಬಳಕೆಗೆ ಜಾಗೃತಿ ಮೂಡಿಸಿದ್ದು, ಎಲ್‌ಇಡಿ ಲೈಟ್‌ಗಳನ್ನು ಶನಿವಾರ ಅಳವಡಿಸಲಾಯಿತು.

17ನೇ ವಾರ್ಡ್ ವ್ಯಾಪ್ತಿಯ ಅಮರಭಗತ್ ಸಿಂಗ್ ನಗರದ ಸ್ಲಂ ಬೋರ್ಡ್‌ನಲ್ಲಿ ನೋಂದಾಯಿತವಾಗಿದ್ದು, ಮೂಲ ಸೌಕರ್ಯ ಕೊರತೆ ಹೆಚ್ಚಾಗಿದೆ. ಬೀದಿ ದೀಪಗಳಿಗಾಗಿ ನಗರಸಭೆಯಿಂದ ಎಲ್‌ಇಡಿ ಲೈಟ್‌ಗಳ ಬಳಕೆಗೆ ಒತ್ತು ನೀಡಿದ್ದು, 6.5 ಲಕ್ಷ ರೂ.ವೆಚ್ಚದಲ್ಲಿ ಅಳವಡಿಸಲಾಗಿದೆ. ಈ ಬಗ್ಗೆ ನಗರಸಭೆ ಸದಸ್ಯ ನೀಲಕಂಠಪ್ಪ ಕಟ್ಟಿಮನಿ ಮಾತನಾಡಿ, ನಗರಸಭೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಆಡಳಿತವಿಲ್ಲದಿದ್ದರಿಂದ ಅಭಿವೃದ್ಧಿ ಕುಂಠಿತಗೊಂಡಿದ್ದು, ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಾಗುತ್ತಿದ್ದಂತೆ ಅಭಿವೃದ್ಧಿ ಪರ್ವ ಶುರುವಾಗಿದೆ.

ವಿದ್ಯುತ್ ಉಳಿತಾಯಕ್ಕಾಗಿ ಎಲ್‌ಇಡಿ ಲೈಟ್‌ಗಳ ಅಳವಡಿಕೆಗೆ ಶಿಾರಸು ಮಾಡಿರುವ ಹಿನ್ನೆಲೆಯಲ್ಲಿ ಪ್ರಾಯೋಗಿಕವಾಗಿ ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ಬೀದಿ ಕಂಬಗಳಿಗೂ ಎಲ್‌ಇಡಿ ಲೈಟ್ ಅಳವಡಿಸಲಾಗುವುದು. ಕುಡಿವ ನೀರಿನ ಯೋಜನೆ, ಮುಖ್ಯರಸ್ತೆ ಅಭಿವೃದ್ಧಿ, ಸಾಮೂಹಿಕ ಶೌಚಗೃಹ ನಿರ್ಮಾಣ ಸೇರಿ ನಗರೋತ್ಥಾನ ಯೋಜನೆಯಡಿ ಹಲವು ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದರು.