ಡಾ.ಸಿದ್ದಯ್ಯ ಪುರಾಣಿಕ ಟ್ರಸ್ಟ್‌ಗೆ ಅಧ್ಯಕ್ಷರಾಗಿ ಆಯ್ಕೆಯಾದ ಅಜ್ಮೀರ್ ನಂದಾಪುರನ್ನು ಗಂಗಾವತಿ ಸಿಬಿಎಸ್ ಟೀಚರ್ಸ್ ವ್ಯಾಲಿಯಲ್ಲಿ ಸೋಮವಾರ ಸನ್ಮಾನಿಸಲಾಯಿತು. ಪ್ರಮುಖರಾದ ನಾಗಲಿಂಗಪ್ಪ , ಪ್ರಭಯ್ಯ, ಮಂಜುನಾಥ, ಸಿದ್ದಲಿಂಗೇಶ್ವರ ಪೂಲಭಾವಿ, ಶಿವಾನಂದ ತಿಮ್ಮಾಪುರ, ಸುಧಾಕರ್, ಶರಣಪ್ಪ ನಾಯಕ್, ಗುರುಪಾದಯ್ಯ, ಮಂಜುನಾಥ್, ರಾಜಶೇಖರ್, ಸತೀಶ ಸ್ಥಾವರ ಮಠ, ಶೇಖರ್ ಇತರರಿದ್ದರು.  
ಜಿಲ್ಲೆ

ಬಾಲ್ಯವಿವಾಹ ಮಾಡಿಸಲು ಯತ್ನಸಿದ್ದಕ್ಕೆ ಕಾರಗೃಹ ಶಿಕ್ಷೆ

ಕುರುವತ್ತಿ ಶ್ರೀಕಾಂತಪ್ಪ

ಗಂಗಾವತಿ: ಅಪ್ರಾಪ್ತ ಬಾಲಕಿ ಮದುವೆಗೆ ಯತ್ನಿಸಿದ ನಗರದ ಐವರು ಅಪರಾಧಿಗಳಿಗೆ 8ವರ್ಷದ ನಂತರ ನಗರದ ಜೆಎಂಎ್ಸಿ ನ್ಯಾಯಾಲಯ ತಲಾ ಐದು ವರ್ಷದ ಕಾರಗೃಹ ಶಿಕ್ಷೆ ಮತ್ತು 24ಸಾವಿರ ರೂ. ದಂಡ ವಿಧಿಸಿದೆ. ಬಾಲಕಿ ತಂದೆ ಮಕ್ಬುಲ್ ಖಾದ್ರಿ, ತಾಯಿ ಕುಸುಂಬಿ, ನೆರವಾದ ಸೈಯ್ಯದ್

ಜಾಪಾಶಾ, ಸೈಯ್ಯದ್ ಮೈನೂದ್ದೀನ್ ಖಾದ್ರಿ, ಖಾತುಬೀ ಶಿಕ್ಷೆಗೆ ಗುರಿಯಾದವರು. ಆರೋಪಿತರು ಅಪ್ರಾಪ್ತ ಬಾಲಕಿಯನ್ನು ಜನ್ಮದಿನ ದೃಢಿಕರಿಸುವ ಖೊಟ್ಟಿ ಪ್ರಮಾಣ ಪತ್ರ ನೀಡಿ, 2017ರಂದು ನಗರದ ಶಾದಿಮಹಲ್‌ನಲ್ಲಿ ಮದುವೆ ಮಾಡಲು ಯತ್ನಿಸಿದ್ದು, ಈ ಬಗ್ಗೆ ತನಿಖಾಧಿಕಾರಿ ಗುಲಾಮ್ ಅಹ್ಮದ್ ಎಂದು ನಗರದ ನ್ಯಾಯಾಲಯಕ್ಕೆ ಬಾಲ್ಯ ವಿವಾಹದ ನಿಷೇದ ಕಾಯ್ದೆಯಡಿ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.

ವಿಚಾರಣದಲ್ಲಿ ಸಾಕ್ಷಾೃಧಾರಗಳು ಕಂಡುಬಂದಿದ್ದರಿಂದ ಆರೋಪಿಗಳಿಗೆ ಶಿಕ್ಷೆ ವಿಧಿಸಿದ ತೀರ್ಪುನ್ನು ಜೆಎಂಎ್ಸಿ ಪ್ರಧಾನ ಸಿವಿಲ್ ನ್ಯಾಯಾಧೀಶ ನಾಗೇಶ ಪಾಟೀಲ್ ನೀಡಿದ್ದಾರೆ. ಸರ್ಕಾರದ ಪರ ಸಹಾಯಕ ಸರ್ಕಾರಿ ಅಭಿಯೋಜಕ ನಿರಂಜನಸ್ವಾಮಿ ದೇವಯ್ಯಸ್ವಾಮಿ ಹಿರೇಮಠ ವಾದಿಸಿದ್ದರು.