ಗಂಗಾವತಿ ಗುರುಭವನದಲ್ಲಿ ಎಸ್‌ಎ್ಐ ತಾಲೂಕು ಸಮಿತಿಯಿಂದ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಸಮಾವೇಶದಲ್ಲಿ ಎಸ್‌ಎ್ಐ ರಾಜ್ಯಾಧ್ಯಕ್ಷ ಅಮರೇಶ ಕಡಗದ್ ಮಾತನಾಡಿದರು. ತಾಲೂಕಾಧ್ಯಕ್ಷ ಗ್ಯಾನೇಶ ಕಡಗದ್, ಪದಾಧಿಕಾರಿಗಳಾದ ಶಿವಕುಮಾರ, ನಾಗರಾಜ್ ಇದ್ದರು.  
ಜಿಲ್ಲೆ

ಪ್ರಜಾಸತ್ತಾತ್ಮಕ ಹಕ್ಕುಗಳಿಗಾಗಿ ಎಸ್‌ಎಫ್‌ಐ ಹೋರಾಟ

ಕುರುವತ್ತಿ ಶ್ರೀಕಾಂತಪ್ಪ

ಗಂಗಾವತಿ: ಪ್ರಜಾಸತ್ತಾತ್ಮಕ ಹಕ್ಕುಗಳ ಉಳಿವಿಗಾಗಿ ವಿವಿ ವ್ಯಾಪ್ತಿಯಲ್ಲಿನ ವಿದ್ಯಾರ್ಥಿಗಳ ಸಂಘಕ್ಕೆ ಚುನಾವಣೆಯ ಅಗತ್ಯವಿದೆ ಎಂದು ಎಸ್‌ಎ್ಐ ರಾಜ್ಯಾಧ್ಯಕ್ಷ ಅಮರೇಶ ಕಡಗದ್ ಮಾತನಾಡಿದರು.

ನಗರದ ಗುರುಭವನದಲ್ಲಿ ಎಸ್‌ಎ್ಐ ತಾಲೂಕು ಸಮಿತಿಯಿಂದ ಗುರುವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಸಮಾವೇಶದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ರಕ್ಷಿಸಬೇಕಿದ್ದು, ಹೋರಾಟದ ಮೂಲಕ ಎಸ್‌ಎ್ಐ ಶ್ರಮಿಸುತ್ತಿದೆ. ಹೋರಾಟದ ಪ್ರತಿಲದಿಂದ ಬಿಸಿಎಂ ಮತ್ತು ಸಮಾಜ ಕಲ್ಯಾಣ ಇಲಾಖೆಯಿಂದ 180 ಹಾಸ್ಟೆಲ್‌ಗಳ ಆರಂಭಕ್ಕೆ ಸರ್ಕಾರ ಒಪ್ಪಿಗೆ ನೀಡಿದೆ. ವಿಳಂಬಕ್ಕೆ ಅವಕಾಶ ನೀಡದೇ ಎಲ್ಲ ಹಾಸ್ಟೆಲ್‌ಗಳನ್ನು ಕಾರ್ಯಾರಂಭ ಮಾಡದಿದ್ದರೆ ಡಿಸಿ ಕಚೇರಿ ಮುಂದೆ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.

ಸಮ್ಮೇಳನ ಉದ್ದೇಶ, ಹೋರಾಟ ಮತ್ತು ಸಂಘಟನೆ ಕುರಿತು ತಾಲೂಕಾಧ್ಯಕ್ಷ ಗ್ಯಾನೇಶ ಕಡಗದ್ ಮಾತನಾಡಿದರು. ಇದೇ ಸಂದರ್ಭದಲ್ಲಿ ಸಮಿತಿಯ ತಾಲೂಕು ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಪದಾಧಿಕಾರಿಗಳಾದ ಶಿವಕುಮಾರ, ನಾಗರಾಜ್ ಇದ್ದರು.

ತಾಲೂಕು ಘಟಕದ ಪದಾಧಿಕಾರಿಗಳು: ನಾಗರಾಜ್ (ಅಧ್ಯಕ್ಷ),ಬಾಲಾಜಿ (ಕಾರ್ಯದರ್ಶಿ), ಶರ್ೀ, ರಮೇಶ ( ಉಪಾಧ್ಯಕ್ಷರು),ದರ್ಶನ, ಬಸಯ್ಯ (ಸಹಕಾರ್ಯದರ್ಶಿ), ಮೌನೇಶ, ಹಸೀನಾಬಾನು,ಲಕ್ಷ್ಮಣ, ಅಕ್ಬರ್, ಮನೋಜ, ಬೀರಪ್ಪ, ಸಿಮ್ರಾನ್ (ತಾಲೂಕು ಸಮಿತಿ ಸದಸ್ಯರು) ಆಯ್ಕೆ ಮಾಡಲಾಗಿದೆ.