ಅಂಜನಾದ್ರಿಯ ಆಂಜನೇಯ ದೇವಾಲಯ ಹುಂಡಿ ಹಣ ಎಣಿಸುತ್ತಿರುವ ಮುಜರಾಯಿ ಮತ್ತು ಕಂದಾಯ ಇಲಾಖೆ ಸಿಬ್ಬಂದಿ.  
ಜಿಲ್ಲೆ

ಅಂಜನಾದ್ರಿ ಹುಂಡೀಲಿ 26.60 ಲಕ್ಷ ರೂ. ಸಂಗ್ರಹ

ಗಂಗಾವತಿ: ತಾಲೂಕಿನ ಅಂಜನಾದ್ರಿಯ ಶ್ರೀ ಆಂಜನೇಯ ದೇವಾಲಯ ಹುಂಡಿಯಲ್ಲಿ 26.60 ಲಕ್ಷ ರೂ. ಸಂಗ್ರಹವಾಗಿದ್ದು, ವಿದೇಶದ ಒಂಬತ್ತು ನಾಣ್ಯಗಳು ಪತ್ತೆಯಾಗಿವೆ.

ಮುಜರಾಯಿ ಮತ್ತು ಕಂದಾಯ ಇಲಾಖೆ ನೇತೃತ್ವದಲ್ಲಿ ಹುಂಡಿ ಎಣಿಕೆ ಕಾರ್ಯ ಸೋಮವಾರ ಕೈಗೆತ್ತಿಕೊಂಡಿದ್ದು, ಭಕ್ತರು ಸಾಥ್ ನೀಡಿದರು. 40 ದಿನಗಳ ಅವಧಿಯಲ್ಲಿ 26,60,917 ರೂ. ಸಂಗ್ರಹ ಜತೆಗೆ ಯುಎಸ್‌ಎ, ಯುಎಇ, ನೇಪಾಳ, ಸೌದಿಆರೇಬಿಯಾ, ಹಾಂಗ್‌ಕಾಂಗ್, ಸಿಂಗಾಪುರ, ರಷ್ಯಾ ದೇಶದ ನಾಣ್ಯಗಳು ಸಿಕ್ಕಿವೆ.

ಮುನ್ನೆಚ್ಚರಿಕೆ ಕ್ರಮವಾಗಿ ತಿಂಗಳಿಗೊಮ್ಮೆ ಹುಂಡಿ ಹಣ ಎಣಿಸಲಾಗುತ್ತಿದ್ದು, ಸಿಸಿ ಕ್ಯಾಮರಾ ಕಣ್ಗಾವಲಿನಲ್ಲಿ ನಿರ್ವಹಿಸಲಾಗಿದೆ. ಅಂಜನಾದ್ರಿ ಬೆಟ್ಟದಲ್ಲಿ ವ್ಯವಸ್ಥೆ ಮತ್ತು ಭಕ್ತರಿಗೆ ಸೌಲಭ್ಯಗಳ ಕುರಿತು ಗ್ರೇಡ್ 2 ತಹಸೀಲ್ದಾರ್ ಮಹಾಂತಗೌಡ ಗೌಡರ್ ಮಾಹಿತಿ ನೀಡಿದರು.

ಶಿರಸ್ತೇದಾರಾದ ಕೃಷ್ಣವೇಣಿ, ರವಿಕುಮಾರ್ ನಾಯಕ್ವಾಡಿ, ಶ್ರೀಕಂಠ, ಗುರುರಾಜ, ಇಂದಿರಾ, ಮಂಜುನಾಥ ಹಿರೇಮಠ, ಮಹಮ್ಮದ್ ರಫಿ, ಗಾಯತ್ರಿ, ಶ್ರೀಜೋಶಿ ಸೇರಿ ಗ್ರಾಮ ಆಡಳಿತ ಅಧಿಕಾರಿಗಳು ಮತ್ತು ಪಿಕೆಜಿಬಿ ಸಿಬ್ಬಂದಿ ಭಾಗವಹಿಸಿದ್ದರು. ಕಳೆದ ಬಾರಿ ಅ.24ರಂದು ಹುಂಡಿ ತೆರೆದಾಗ 33.79 ಲಕ್ಷ ರೂ. ಸಂಗ್ರಹವಾಗಿತ್ತು.