ಮೈಕ್ರೋೈನಾನ್ಸ್ ಪ್ರತಿನಿಧಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಸಿಪಿಐ ತಾಲೂಕು ಸಮಿತಿ ಸದಸ್ಯರು ಗಂಗಾವತಿ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು. ಸಮಿತಿ ಜಿಲ್ಲಾ ಕಾರ್ಯದರ್ಶಿ ಎ.ಹುಲುಗಪ್ಪ, ಪದಾಧಿಕಾರಿಗಳಾದ ಎ.ಎಲ್. ತಿಮ್ಮಣ್ಣ, ಶೇಖಮ್ಮ, ಬದ್ರಿ ನಾಗರಾಜ್, ತಾಹೇರಾಬೇಗಂ, ರಾಬೀಯಾ ಇತರರಿದ್ದರು.  
ಜಿಲ್ಲೆ

ಮೈಕ್ರೋೈನಾನ್ಸ್ ವಿರುದ್ಧ ಕ್ರಮ ಕೈಗೊಳ್ಳಿ

ಕುರುವತ್ತಿ ಶ್ರೀಕಾಂತಪ್ಪ

ಗಂಗಾವತಿ: ಮೈಕ್ರೋೈನಾನ್ಸ್ ಪ್ರತಿನಿಧಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸಿಪಿಐ ತಾಲೂಕು ಸಮಿತಿ ಸದಸ್ಯರು, ವಿವಿಧ ಮೈಕ್ರೋೈನಾನ್ಸ್‌ನಿಂದ ಶೋಷಣೆಗೊಳಗಾಗಿರುವ ಗ್ರಾಹಕರೊಂದಿಗೆ ನಗರದಲ್ಲಿ ಪ್ರತಿಭಟನೆ ನಡೆಸಿ ಗ್ರೇಡ್ 2 ತಹಸೀಲ್ದಾರ್ ಮಹಾಂತಗೌಡ ಗೌಡರ್‌ಗೆ ಗುರುವಾರ ಮನವಿ ಸಲ್ಲಿಸಿದರು.

ಸಮಿತಿ ಜಿಲ್ಲಾ ಕಾರ್ಯದರ್ಶಿ ಎ.ಹುಲುಗಪ್ಪ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮೈಕ್ರೋೈನಾನ್ಸ್‌ಗಳ ಹಾವಳಿ ಹೆಚ್ಚಾಗಿದ್ದು, ಬಡ ಮತ್ತು ಕೂಲಿಕಾರ್ಮಿಕರನ್ನೇ ಗುರಿಯಾಗಿಟ್ಟುಕೊಂಡು ಸಾಲದ ವಹಿವಾಟು ನಡೆಸಲಾಗುತ್ತಿದೆ. ಸಕಾಲಕ್ಕೆ ಕಂತು ನೀಡದಿದ್ದರೆ ವಸೂಲಿ ನೆಪದಲ್ಲಿ ಮಾನಸಿಕ ಹಿಂಸೆ ನೀಡುತ್ತಿದ್ದು, ಮನೆ ಜಪ್ತಿಯಂತ ಕಾರ್ಯಕ್ಕೆ ಮುಂದಾಗುತ್ತಿದ್ದಾರೆ.

ಇನ್ನೂ ಕೆಲ ಕಂಪನಿಗಳು ಕಡಿಮೆ ಸಾಲ ನೀಡಿ, ಹೆಚ್ಚಿನ ಪ್ರಮಾಣದ ಸಾಲಕ್ಕೆ ಸಹಿ ಮಾಡಿಸಿಕೊಂಡು ಶೋಷಣೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ತಾಲೂಕಾಡಳಿತ ಈ ಇದನ್ನು ಗಂಭೀರವಾಗಿ ಪರಿಗಣಿಸಿ, ಮೈಕ್ರೋೈನಾನ್ಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಬೇಕು. ಕಿರುಕುಳ ನೀಡುವ ಪ್ರತಿನಿಧಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಪದಾಧಿಕಾರಿಗಳಾದ ಎ.ಎಲ್.ತಿಮ್ಮಣ್ಣ, ಶೇಖಮ್ಮ, ಬದ್ರಿನಾಗರಾಜ್, ತಾಹೇರಾಬೇಗಂ, ರಾಬೀಯಾ, ಮಹೆಬೂಬಿ ಇತರರಿದ್ದರು.