ಗಂಗಾವತಿ ನಗರದಲ್ಲಿ ಬೈಕ್ ಮತ್ತು ಗ್ಯಾಸ್ ಸಿಲಿಂಡರ್ ಕಳವು ಮಾಡುತ್ತಿದ್ದ ಮೂವರು ಆರೋಪಿಗಳಿಂದ ವಶಪಡಿಸಿಕೊಂಡಿರುವ ಬೈಕ್ ಮತ್ತು ಸಿಲಿಂಡರ್‌ಗಳೊಂದಿಗೆ ಡಿವೈಎಸ್ಪಿ ಸಿದ್ದಲಿಂಗಪ್ಪ ಗೌಡ ಪಾಟೀಲ್, ಪಿಐ ಪ್ರಕಾಶ ಮಾಳೆ, ಪಿಎಸೈ ಜಿ.ಟಿ.ನಾಗರಾಜ್ ಇದ್ದಾರೆ.  
ಜಿಲ್ಲೆ

ಮೂವರು ಬೈಕ್-ಗ್ಯಾಸ್ ಕಳ್ಳರ ಬಂಧನ

ಗಂಗಾವತಿ: ಬೈಕ್ ಮತ್ತು ಗ್ಯಾಸ್ ಸಿಲಿಂಡರ್‌ಗಳನ್ನು ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ನಗರ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ನಗರದ ಗೌಸ್, ಅಕ್ರಮ್ ಮತ್ತು ಮುನ್ವರ್ ಬಂಧಿತರಾಗಿದ್ದು, ನಾಲ್ಕು ಬೈಕ್, 11ಸಿಲಿಂಡರ್ ಸೇರಿ 1.5ಲಕ್ಷ ರೂ.ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಇತ್ತೀಚಿಗೆ ಬೈಕ್ ಮತ್ತು ಸಿಲಿಂಡರ್ ಕಳವು ಪ್ರಕರಣ ಹೆಚ್ಚುತ್ತಿದ್ದು, ಕೆಲ ಏರಿಯಾದಲ್ಲಿ ಕಳವಿಗೆ ಯತ್ನಿಸಿರುವ ಬಗ್ಗೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.

ಅನುಮಾನಸ್ಪದ ರೀತಿಯಲ್ಲಿ ವರ್ತಿಸುತ್ತಿದ್ದ ಮೂವರನ್ನು ವಿಚಾರಿಸಿದಾಗ ಕಳವು ಪ್ರಕರಣ ಬಯಲಾಗಿದೆ. ಆರೋಪಿಗಳ ಪತ್ತೆಗಾಗಿ ನಗರ ಪಿಐ ಪ್ರಕಾಶ ಮಾಳೆ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಪ್ರಕರಣ ಕುರಿತು ಡಿವೈಎಸ್ಪಿ ಸಿದ್ದಲಿಂಗಪ್ಪ ಗೌಡ ಪಾಟೀಲ್ ಮಾಹಿತಿ ನೀಡಿದರು. ಪಿಎಸೈ ಜಿ.ಟಿ.ನಾಗರಾಜ್ ಸೇರಿ ಪತ್ತೆ ತಂಡದ ಪೇದೆಗಳಿದ್ದರು.