ಗಂಗಾವತಿ ತಾಲೂಕಿನ ಶ್ರೀರಾಮನಗರದ ಸಿಎನ್‌ಆರ್ ಸರ್ಕಾರಿ ಪದವಿ ಕಾಲೇಜಿನಲ್ಲಿ ಆಯೋಜಿಸಿದ್ದ ಬಹುಬಗೆಯ ಉಪನ್ಯಾಸ ಮಾಲಿಕೆ ಕಾರ್ಯಕ್ರಮವನ್ನು ಪ್ರಾಚಾರ್ಯೆ ಕೆ.ಎಸ್.ಶೋಭಾ ಸೋಮವಾರ ಉದ್ಘಾಟಿಸಿದರು. ವಾಣಿಜ್ಯಶಾಸ ವಿಭಾಗದ ಮುಖ್ಯಸ್ಥ ಪ್ರೊ.ಕರಿಗೂಳಿ ಸುಂಕೇಶ್ವರ, ಇತಿಹಾಸ ವಿಭಾಗದ ಮುಖ್ಯಸ್ಥ ಶಂಕ್ರಪ್ಪ, ಉಪನ್ಯಾಸಕರಾದ ಶಿವಕುಮಾರ್ ಉಪಾಸಿ, ಬಾಳಪ್ಪ ಸುಳೇಕಲ್ ಇತರರಿದ್ದರು.  
ಜಿಲ್ಲೆ

ನಿರಂತರ ಕಲಿಕೆಯಿಂದ ನಿರೀಕ್ಷಿತ ಗುರಿ ತಲುಪಲು ಸಾಧ್ಯ, ಪ್ರಾಚಾರ್ಯೆ ಕೆ.ಎಸ್. ಶೋಭಾ ಅಭಿಮತ

ಕುರುವತ್ತಿ ಶ್ರೀಕಾಂತಪ್ಪ

ಗಂಗಾವತಿ: ಗುಣಾತ್ಮಕ ಶಿಕ್ಷಣದ ಮೂಲಕ ಭವಿಷ್ಯ ರೂಪಿಸಿಕೊಳ್ಳಬೇಕಿದ್ದು, ಶಿಸ್ತಿನಿಂದ ಕಲಿಕೆಯಲ್ಲಿ ಪಾಲ್ಗೊಳ್ಳಿ ಎಂದು ಸರ್ಕಾರಿ ಪದವಿ ಕಾಲೇಜಿನ ಪ್ರಾಚಾರ್ಯೆ ಕೆ.ಎಸ್. ಶೋಭಾ ಹೇಳಿದರು.

ತಾಲೂಕಿನ ಶ್ರೀರಾಮನಗರದ ಸಿಎನ್‌ಆರ್ ಸರ್ಕಾರಿ ಪದವಿ ಕಾಲೇಜಿನಲ್ಲಿ ಐಕ್ಯೂಎಸಿ ವಿಭಾಗದಡಿ ಸೋಮವಾರ ಆಯೋಜಿಸಿದ್ದ ಬಹುಬಗೆಯ ಉಪನ್ಯಾಸ ಮಾಲಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಿರಂತರ ಕಲಿಕೆಯಿಂದ ನಿರೀಕ್ಷಿತ ಗುರಿ ತಲುಪಲು ಸಾಧ್ಯ ಎಂದರು.

ವಾಣಿಜ್ಯಶಾಸ ವಿಭಾಗದ ಮುಖ್ಯಸ್ಥ ಪ್ರೊ.ಕರಿಗೂಳಿ ಸುಂಕೇಶ್ವರ ಮಾತನಾಡಿ, ವಿವಿಧ ವಿಷಯಗಳ ಉಪನ್ಯಾಸ ಮಾಲಿಕೆ ಬಹುಮುಖ ಅಭಿವ್ಯಕ್ತ ಅನಾವರಣಗೊಳಿಸುತ್ತಿದ್ದು, ವ್ಯಕ್ತಿತ್ವ ವಿಕಸನ ಸಾಧ್ಯ. ಸರ್ಕಾರಿ ಹಾಗೂ ಖಾಸಗಿ ಉದ್ಯೋಗಗಳ ಖಾತ್ರಿ ಪಡಿಸಿಕೊಳ್ಳಲು ವಿದ್ಯಾರ್ಥಿಗಳು ಈಗಿನಿಂದಲೇ ಸಿದ್ಧತೆ ಆರಂಭಿಸಬೇಕೆಂದರು. ಅಂಗ್ಲ ವಿಭಾಗದ ಸಹ ಪ್ರಾಧ್ಯಾಪಕ ಡಾ.ಸರ್ರಾಜ್ ಅಹ್ಮದ್, ಐಕ್ಯೂಎಸಿ ಸಂಯೋಜಕ ರವಿಕುಮಾರ್ ಮಾತನಾಡಿದರು.

ಇತಿಹಾಸ ವಿಭಾಗದ ಮುಖ್ಯಸ್ಥ ಶಂಕ್ರಪ್ಪ, ಸಂಪನ್ಮೂಲ ವ್ಯಕ್ತಿಗಳಾದ ಗಂಗಾವತಿ ಎಸ್‌ಕೆಎನ್‌ಜಿ ಕಾಲೇಜಿನ ಉಪನ್ಯಾಸಕ ಶಿವಕುಮಾರ್ ಉಪಾಸಿ, ಕನಕಗಿರಿ ಕಾಲೇಜಿನ ಉಪನ್ಯಾಸಕ ಬಾಳಪ್ಪ ಸುಳೇಕಲ್, ಸಹಾಯ ಪ್ರಾಧ್ಯಾಪಕರಾದ ಸೋಮಶೇಖರ್, ಕೆ.ತಾತಪ್ಪ, ಶಶಿಕುಮಾರ, ವೆಂಕಟರಾಜು, ಈಶಪ್ಪ ಮೇಟಿ, ದೇವರಾಜ್, ಪರಶುರಾಂ, ಸಂಧ್ಯಾ, ಪೀರಾವಲಿ, ದುರ್ಗಾಕೃಷ್ಣ, ವಿರೂಪಾಕ್ಷಪ್ಪ, ಜಬೀನಾಬೇಗಂ ಇತರರಿದ್ದರು.