ಗಂಗಾವತಿ 19ನೇ ವಾರ್ಡ್ ನೇಕಾರ ಓಣಿಯಲ್ಲಿ ನವೀಕರಿಸಿದ ಅಣ್ಣಿಗೇರಿ ಮಸೀದಿಯ ಆಶುರ್‌ಖಾನ್ ಅನ್ನು ಪೀರಲು ದೇವರಿಗೆ ಪೂಜೆ ಸಲ್ಲಿಸುವ ಮೂಲಕ ಸೋಮವಾರ ಉದ್ಘಾಟಿಸಲಾಯಿತು. ಮಾಜಿ ಸಚಿವ ಎಂ.ಮಲ್ಲಿಕಾರ್ಜುನನಾಗಪ್ಪ, ನಗರಸಭೆ ಸದಸ್ಯೆ ಸುನೀತಾ ತಿಪ್ಪಣ್ಣ ಶ್ಯಾವಿ, ಮುಖಂಡರಾದ ಟಿ.ಖಾಜಾಪಾಷಾ, ಹುಸೇನ್‌ಪಾಷಾ ಇತರರಿದ್ದರು.  
ಜಿಲ್ಲೆ

ಸರ್ವಧರ್ಮದ ಭಾವೈಕ್ಯತೆ ಸಂಕೇತ ಆಶುರ್‌ಖಾನ್

ಕುರುವತ್ತಿ ಶ್ರೀಕಾಂತಪ್ಪ

ಗಂಗಾವತಿ: ನಗರದ 19ನೇ ವಾರ್ಡ್ ನೇಕಾರ ಓಣಿಯಲ್ಲಿ ನವೀಕರಿಸಿದ ಅಣ್ಣಿಗೇರಿ ಮಸೀದಿಯ ಆಶುರ್‌ಖಾನ್ ಸೋಮವಾರ ಉದ್ಘಾಟಿಸಲಾಯಿತು.

ಪುರಾತನ ಆಶುರ್‌ಖಾನ್ ಶಿಥಿಲಗೊಂಡಿತ್ತು. ಸ್ಥಳೀಯ ಸರ್ವಧರ್ಮದವರ ಸಹಕಾರರೊಂದಿಗೆ ನವೀಕರಣಗೊಳಿಸಿದ್ದು, ಮೊಹರಂ ಹಬ್ಬದ ಪೀರಲು ದೇವರನ್ನು ಪ್ರತಿಷ್ಠಾಪಿಸುವ ಮೂಲಕ ಸಾಂಕೇತಿಕ ಉದ್ಘಾಟಿಸಲಾಯಿತು.

ನಗರಸಭೆ ಸದಸ್ಯೆ ಸುನೀತಾ ತಿಪ್ಪಣ್ಣ ಶ್ಯಾವಿ ಮಾತನಾಡಿ, ಆಶುರ್‌ಖಾನ್ ಸರ್ವಧರ್ಮದ ಭಾವೈಕ್ಯತೆ ಕೇಂದ್ರವಾಗಿದ್ದು, ಹಲವು ವರ್ಷಗಳಿಂದ ಮೊಹರಂ ಹಬ್ಬದ ಪೀರಲು ದೇವರುಗಳನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಇತ್ತೀಚಿಗೆ ಶಿಥಿಲಗೊಂಡಿದ್ದು, ಸ್ಥಳೀಯರ ಸಹಕಾರದೊಂದಿಗೆ ನವೀಕರಣಗೊಳಿಸಲಾಗಿದೆ. ವಿದ್ಯುತ್ ಸೇರಿ ಇತರ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದರು.

ಮಾಜಿ ಸಚಿವ ಎಂ.ಮಲ್ಲಿಕಾರ್ಜುನಾಗಪ್ಪ, ಮುಖಂಡರಾದ ಟಿ.ಖಾಜಾಪಾಷಾ, ಹುಸೇನ್‌ಪಾಷಾ, ತೋಶಿಬ್ ಸಾಹೇಬ್, ಹನ್ೀ ಯಾಜ್, ಇಮಾಮ್‌ಹುಸೇನ್, ಶ್ಯಾಮೀದ್‌ಸಾಬ್, ಹಜರತ್ ಹುಸೇನ್ ಪಾಷಾ ಇತರರಿದ್ದರು.