ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಿಸದೆ ನಿರ್ಲಕ್ಷಿಸಿದ ಕನಕಗಿರಿ ತಾಲೂಕಿನ ಗೋಡಿನಾಳ ಸ.ಕಿ.ಪ್ರಾ.ಶಾಲೆ ಶಿಕ್ಷಕರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಎಸ್‌ಎ್ಐ ತಾಲೂಕು ಸಮಿತಿ ಸದಸ್ಯರು ಗಂಗಾವತಿ ಬಿಇಒ ಕಚೇರಿ ಅಧೀಕ್ಷಕಿ ರೇಣುಕಾಗೆ ಮನವಿ ಸಲ್ಲಿಸಿದರು. ಅಧ್ಯಕ್ಷ ಅಮರೇಶ ಕಡಗದ್, ತಾಲೂಕಾಧ್ಯಕ್ಷ ಗ್ಯಾನೇಶ ಕಡಗದ್, ಪದಾಧಿಕಾರಿಗಳಾದ ರಮೇಶ, ಮಂಜುನಾಥ ಇತರರಿದ್ದರು.  
ಜಿಲ್ಲೆ

ಅಂಬೇಡ್ಕರ್ ಜಯಂತಿ ಆಚರಿಸದೆ ನಿರ್ಲಕ್ಷೃ

ಗಂಗಾವತಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಿಸದೇ ನಿರ್ಲಕ್ಷಿಸಿದ ಕನಕಗಿರಿ ತಾಲೂಕಿನ ಗೋಡಿನಾಳ ಸ.ಕಿ.ಪ್ರಾ.ಶಾಲೆ ಶಿಕ್ಷಕರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಎಸ್‌ಎ್ಐ ತಾಲೂಕು ಸಮಿತಿ ಸದಸ್ಯರು ನಗರದ ಬಿಇಒ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿ ಕಚೇರಿ ಆಧೀಕ್ಷಕಿ ರೇಣುಕಾಗೆ ಮನವಿ ಸಲ್ಲಿಸಿದರು.

ತಾಲೂಕು ಸಮಿತಿ ಅಧ್ಯಕ್ಷ ಗ್ಯಾನೇಶ ಕಡಗದ್ ಮಾತನಾಡಿ, ದೇಶಾದ್ಯಂತ ಭಾರತ ರತ್ನ ಅಂಬೇಡ್ಕರ್ ಜಯಂತಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಶಾಲೆ, ಕಾಲೇಜುಗಳಲ್ಲಿ ಕಡ್ಡಾಯವಾಗಿ ಆಚರಿಸುವಂತೆ ಸರ್ಕಾರ ಆದೇಶ ಹೊರಡಿಸಿದೆ. ಗೋಡಿನಾಳ ಶಾಲೆಯಲ್ಲಿ ಜಯಂತಿ ಆಚರಿಸಿಲ್ಲ.

ಶಾಲೆಗೆ ಮುಖ್ಯ ಮತ್ತು ಸಹ ಶಿಕ್ಷಕರು ಬಂದಿಲ್ಲ. ಸರ್ಕಾರಿ ಆದೇಶ ಉಲ್ಲಂಸಿರುವ ಮುಖ್ಯಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಬೇದೆ. ನಿರ್ಲಕ್ಷಿಸಿದರೆ ಬಿಇಒ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗುವುದು ಎಂದರು. ಸಮಿತಿ ಅಧ್ಯಕ್ಷ ಅಮರೇಶ ಕಡಗದ್, ಪದಾಧಿಕಾರಿಗಳಾದ ರಮೇಶ, ಮಂಜುನಾಥ, ನೂರ್‌ಹುಸೇನ್ ಇತರರಿದ್ದರು.