ಗಂಗಾವತಿ ತಾಲೂಕಿನ ಶ್ರೀರಾಮನಗರದ ಶ್ರೀ ಸ್ವಾಮಿ ವಿವೇಕಾನಂದ ಪಬ್ಲಿಕ್ ಸ್ಕೂಲ್‌ನಲ್ಲಿ ವಾರ್ಷಿಕೋತ್ಸವ ನಿಮಿತ್ತ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗಮನಸೆಳೆದ ಸಮೂಹ ನೃತ್ಯ.  
ಜಿಲ್ಲೆ

ಪ್ರತಿಭೆ ಪ್ರೋತ್ಸಾಹಿಸುವ ಕೆಲಸವಾಗಲಿ

ಕುರುವತ್ತಿ ಶ್ರೀಕಾಂತಪ್ಪ

ಗಂಗಾವತಿ: ತಾಲೂಕಿನ ಶ್ರೀರಾಮನಗರದ ಶ್ರೀ ಸ್ವಾಮಿ ವಿವೇಕಾನಂದ ಪಬ್ಲಿಕ್ ಸ್ಕೂಲ್‌ನಲ್ಲಿ ವಾರ್ಷಿಕೋತ್ಸವ ನಿಮಿತ್ತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಉಪನ್ಯಾಸ ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿದ ಬಿಇಒ ಮಂಜುನಾಥ ವಸದ್ ಮಾತನಾಡಿ, ಕಲಿಕೆ ಜತೆಗೆ ಪ್ರತಿಭೆ ಪ್ರೋತ್ಸಾಹದಂತಹ ಕಾರ್ಯಕ್ರಮ ಆಯೋಜಿಸುವಂತೆ ಸಲಹೆ ನೀಡಿದರು.

ಶಾಲಾಡಳಿತ ಮಂಡಳಿ ಕಾರ್ಯದರ್ಶಿ ಜಗನ್ನಾಥ್ ಆಲಂಪಲ್ಲಿ ಮಾತನಾಡಿ, ಸ್ವಾಮಿ ವಿವೇಕಾನಂದರ ಕನಸಿನ ಸದಢ ಯುವಕರನ್ನು ನಿರ್ಮಾಣ ಮಾಡುವ ಜವಾಬ್ದಾರಿ ಶಾಲೆ ಮತ್ತು ಪಾಲಕರ ಮೇಲಿದ್ದು, ದುರಾಭ್ಯಾಸ ಮೊಬೈಲ್ ಗೀಳಿಗೆ ಬಲಿಯಾಗುತ್ತಿರುವ ಮಕ್ಕಳ ಬಗ್ಗೆ ಜಾಗೃತಿವಹಿಸುವಂತೆ ಸಲಹೆ ನೀಡಿದರು.

ನಂತರ ಪಾಲಕರು, ಮಕ್ಕಳು ಮತ್ತು ಶಿಕ್ಷಕರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶಿಕ್ಷಣ ಸಂಯೋಜಕ ರಾಘವೇಂದ್ರ, ವೈದ್ಯೆ ವರಲಕ್ಷ್ಮೀ, ತಾಪಂ ಮಾಜಿ ಅಧ್ಯಕ್ಷ ಮಹ್ಮದ್ ರಫೀ, ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಬಿ. ಪಾರ್ಥಸಾರಥಿ, ಉಪಾಧ್ಯಕ್ಷೆ ಪ್ರಿಯಾಕುಮಾರಿ, ಪದಾಧಿಕಾರಿಗಳಾದ ವೆಂಕಟಕಷ್ಣ ಪೋಲಿನ್, ರಾಮರಾವ್ ಆಲಂಪಲ್ಲಿ, ಕಷ್ಣಪ್ರಸಾದ ಪೋಲಿನ, ರಜನಿ ಆಲಂಪಲ್ಲಿ, ಶ್ರುತಿ ಚೆನ್ನಪಾಟಿ, ಮುಖ್ಯಶಿಕ್ಷಕಿ ಶಾರೋನ್ ಇತರರಿದ್ದರು.