ಗಂಗಾವತಿ: ಸಾಮರ್ಥ್ಯ ಸಾಬೀತಿನೊಂದಿಗೆ ನಿರೀಕ್ಷಿತ ಗುರಿ ತಲುಪಬೇಕಿದ್ದು, ನಿರ್ವಹಣೆ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಸಂಡೂರು ಸರ್ಕಾರಿ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಶಂಕರೇಗೌಡ ಹೇಳಿದರು.
ನಗರದ ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಬಿಬಿಎ ವಿಭಾಗ ಹಾಗೂ ಆಂತರಿಕ ಗುಣಮಟ್ಟ ಭರವಸೆ ಕೋಶದ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಯುವರ್ ಪೊಟೆನ್ಷಿಯಲ್ ನೇವಿಗೇಟಿಂಗ್ ರಿಲೇಷನ್‌ಶಿಪ್ ವಿಷಯ ಕುರಿತು ಉಪನ್ಯಾಸ ಕಾರ್ಯಾಗಾರದಲ್ಲಿ ಮಾತನಾಡಿದರು. ವಿವಿಧ ಸಂಬಂಧಗಳ ಬಲವರ್ಧನೆ ಮೂಲಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕಿದ್ದು, ಕುಟುಂಬ ಮತ್ತು ಹಿತೈಷಿಗಳೊಂದಿಗೆ ಉತ್ತಮ ಸಂಬಂಧ ಹೊಂದುವುದು ಮುಖ್ಯ ಎಂದರು.
ಪ್ರಾಚಾರ್ಯೆ ಡಾ.ಮುಮ್ತಾಜ್ ಬೇಗಂ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಗುರಿಯನ್ನಿಟ್ಟುಕೊಂಡು ಸಾಧಿಸುವ ಹಾದಿ ಕ್ರಮಿಸಿದಾಗ ಮಾತ್ರ ಸಾಮರ್ಥ್ಯದ ಬಗ್ಗೆ ನಂಬಿಕೆ ಹೆಚ್ಚಾಗಲಿದೆ ಎಂದರು.
ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಚಾಲಕ ಡಾ.ಶಿವರಾಜ ಗುರಿಕಾರ್ ಮಾತನಾಡಿದರು. ವಿದ್ಯಾರ್ಥಿಗಳ ಕ್ಷೇಮಾಭಿವದ್ಧಿ ಕೋಶದ ಸಂಯೋಜಕ ಅಣ್ಣೋಜಿ ರೆಡ್ಡಿ , ಬಿಬಿಎ ವಿಭಾಗದ ಮುಖ್ಯಸ್ಥೆ ಕೆ.ಎಂ.ಅನಿತಾ, ಪ್ರಾಧ್ಯಾಪಕರಾದ ಅಶ್ರ್ ಅಳ್ಳಳ್ಳಿ, ವಿ.ಪಿ.ವಿನಯಕುಮಾರ್, ಅಕ್ಕಿ ಮಾರುತಿ, ಕೆ.ರವಿಕುಮಾರ್ ಇತರರಿದ್ದರು.