ಗಂಗಾವತಿ ತಾಲೂಕಿನ ವಡ್ಡರಹಟ್ಟಿ ಶ್ರೀ ಯಲ್ಲಮ್ಮ ದೇವಿ ದೇವಾಲಯ ರಸ್ತೆ ವ್ಯಾಪ್ತಿಯಲ್ಲಿ ಗ್ರಾಪಂನಿಂದ ಹಮ್ಮಿಕೊಂಡಿದ್ದ ಸ್ವಚ್ಛತಾ ಹೀ ಸೇವಾ ಅಭಿಯಾನಕ್ಕೆ ಪಿಡಿಒ ಸುರೇಶ ಛಲವಾದಿ ಶನಿವಾರ ಚಾಲನೆ ನೀಡಿದರು. 
ಜಿಲ್ಲೆ

ಸ್ವಚ್ಛ ಗ್ರಾಮ ನಿರ್ಮಾಣಕ್ಕೆ ಕೈಜೋಡಿಸಿ

ಶಶಿಧರ ಎಲ್

ಗಂಗಾವತಿ: ಗ್ರಾಮ ಸ್ವಚ್ಛತೆಗೆ ಗ್ರಾಮಸ್ಥರು ಕೈ ಜೋಡಿಸಬೇಕಿದ್ದು, ಯುವಕರು ಸ್ವಯಂಪ್ರೇರಣೆಯಿಂದ ಶ್ರಮದಾನದಲ್ಲಿ ಪಾಲ್ಗೊಳ್ಳಬೇಕಿದೆ ಎಂದು ಪಿಡಿಒ ಸುರೇಶ ಛಲವಾದಿ ಹೇಳಿದರು.

ತಾಲೂಕಿನ ವಡ್ಡರಹಟ್ಟಿ ಶ್ರೀ ಯಲ್ಲಮ್ಮ ದೇವಿ ದೇವಾಲಯ ರಸ್ತೆ ವ್ಯಾಪ್ತಿಯಲ್ಲಿ ಗ್ರಾಪಂನಿಂದ ಶನಿವಾರ ಹಮ್ಮಿಕೊಂಡಿದ್ದ ಸ್ವಚ್ಛತಾ ಹೀ ಸೇವಾ ಅಭಿಯಾನದ ಶ್ರಮದಾನ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.

ಗಾಂಧಿ ಜಯಂತಿ ನಿಮಿತ್ತ ಸೆ.14ರಿಂದ ಅ.1ರವರೆಗೆ ಸ್ವಚ್ಛತಾ ಹೀ ಸೇವಾ ಅಭಿಯಾನ ಹಮ್ಮಿಕೊಂಡಿದ್ದು, ನಿತ್ಯವೂ ಶ್ರಮದಾನ ಕೈಗೊಳ್ಳಲಾಗುವುದು. ಪರಿಸರ ಜಾಗೃತಿ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗುವುದು. ಸ್ವಚ್ಛತೆ ಕಾಪಾಡುವುದು ಪ್ರತಿಯೊಬ್ಬರ ಹಕ್ಕಾಗಿದ್ದು, ಸ್ವಚ್ಛ ಗ್ರಾಮ ನಿರ್ಮಾಣಕ್ಕೆ ಕೈಜೋಡಿಸುವಂತೆ ಮನವಿ ಮಾಡಿದರು.

ಗ್ರಾಪಂ ಸದಸ್ಯರು ಮತ್ತು ಸಿಬ್ಬಂದಿ ಶ್ರಮದಾನದಲ್ಲಿ ಪಾಲ್ಗೊಂಡಿದ್ದು, ಸಾರ್ವಜನಿಕರಿಗೂ ಭಾಗವಹಿಸಲು ಮನವಿ ಮಾಡಲಾಯಿತು. ಗ್ರಾಪಂ ಸದಸ್ಯರಾದ ಹನುಮನಗೌಡ, ಹೊನ್ನೂರಬೀ, ಭರತ್‌ಕುಮಾರ, ಕಾರ್ಯದರ್ಶಿ ಈಶಪ್ಪ, ಮುಖಂಡರಾದ ಶಿವಪ್ಪ ಹತ್ತಿಮರದ, ಸಿದ್ದನಗೌಡ, ಸಿಬ್ಬಂದಿ ವೀರೇಶ, ಅಮರೇಶ, ಗ್ರಾಮ ಕಾಯಕ ಮಿತ್ರೆ ಸುಜಾತಾ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.