ಗಂಗಾವತಿಯ ಉಪ್ಪಾರ ಓಣಿಯಲ್ಲಿ ಗಜನಾನ ಗೆಳೆಯರ ಬಳಗದಿಂದ ಹಮ್ಮಿಕೊಂಡಿದ್ದ ದಿ.ಪುನೀತ್ ರಾಜಕುಮಾರ ಸ್ಮರಣೆ ಕಾರ್ಯಕ್ರದಲ್ಲಿ ಕಲಾವಿದ ಅರಳಹಳ್ಳಿ ರೇವಣಸಿದ್ದಯ್ಯಸ್ವಾಮಿ ಬುಧವಾರ ಮಾತನಾಡಿದರು. ಕಲಾವಿದರಾದ ಪಂಪಾಪತಿ ಇಂಗಳಗಿ, ಮಧುಶ್ರೀ, ಬಳಗದ ಸದಸ್ಯರಾದ ಮುಕ್ಕಣ್ಣ ಮಾನಳ್ಳಿ, ರಾಜಪ್ಪ ಹುಲಿಗಿ, ಮಾಣಿಕಪ್ಪ ಗೌಳಿ ಇತರರಿದ್ದರು.  
ಜಿಲ್ಲೆ

ಜನಮಾನಸದಲ್ಲಿ ಉಳಿದ ರಾಜಕುಮಾರ

ಗಂಗಾವತಿ: ನಗರದ ಭಗೀರಥ ವೃತ್ತದ ಬಳಿಯ ಉಪ್ಪಾರ ಓಣಿಯಲ್ಲಿ ಶ್ರೀ ಗಜನಾನ ಗೆಳೆಯರ ಬಳಗದಿಂದ ಕಲಾ ಪ್ರಕಾರಗಳ ವಿಭಿನ್ನ ಕಾರ್ಯಕ್ರಮಗಳ ಮೂಲಕ ಚಿತ್ರನಟ ದಿ.ಪುನೀತ್ ರಾಜಕುಮಾರ್ ಸ್ಮರಣೆ ಬುಧವಾರ ಹಮ್ಮಿಕೊಳ್ಳಲಾಗಿತ್ತು.

ಕಲಾವಿದರಿಂದ ಗೀತಗಾಯನ, ನೃತ್ಯ, ಪೌರಾಣಿ ಕನಾಟಕಗಳ ಸಂಭಾಷಣೆಗಳೊಂದಿಗೆ ನುಡಿನಮನ ಸಲ್ಲಿಸಲಾಯಿತು. ದೀಪಪ್ರಜ್ವಲನದೊಂದಿಗೆ ಚಾಲನೆ ನೀಡಿದ ಹಿರಿಯ ಕಲಾವಿದ ಅರಳಹಳ್ಳಿಯ ರೇವಣಸಿದ್ದಯ್ಯಸ್ವಾಮಿ ಮಾತನಾಡಿ, ಶಾಲೆ, ಅನಾಥ, ವೃದ್ಧಾಶ್ರಮಗಳ ಸ್ಥಾಪನೆ ಮೂಲಕ ಪುನೀತ್ ರಾಜಕುಮಾರ ಜನಮಾನಸದಲ್ಲಿ ಉಳಿದಿದ್ದು, ಅನೇಕ ಕಲಾವಿದರಿಗೆ ನೆರವಾಗಿದ್ದಾರೆ ಎಂದರು.

ನಂತರ ವಿಐಪಿ ಮೆಲೋಡಿಸ್ ತಂಡದಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು. ಕಲಾವಿದರಾದ ಪಂಪಾಪತಿ ಇಂಗಳಗಿ, ಮಧುಶ್ರೀ ಬಳಗದ ಸದಸ್ಯರಾದ ಮುಕ್ಕಣ್ಣ ಮಾನಳ್ಳಿ, ರಾಜಪ್ಪ ಹುಲಿಗಿ, ಮಾಣಿಕಪ್ಪ ಗೌಳಿ, ಸಿದ್ರಾಮ ಗೌಳಿ, ಮಂಜುನಾಥ ಬುಕ್ಕಸಾಗರ, ಕೊಟ್ರಯ್ಯಸ್ವಾಮಿ, ಚನ್ನಪ್ಪ ವಣಗೇರಿ, ಮೌನೇಶ್ ಇಂಗಳಗಿ, ಮಂಜುನಾಥ್ ಮಡಿವಾಳರ್, ಖಾಜಾಸಾಬ್, ಈರಣ್ಣ ಮಡಿವಾಳರ್, ಪತ್ರಕರ್ತ ನಾಗರಾಜ ಇಂಗಳಗಿ ಇತರರಿದ್ದರು. ಹಿರಿಯ ಮತ್ತು ಕಿರಿಯ ಕಲಾವಿದರಿಂದ ಗಾಯನ ಹಮ್ಮಿಕೊಳ್ಳಲಾಗಿತ್ತು.