ಗಂಗಾವತಿ ಎಪಿಎಂಸಿ ಪ್ರಾಂಗಣದಲ್ಲಿರುವ ಆಗ್ರೋಸ್ ಸರ್ವಿಸ್ ಘಟಕದ ರಸಗೊಬ್ಬರ ಮಾರಾಟ ಮಳಿಗೆಯನ್ನು ಕೃಷಿ ಇಲಾಖೆ ಅಧಿಕಾರಿಗಳ ತಂಡ ಸೋಮವಾರ ಜಪ್ತಿ ಮಾಡಿತು. ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಪಟ್ಟದಕಲ್, ಕೃಷಿ ಅಧಿಕಾರಿಗಳಾದ ಮಾರೆಪ್ಪ, ಚನ್ನಬಸವ, ಲಕ್ಷ್ಮೀ ಇತರರಿದ್ದರು.  
ಜಿಲ್ಲೆ

ನಿಯಮ ಮೀರಿ ರಸಗೊಬ್ಬರ ಮಾರಾಟ

ಗಂಗಾವತಿ: ಕೃಷಿ ಇಲಾಖೆ ಕಾಯ್ದೆ ಅನ್ವಯ ರಸಗೊಬ್ಬರ ಮಾರಾಟ ಮಾಡದ ಆರೋಪದಡಿ ನಗರದ ಎಪಿಎಂಸಿ ಪ್ರಾಂಗಣದಲ್ಲಿರುವ ಆಗ್ರೋಸ್ ಸರ್ವಿಸ್ ಘಟಕದ ರಸಗೊಬ್ಬರ ಮಾರಾಟ ಮಳಿಗೆಯನ್ನು ಕೃಷಿ ಇಲಾಖೆ ಅಧಿಕಾರಿಗಳ ತಂಡ ಸೋಮವಾರ ಜಪ್ತಿ ಮಾಡಿತು.

ರಸಗೊಬ್ಬರ ಕ್ರಿಮಿನಾಶಕ ಬೀಜ ಮಾರಾಟಗಾರರ ಸಂಘ ನೀಡಿದ ದೂರಿನ ಅನ್ವಯ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಪಟ್ಟದಕಲ್ ನೇತೃತ್ವದ ಕೃಷಿ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿತು. ಮೇಲ್ನೋಟಕ್ಕೆ ಇಲಾಖೆ ಷರತ್ತುಗಳನ್ನು ಉಲ್ಲಂಸಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಜಪ್ತಿ ಮಾಡಿದ್ದು, ಕೆಲ ದಾಖಲೆಗಳನ್ನು ವಶಪಡಿಸಿಕೊಂಡಿದೆ.

ಈ ಕುರಿತು ಸಂತೋಷ ಪಟ್ಟದಕಲ್ ಮಾತನಾಡಿ, ರೈತರಿಗೆ ರಸೀದಿ ನೀಡದೆ ರಸಗೊಬ್ಬರ ಮಾರಾಟ ಮಾಡುತ್ತಿದ್ದು, ಯೂರಿಯಾ ರಸಗೊಬ್ಬರ ದಾಸ್ತಾನಿದ್ದರೂ ರೈತರಿಗೆ ವಿತರಿಸಿಲ್ಲ. ಮಾರಾಟದರದ ಮಾಹಿತಿ ಲಕ ಮತ್ತು ಅನುಮತಿ ಪತ್ರ ಪ್ರದರ್ಶಿಸಿಲ್ಲ. ರಸಗೊಬ್ಬರ ಮಾದರಿ ಪಡೆದುಕೊಳ್ಳಲು ಬಂದಾಗ ಸಿಬ್ಬಂದಿಗೆ ಅಡ್ಡಿಪಡಿಸಿದ್ದು, ಇಲಾಖೆ ಷರತ್ತಿನಂತೆ ಮಾರಾಟ ವ್ಯವಸ್ಥೆಯಿಲ್ಲ. ಹೊರ ಜಿಲ್ಲೆಯಿಂದ ಆಮದು ಮಾಡಿಕೊಳ್ಳುವಾಗಲೂ ನಿಯಮಾವಳಿ ಪಾಲಿಸಿಲ್ಲ. ಇಲಾಖೆಯ 14ಕ್ಕೂ ಷರತ್ತು ಉಲ್ಲಂಸಿರುವುದು ಕಂಡು ಬಂದಿದ್ದು, ಪರವಾನಗಿ ರದ್ದುಪಡಿಸುವಂತೆ ಮೇಲಧಿಕಾರಿಗಳಿಗೆ ಶಿಾರಸು ಮಾಡಲಾಗಿದೆ ಎಂದರು.

ಕೃಷಿ ಅಧಿಕಾರಿಗಳಾದ ಮಾರೆಪ್ಪ, ಚನ್ನಬಸವ, ಲಕ್ಷ್ಮೀ, ಅಶೋಕ, ನಾಗರಾಜ್ ಇತರರಿದ್ದರು. ತಾಲೂಕಿನ ಶ್ರೀರಾಮನಗರ, ಕಾರಟಗಿ ಮಾರಾಟ ಮಳಿಗೆಯಲ್ಲೂ ಕೃಷಿ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿತು.