ಗಂಗಾವತಿ ಅಮರ ಭಗತ್ ಸಿಂಗ್ ನಗರದ ಸಮುದಾಯ ಭವನದಲ್ಲಿ ಭಗತ್ ಸಿಂಗ್ ಜನ್ಮದಿನ ಶನಿವಾರ ಆಚರಿಸಲಾಯಿತು. ನಗರಸಭೆ ಸದಸ್ಯ ನೀಲಕಂಠಪ್ಪ ಕಟ್ಟಿಮನಿ, ಮುಖಂಡರಾದ ಶಿವಣ್ಣ, ಮಾರುತಿ, ವೀರೇಶ್, ತ್ಯಾವರಪ್ಪ, ಶರಣಪ್ಪ ಇತರರರಿದ್ದರು. 
ಜಿಲ್ಲೆ

ಯುವ ಪೀಳಿಗೆಗೆ ಮಾದರಿ

ಪ್ರವೀಣ ಉದುಸಾ ದಲಬಂಜನ್

ಗಂಗಾವತಿ: ನಗರದ ಅಮರ ಭಗತ್ ಸಿಂಗ್ ನಗರದ ಸಮುದಾಯ ಭವನದಲ್ಲಿ ಸ್ಥಳೀಯ ಯುವಕರ ಬಳಗದಿಂದ ಕ್ರಾಂತಿಕಾರ ಹೋರಾಟಗಾರ ಭಗತ್ ಸಿಂಗ್ ಜನ್ಮದಿನ ಶನಿವಾರ ಆಚರಿಸಲಾಯಿತು.

ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಿದ ನಗರಸಭೆ ಸದಸ್ಯ ನೀಲಕಂಠಪ್ಪ ಕಟ್ಟಿಮನಿ ಮಾತನಾಡಿ, ಸ್ವಾತಂತ್ರ್ಯ ಸಂಗ್ರಾಮದ ಹೋರಾಟದಲ್ಲಿ ಚಿಕ್ಕ ವಯಸ್ಸಿನಲ್ಲಿ ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಇಳಿದ ಮಹಾನ್ ಕ್ರಾಂತಿಕಾರಿ ಹೋರಾಟಗಾರ ಭಗತ್ ಸಿಂಗ್ ಯುವ ಪೀಳಿಗೆಗೆ ಮಾದರಿ. ಜೀವ ಭಯ ತೊರೆದು ಬ್ರಿಟಿಷರ ವಿರುದ್ಧ ಸಮರ ಸಾರಿದ ಭಗತ್‌ಸಿಂಗ್, ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಕ್ರಾಂತಿಕಾರಿ ಹೋರಾಟಗಾರ. ದೇಶಕ್ಕಾಗಿ ಯುವಕರು ತ್ಯಾಗ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕಲಿದ್ದು, ಸಾಮರಸ್ಯ ಕಾಪಾಡುಲು ಸಲಹೆ ನೀಡಿದರು. ಮುಖಂಡರಾದ ಶಿವಣ್ಣ, ಮಾರುತಿ, ವೀರೇಶ್, ತ್ಯಾವರಪ್ಪ, ಶರಣಪ್ಪ ಇತರರರಿದ್ದರು.