ಗಂಗಾವತಿ: ತಾಲೂಕಿನ ಆನೆಗೊಂದಿಯ ವಾಲಿಕಿಲ್ಲಾ ಮ್ಯಾಗೋಟದ ಶ್ರೀ ಆದಿಶಕ್ತಿ ದೇವಾಲಯದಲ್ಲಿ ಗುರುಪೂರ್ಣಿಮೆ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮ ಭಾನುವಾರ ಹಮ್ಮಿಕೊಳ್ಳಲಾಗಿತ್ತು.
ಬೆಳಗ್ಗೆಯಿಂದಲೇ ವಿಶೇಷ ಪೂಜೆ, ಮೂರ್ತಿಗೆ ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ, ಹೂವಿನ ಅಲಂಕಾರ, ಗೋಪೂಜೆ, ಚಂಡಿಯಾಗ, ಪೂರ್ಣಾಹುತಿ ಮತ್ತು ಸಾಮೂಹಿಕ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು.
ಇದೇ ಸಂದರ್ಭದಲ್ಲಿ ವಿವಿಧ ಜಿಲ್ಲೆಗಳ ಭಕ್ತರು, ದೇವಾಲಯದ ಮುಖ್ಯಸ್ಥ ಬ್ರಹ್ಮಾನಂದಸ್ವಾಮೀಜಿಗೆ ತುಲಾಭಾರ ನೆರವೇರಿಸುವ ಮೂಲಕ ಗುರುಪೂರ್ಣಿಮೆಯ ಭಕ್ತಿ ಸಲ್ಲಿಸಿದರು. ಧಾರ್ಮಿಕ ಕಾರ್ಯಕ್ರಮ ಹೆಚ್ಚಾದಂತೆಲ್ಲ ಸಮಾಜದ ಅಭಿವೃದ್ಧಿ ಸಾಧ್ಯ. ಎಲ್ಲ ವರ್ಗದವರೂ ಭಾಗವಹಿಸಿ ತುಲಭಾರ ನೆರವೇರಿಸುವ ಮೂಲಕ ಜವಾಬ್ದಾರಿ ಹೆಚ್ಚಿಸಿದ್ದಾರೆ ಎಂದು ದೇವಾಲಯದ ವ್ಯವಸ್ಥಾಪಕ ರಾಜಣ್ಣ ಸ್ವಾಮಿ ಹೇಳಿದರು.
ವಿವಿಧ ಸಮಾಜದ ಮುಖಂಡರಾದ ತಿಮ್ಮಪ್ಪ ಲೋಕಾಪುರ, ಗೋವರ್ಧನರಾಜು, ಜಿ.ರಾಮು, ಆನೆಗೊಂದಿ ಮುತ್ತು, ಬಾಬುಲಾಲ್ ಬಾಂಠಿಯಾ, ಉಗಂರಾಜ್ ಬಂಬ್, ಮಹಾವೀರ ಜೈನ್, ಜಿ.ಹರಿಬಾಬು ಇತರರಿದ್ದರು.