ಗಂಗಾವತಿ: ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗೆ ಬಹುಕೋಟಿ ರೂ. ವೆಚ್ಚದ ಯೋಜನೆ ರೂಪಿಸಲಾಗಿದ್ದು, ವಿವಿಧ ಇಲಾಖೆ ಅನುದಾನ ಕ್ರೊಢೀಕರಿಸಲಾಗುತ್ತಿದೆ ಎಂದು ಶಾಸಕ ಗಾಲಿ ಜನಾರ್ದನರೆಡ್ಡಿ ಹೇಳಿದರು.
ತಾಲೂಕಿನ ಆಗೋಲಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುರುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಆಗೋಲಿ, ವಿಠಲಾಪುರ ವರೆಗಿನ ಮಲಕನಮಡಿ ಸಂಪರ್ಕಿಸುವ ರಸ್ತೆ ಅಭಿವೃದ್ಧಿಗೆ 2.3 ಕೋಟಿ ರೂ.ಮಂಜೂರಾಗಿದ್ದು, ಉಳಿದ ಗ್ರಾಮಗಳ ರಸ್ತೆ ಅಭಿವೃದ್ಧಿಗೂ ಪ್ರಸ್ತಾವನೆ ಸಲ್ಲಿಸಲಾಗಿದೆ. ಚುನಾವಣೆ ಪೂರ್ವದಲ್ಲಿ ನೀಡಿದ ಭರವಸೆಯಂತೆ ಕ್ಷೇತ್ರದಲ್ಲಿ ಮೂಲ ಸೌಕರ್ಯ ಒದಗಿಸಲಾಗುವುದು ಎಂದರು.
ಗ್ರಾಪಂ ಅಧ್ಯಕ್ಷ ಅಮಾಜಪ್ಪ, ಮುಖಂಡರಾದ ಹನುಮನಗೌಡ, ಮನೋಹರಗೌಡ ಹೇರೂರು, ಡಿ.ಕೆ. ಆಗೋಲಿ, ಯಮನೂರು ಚೌಡ್ಕಿ, ವೀರೇಶ್ ಬಲಕುಂದಿ, ಕರಿಯಪ್ಪ, ಬಸವರಾಜ್, ಲಿಂಗಪ್ಪ, ರಮೇಶ, ಯಂಕಪ್ಪ, ಸಣ್ಣದ್ಯಾಮಣ್ಣ ಇತರರಿದ್ದರು. ಇದೇ ವೇಳೆ ಸಿದ್ದಿಕೇರಿ ಮತ್ತು ಗುಂಡಮ್ಮ ಕ್ಯಾಂಪ್‌ನಲ್ಲಿ ಅಂಗನವಾಡಿ ಕೇಂದ್ರದ ಕಟ್ಟಡ, 13ನೇ ವಾರ್ಡ್‌ನಲ್ಲಿ ಕುಡಿವ ನೀರಿನ ಯೋಜನೆ ಉದ್ಘಾಟಿಸಲಾಯಿತು.
ತಾಲೂಕಾಡಳಿತ ಸೌಧದಲ್ಲಿ ಭೂ ಸುರಕ್ಷಾ ಯೋಜನೆಯ ಭೂ ದಾಖಲೆಗಳ ಇ ಖಜಾನೆಯ ಡಿಜಿಟಲೀಕರಣಕ್ಕೆ ಚಾಲನೆ ನೀಡಿದರು. ಯೋಜನೆ ಕುರಿತು ತಹಸೀಲ್ದಾರ್ ಯು.ನಾಗರಾಜ್ ಮಾಹಿತಿ ನೀಡಿದರು. ನಗರಸಭೆ ಅಧ್ಯಕ್ಷ ಮೌಲಸಾಬ್ ದಾದೇಸಾಬ್, ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ಚೌಡ್ಕಿ, ಗ್ರೇಡ್ 2 ತಹಸೀಲ್ದಾರ್ ಮಹಾಂತಗೌಡ ಗೌಡರ್ ಸೇರಿ ಆರ್‌ಐ ಮತ್ತು ವಿಎಗಳು ಭಾಗವಹಿಸಿದ್ದರು.