ಗಂಗಾವತಿ ಹಿರೇಜಂತಕಲ್ ಕುಂಬಾರ ಓಣಿ ಶ್ರೀ ಚನ್ನಬಸವೇಶ್ವರ ದೇವಾಲಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹಮ್ಮಿಕೊಂಡಿದ್ದ ಉದಯರಾಗ ಸಂಗೀತ ಕಾರ್ಯಕ್ರಮವನ್ನು ರೈತ ಮುಖಂಡ ಹಾಗೂ ಶ್ರೀ ಚನ್ನಬಸವೇಶ್ವರ ಟ್ರಸ್ಟ್ ಕಮಿಟಿ ಅಧ್ಯಕ್ಷ ಬಜಾರ ನಾರಾಯಣಪ್ಪ ಉದ್ಘಾಟಿಸಿದರು. ಮುಖಂಡರಾದ ಬಸಪ್ಪ ಆನೆಗೊಂದಿ, ಶಿವಮ್ಮ ಹಿರೇಮಠ, ಮಂಜುನಾಥ ಇತರರಿದ್ದರು. 
ಜಿಲ್ಲೆ

ಸಂಗೀತ ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ಮುಖ್ಯ

ಗಂಗಾವತಿ: ಏಕಾಗ್ರತೆ ಮತ್ತು ನಿರಂತರ ಕಲಿಕೆ ಮೂಲಕ ಸಂಗೀತ ಒಲಿಸಿಕೊಳ್ಳಬಹುದಾಗಿದ್ದು, ಮನಸ್ಸಿಗೆ ನೆಮ್ಮದಿ ನೀಡುವ ಶ್ರೇಷ್ಠ ಕಲೆ ಎಂದು ಶ್ರೀಚನ್ನಬಸವೇಶ್ವರ ಟ್ರಸ್ಟ್ ಕಮಿಟಿ ಅಧ್ಯಕ್ಷ ಬಜಾರ ನಾರಾಯಣಪ್ಪ ಹೇಳಿದರು.

ನಗರದ ಹಿರೇಜಂತಕಲ್ ಕುಂಬಾರ ಓಣಿ ಶ್ರೀಚನ್ನಬಸವೇಶ್ವರ ದೇವಾಲಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶ್ರೀಚನ್ನಬಸವೇಶ್ವರ ಟ್ರಸ್ಟ್ ಕಮಿಟಿ ಸಹಯೋಗದೊಂದಿಗೆ ಭಾನುವಾರ ಹಮ್ಮಿಕೊಂಡಿದ್ದ ಉದಯರಾಗ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಂಗೀತ ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ಮುಖ್ಯವಾಗಿದ್ದು, ಕಲೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಿದೆ. ಸಂಗಿತ ಕಾರ್ಯಕ್ರಮ ನಿರಂತರ ಆಯೋಜಿಸಿದರೆ ಹೊಸ ಪ್ರತಿಭೆಗಳಿಗೆ ಅವಕಾಶ ದೊರೆಯಲಿದೆ ಎಂದರು.ನಂತರ ಬಡೆದ ಉದಯರಾಗ ಕಾರ್ಯಕ್ರಮದಲ್ಲಿ ಕಲಾವಿದ ರಿಜ್ವಾನ್ ಮುದ್ದಾಬಳ್ಳಿ ಅವರು ಸುಗಮ ಸಂಗೀತ ಪ್ರಸ್ತುತಪಡಿಸಿದರು. ಕಲಾವಿದ ಯುವರಾಜ್ ಕುರಗೋಡು, ಪಂಚಾಕ್ಷರ ಬೊಮ್ಮಲಾಪುರ ಸಾಥ್ ನೀಡಿದರು. ಮುಖಂಡರಾದ ಬಸಪ್ಪ ಆನೆಗೊಂದಿ, ಶಿವಮ್ಮ ಹಿರೇಮಠ, ಮಂಜುನಾಥ, ತಾಂಜವೂರು ಅಕ್ಷಯಕುಮಾರ, ಶಿವಯ್ಯಸ್ವಾಮಿ, ಎನ್.ನಾಗರಾಜ, ಸಂದೇಶ ಹಿರೇಮಠ ಸೇರಿ ಸಂಗೀತ ಪಾಠಶಾಲೆ ವಿದ್ಯಾರ್ಥಿಗಳಿದ್ದರು.