ಗಂಗಾವತಿಯಲ್ಲಿ ಹಮ್ಮಿಕೊಂಡಿದ್ದ ಮಾದಕ ವಸ್ತುಗಳ ವಿರೋಧಿ ದಿನ ಜಾಗೃತಿ ಅಭಿಯಾನವನ್ನು ಗ್ರಾಮೀಣ ಪಿಐ ಸೋಮಶೇಖರ್ ಜುಟ್ಟಲ್ ಉದ್ಘಾಟಿಸಿದರ. ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ಪ್ರೊ.ಜಗದೇವಿ ಕಲಶೆಟ್ಟಿ, ಪಿಎಸೈ ಎಂ.ಅನ್ಸರ್‌ಸಾಬ್, ಪ್ರಾಧ್ಯಾಪಕರಾದ ಡಾ.ಇಮ್ಯಾನುಯೆಲ್ ಸಂಜಯಾನಂದ, ಡಾ.ರವಿಕಿರಣ, ಡಾ.ಸೋಮಶೇಖರ್ ಜೇಕಿನ್ ಇತರರಿದ್ದರು.  
ಜಿಲ್ಲೆ

ದುಶ್ಚ್ಚಟದಿಂದ ಆರೋಗ್ಯ ಹಾಳು, ಗ್ರಾಮೀಣ ಪಿಐ ಸೋಮಶೇಖರ ಜುಟ್ಟಲ್ ಅಭಿಮತ

ಗಂಗಾವತಿ: ಮಾದಕ ವಸ್ತುಗಳ ಬಳಕೆ ಅಪರಾಧವಾಗಿದ್ದು, ಆರೋಗ್ಯದ ಮೇಲೂ ಪರಿಣಾಮ ಬೀರಲಿದೆ ಎಂದು ಗ್ರಾಮೀಣ ಪಿಐ ಸೋಮಶೇಖರ ಜುಟ್ಟಲ್ ಹೇಳಿದರು.

ನಗರದ ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಪೊಲೀಸ್ ಇಲಾಖೆ ಮತ್ತು ಎನ್ನೆಸ್ಸೆಸ್ ಘಟಕದಿಂದ ಬುಧವಾರ ಹಮ್ಮಿಕೊಂಡಿದ್ದ ಮಾದಕ ವಸ್ತುಗಳ ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರುದ್ಧದ ಅಂತಾರಾಷ್ಟ್ರೀಯ ದಿನದ ಜಾಗೃತಿ ಅಭಿಯಾನದಲ್ಲಿ ಮಾತನಾಡಿದರು.

ಮಾದಕ ವಸ್ತುಗಳ ಸೇವನೆಗೊಳಗಾದರೆ ಹೊರಬರುವುದು ಕಷ್ಟವಾಗಲಿದ್ದು, ಮಾನಸಿಕ ಮತ್ತು ದೈಹಿಕ ಸ್ಥೀಮಿತತೆ ಕಳೆದುಕೊಳ್ಳುವ ಸಾಧ್ಯತೆಗಳಿವೆ. ದುಶ್ಚ್ಚಟಗಳಿಗೆ ಯುವಕರು ಬಲಿಯಾಗುತ್ತಿದ್ದು, ಅತಿಯಾದರೆ ಸಾಮಾನ್ಯ ವ್ಯಕ್ತಿಗಿಂತ ಮೂರು ಪಟ್ಟು ಹೆಚ್ಚು ಕಾಯಿಲೆಗಳಿಗೆ ಆಹ್ವಾನ ನೀಡಿದಂತಾಗುವುದು ಎಂದರು.

ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ಪ್ರೊ.ಜಗದೇವಿ ಕಲಶೆಟ್ಟ ಮಾತನಾಡಿ, ವಯಸ್ಸಿನಲ್ಲಿ ಉತ್ತಮ ಸಂಸ್ಕಾರ ಬೆಳೆಸಿಕೊಳ್ಳಬೇಕಿದ್ದು, ದುಶ್ಚಟಗಳಿಂದ ದೂರವಿರುವಂತೆ ಸಲಹೆ ನೀಡಿದರು.

ಪ್ರಾಧ್ಯಾಪಕರಾದ ಪ್ರೊ.ಸುಂಕೇಶ್ವರ ಕರಿಗೂಳಿ, ಡಾ.ಇಮ್ಯಾನುಯೆಲ್ ಸಂಜಯಾನಂದ, ಡಾ.ರವಿಕಿರಣ, ಡಾ.ಸೋಮಶೇಖರ್ ಜೇಕಿನ್, ಪಿಎಸ್‌ಐ ಎಂ.ಅನ್ಸರ್‌ಸಾಬ್, ಎಎಸ್‌ಐ ಮಂಜುನಾಥ ಹುಲ್ಲೂರು, ಪೇದೆಗಳಾದ ಬಸವರಾಜ ಚಿನ್ನೂರ್, ಮಾಸಪ್ಪ ಇತರರಿದ್ದರು.