ಗಂಗಾವತಿ ತಾಲೂಕಿನ ವಡ್ಡರಹಟ್ಟಿಯ ಕೆಎಲ್‌ಇ ಸಂಸ್ಥೆಯ ಪಿಯು ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಪ್ರಸಕ್ತ ಸಾಲಿನ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆ ಕಾರ್ಯಕ್ರಮದಲ್ಲಿ ಪಿಯು ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಶನಿವಾರ ಸನ್ಮಾನಿಸಲಾಯಿತು. ಸರ್ಕಾರಿ ಕೃಷಿ ಪದವಿ ಕಾಲೇಜಿನ ವಿಶೇಷಾಧಿಕಾರಿ ಡಾ.ಎಸ್.ಟಿ. ಯಂಜೇರಪ್ಪ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಕಾರ್ಯಾಧ್ಯಕ್ಷ ಗಿರಿಯಪ್ಪ ಹೊಸ್ಕೇರಿ ಇತರರಿದ್ದರು.  
ಜಿಲ್ಲೆ

ನಿರಂತರ ಅಧ್ಯಯನದಿಂದ ಗುರಿ ತಲುಪಲು ಸಾಧ್ಯ

ಗಂಗಾವತಿ: ಏಕಾಗ್ರತೆ ಮತ್ತು ನಿರಂತರ ಅಧ್ಯಯನದಿಂದ ನಿರೀಕ್ಷಿತ ಗುರಿ ತಲುಪಲು ಸಾಧ್ಯ ಎಂದು ಸರ್ಕಾರಿ ಕೃಷಿ ಪದವಿ ಕಾಲೇಜಿನ ವಿಶೇಷಾಧಿಕಾರಿ ಡಾ.ಎಸ್.ಟಿ. ಯಂಜೇರಪ್ಪ ಸಲಹೆ ನೀಡಿದರು.

ತಾಲೂಕಿನ ವಡ್ಡರಹಟ್ಟಿಯ ಕೆಎಲ್‌ಇ ಸಂಸ್ಥೆಯ ಪಿಯು ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರಸಕ್ತ ಸಾಲಿನ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಿಗೆ ಚಾಲನೆ ನೀಡಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ಸಮಯ ಪ್ರಜ್ಞೆ ಮುಖ್ಯವಾಗಿದ್ದು, ನಿರ್ದಿಷ್ಟ ಗುರಿಯೊಂದಿಗೆ ಸಾಧನೆಯತ್ತ ಗಮನಹರಿಸಬೇಕು. ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲೂ ಸಕ್ರಿಯರಾಗುವಂತೆ ಸಲಹೆ ನೀಡಿದರು.

ಮಹಾವಿದ್ಯಾಲಯದ ಕಾರ್ಯಾಧ್ಯಕ್ಷ ಗಿರಿಯಪ್ಪ ಹೊಸ್ಕೇರಿ ಮಾತನಾಡಿ, ದಾನಿಗಳ ನೆರವಿನೊಂದಿಗೆ ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ಶಿಕ್ಷಣ ಒದಗಿಸಲಾಗಿದ್ದು, ಸ್ಥಳೀಯ ದಾನಿಗಳು ಮತ್ತು ಪಾಲಕರ ಪ್ರೋತ್ಸಾಹ ಮುಖ್ಯ ಎಂದರು. 2024-25ನೇ ಸಾಲಿನ ಪಿಯು ಪರಿಕ್ಷೇಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಮಾಜಿ ಶಾಸಕ ಪರಣ್ಣ ಮುನವಳ್ಳಿ, ಸ್ಥಾನಿಕ ಮಂಡಳಿ ಸದಸ್ಯ ಪ್ರಭಾಕರ ಹೊಸ್ಕೇರಿ, ಪ್ರಾಚಾರ್ಯೆ ಡಾ.ಡಿ.ಎ.ಮಾನಸಾ ಹಾಗೂ ಉಪನ್ಯಾಸಕರಿದ್ದರು.